Fruit peel for face:ಉತ್ತಮ ತ್ವಚೆ ಪಡೆಯಲು ಹೊರಗಿನ ದುಬಾರಿ ಉತ್ಪನ್ನಗಳಷ್ಟೇ ಅಲ್ಲದೆ ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಣ್ಣಿನ ಸಿಪ್ಪೆಯನ್ನು ಕೂಡ ಬಳಸಬಹುದು. ಈ ಲೇಖನದಲ್ಲಿ, ಚರ್ಮಕ್ಕೆ ಪ್ರಯೋಜನಕಾರಿಯಾದ 5 ಹಣ್ಣುಗಳ ಸಿಪ್ಪೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Skin Care Tips: ಮೊಡವೆಗಳನ್ನು ಸೌಂದರ್ಯದ ಶತ್ರು ಎಂದು ಪರಿಗಣಿಸಲಾಗುತ್ತದೆ. ಯುವಕ-ಯುವತಿಯರಲ್ಲಿ ಮೊಡವೆ ಬಂತೆಂದರೆ ಒಂದು ರೀತಿಯ ಟೆನ್ಶನ್ ಶುರು ಆಗುತ್ತೆ. ಆದರೆ, ಮೊಡವೆಗಳನ್ನು ಕಂಡ ಕ್ಷಣ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ.
Skin Care Tips: ಫೇಶಿಯಲ್ ಚರ್ಮದ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ನವೀಕರಿಸುತ್ತದೆ. ಫೇಶಿಯಲ್ ನಂತರ, ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಫೇಶಿಯಲ್ ಮಾಡಿಸಿದ ಬಳಿಕ ನೀವು ನಿಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಸ್ಕಿನ್ ಕೇರ್ ಟಿಪ್ಸ್: ಕಾಂತಿಯುತವಾದ ಸುಂದರ ತ್ವಚೆಗಾಗಿ ವಿಶೇಷ ಕಾಳಜಿ ಅಗತ್ಯ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಕಾಂತಿಯುತ ತ್ವಚೆಯನ್ನು ಪಡೆಯಲು ಸಹಕಾರಿ ಆಗಿವೆ. ನಿತ್ಯ ರಾತ್ರಿ ಮಲಗುವ ಮೊದಲು ಮುಖಕ್ಕೆ ಕೆಲವು ಪದಾರ್ಥಗಳನ್ನು ಹಚ್ಚುವುದರಿಂದ ಸುಂದರವಾದ ಹೊಳೆಯುವ ತ್ವಚೆ ಪಡೆಯಬಹುದು ಎಂದು ಹೇಳಲಾಗುತ್ತದೆ.
Banana Peel For Beauty : ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಮತ್ತು ಫೈಟೊನ್ಯೂಟ್ರಿಯೆಂಟ್ಗಳಿವೆ. ಅದು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ ಮತ್ತು ಅನೇಕ ಚರ್ಮದ ಕಾಯಿಲೆಗಳನ್ನು ಗುಣಪಡಿಸುತ್ತದೆ.
Skin Care: ಕಾಂತಿಯುತವಾದ ಸುಂದರವಾದ ತ್ವಚೆ ಬೇಕು ಎಂಬುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ, ಕೆಲವರು ತಪ್ಪು ಮಾಹಿತಿಯಿಂದಾಗಿ ಸಿಕ್ಕ ಸಿಕ್ಕ ಪದಾರ್ಥಗಳನ್ನು ಮುಖಕ್ಕೆ ಹಚ್ಚುತ್ತಾರೆ. ಇದರಿಂದ ತ್ವಚೆಗೆ ಹಾನಿಯಾಗಬಹುದು.
Soda Water Benefits: ಸೋಡಾ ವಾಟರ್ ಬಳಸಿಯೂ ಕೂಡ ಹೊಳಪಾದ ತ್ವಚೆಯನ್ನು ಪಡೆಯಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಸೋಡಾ ನೀರಿನಿಂದ ಮುಖ ತೊಳೆಯುವುದರಿಂದ ಆಗುವ ಲಾಭಗಳೇನು ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ
Skin Care: ಸುಂದರ ತ್ವಚೆಯನ್ನು ಪಡೆಯಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸಬೇಕು ಎಂದೇನಲ್ಲ, ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಯೂ ಕಲೆರಹಿತವಾದ ತ್ವಚೆಯನ್ನು ನಿಮ್ಮದಾಗಿಸಬಹುದು. ನೀವೂ ಸಹ ಸುಂದರವಾದ ಕಲೆ ರಹಿತ ತ್ವಚೆಯನ್ನು ಬಯಸಿದರೆ ಅದಕ್ಕಾಗಿ ರೋಸ್ ವಾಟರ್ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Fungal Infection: ಮಳೆಗಾಲದ ಋತುವಿನಲ್ಲಿ ಪಾದಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ, ವಾತಾವರಣದಲ್ಲಿ ತೇವಾಂಶವಿರುವ ಕಾರಣ ಮತ್ತು ಸತತ ಮಳೆ ಇರುವ ಕಾರಣ ಕಾಲುಗಳಲ್ಲಿ ಶಿಲೀಂಧ್ರಿ ಸೋಂಕಿನ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಬಚಾವಾಗಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಮೃದುವಾದ ಚರ್ಮಕ್ಕೆ ದಾಳಿಂಬೆ ಸಿಪ್ಪೆ: ನಿಷ್ಕಳಂಕವಾದ ಮೃದುವಾದ ತ್ವಚೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದಾಳಿಂಬೆ ಸಿಪ್ಪೆಯು ಸುಂದರ ತ್ವಚೆ ಪಡೆಯಲು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ದಾಳಿಂಬೆ ಸಿಪ್ಪೆಯನ್ನು ಹೇಗೆ ಬಳಸುವುದು ತಿಳಿಯಿರಿ.
Rice Flour Face Packs: ಅಕ್ಕಿ ಹಿಟ್ಟು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಅಕ್ಕಿಹಿಟ್ಟಿನಿಂದ ತಯಾರಿಸುತ್ತಾರೆ. ಆದರೆ ಇದರ ಹೊರತಾಗಿ ಅಕ್ಕಿ ಹಿಟ್ಟು ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಸಹ ಸಹಕಾರಿಯಾಗಿದೆ.
ಸ್ಕಿನ್ ಕೇರ್ ಟಿಪ್ಸ್: ಕಲೆ ರಹಿತ ತ್ವಚೆ ಯಾರಿಗೆ ತಾನೇ ಇಷ್ಟವಿಲ್ಲ. ಸುಂದರವಾದ ಕಲೆ ರಹಿತ ತ್ವಚೆ ಪಡೆಯಲು ಸಾಮಾನ್ಯವಾಗಿ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ, ಒಂದೇ ಒಂದು ವಸ್ತುವು ನಿಮಗೆ ಹೊಳೆಯುವ ಸುಂದರವಾದ ತ್ವಚೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಂತಹ ಒಂದು ಪದಾರ್ಥದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.
Aloe vera benefits: ಇತ್ತೀಚಿನ ದಿನಗಳಲ್ಲಿ ಅಲೋವೆರಾವನ್ನು ಸೌಂದರ್ಯ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯಕವಾಗಿವೆ.
Coffee Face Pack: ಕಾಫಿಯು ತ್ವಚೆಯನ್ನು ಕಾಂತಿಯುತಗೊಳಿಸುವ ಅದ್ಭುತ ಗುಣಗಳಿಂದ ಕೂಡಿದೆ. ವಾಸ್ತವವಾಗಿ, ಕಾಫಿಯನ್ನು ಫೇಸ್ ಪ್ಯಾಕ್ ಆಗಿ ಅನ್ವಯಿಸುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಚರ್ಮದ ಉರಿಯೂತ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.
Face Care: ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸದಿದ್ದರೆ, ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ನಿಮ್ಮ ಚರ್ಮದ ಮೇಲೆ ಮೊಡವೆಗಳನ್ನು ಉಂಟುಮಾಡಬಹುದು, ಮೊಡವೆ ಮುಕ್ತ ತ್ವಚೆಗಾಗಿ ಹೇಗೆ ಕಾಳಜಿ ವಹಿಸಬೇಕು ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.