ತ್ವಚೆಯ ಸೌಂದರ್ಯ ಹೆಚ್ಚಿಸಲು ದಾಳಿಂಬೆ ಸಿಪ್ಪೆಯನ್ನು ಈ ರೀತಿ ಬಳಸಿ

ಮೃದುವಾದ ಚರ್ಮಕ್ಕೆ ದಾಳಿಂಬೆ ಸಿಪ್ಪೆ:  ನಿಷ್ಕಳಂಕವಾದ ಮೃದುವಾದ ತ್ವಚೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದಾಳಿಂಬೆ ಸಿಪ್ಪೆಯು ಸುಂದರ ತ್ವಚೆ ಪಡೆಯಲು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ದಾಳಿಂಬೆ ಸಿಪ್ಪೆಯನ್ನು ಹೇಗೆ ಬಳಸುವುದು ತಿಳಿಯಿರಿ.

Written by - Yashaswini V | Last Updated : Jul 29, 2022, 11:56 AM IST
  • ದಾಳಿಂಬೆ ಸಿಪ್ಪೆಯು ಆಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳಂತಹ ಗುಣಗಳನ್ನು ಹೊಂದಿದೆ
  • ದಾಳಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ ಯಂತಹ ಪೋಷಕಾಂಶಗಳೂ ಸಮೃದ್ಧವಾಗಿವೆ
  • ಇದು ಮೊಡವೆ, ಸೂರ್ಯನ ಹಾನಿ ಮತ್ತು ಕಲೆಗಳನ್ನು ಅಳಿಸಿ ಹೊಳಪನ್ನು ನೀಡುತ್ತದೆ
ತ್ವಚೆಯ ಸೌಂದರ್ಯ ಹೆಚ್ಚಿಸಲು ದಾಳಿಂಬೆ ಸಿಪ್ಪೆಯನ್ನು ಈ ರೀತಿ ಬಳಸಿ  title=
Pomegranate peel benefits

ದಾಳಿಂಬೆ ಸಿಪ್ಪೆಯ ಪ್ರಯೋಜನಗಳು: ದಾಳಿಂಬೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ದಾಳಿಂಬೆ ಮಾತ್ರವಲ್ಲ ಅದರ ಸಿಪ್ಪೆಯಿಂದಲೂ ಬಹಳ ಉಪಯೋಗಗಳಿವೆ ಎಂದು ನಿಮಗೆ ತಿಳಿದಿದೆಯೇ? ದಾಳಿಂಬೆ ಸಿಪ್ಪೆ ಮತ್ತು ದಾಳಿಂಬೆ ಸಿಪ್ಪೆಯ ಪುಡಿ ಮುಖಕ್ಕೆ ತುಂಬಾ ಪ್ರಯೋಜನಕಾರಿ. ದಾಳಿಂಬೆ ಸಿಪ್ಪೆಯನ್ನು ಬಳಸಿ ತ್ವಚೆಯ ಸೌಂದರ್ಯ ಹೆಚ್ಚಿಸಬಹುದು. ತ್ವಚೆಯ ಆರೈಕೆಯಲ್ಲಿ ದಾಳಿಂಬೆ ಸಿಪ್ಪೆಯನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ...

ದಾಳಿಂಬೆಯನ್ನು ತಿನ್ನುವುದರಿಂದ ರಕ್ತದೊತ್ತಡ, ರಕ್ತದಲ್ಲಿನ ಗ್ಲೂಕೋಸ್, ರಕ್ತಹೀನತೆ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿವಾರಿಸಬಹುದು. ಅದೇ ಸಮಯದಲ್ಲಿ, ದಾಳಿಂಬೆ ಸಿಪ್ಪೆಯು ಆಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳಂತಹ ಗುಣಗಳನ್ನು ಹೊಂದಿದೆ, ಇದು ಮೊಡವೆ, ಸೂರ್ಯನ ಹಾನಿ ಮತ್ತು ಕಲೆಗಳನ್ನು ಅಳಿಸಿ ಹೊಳಪನ್ನು ನೀಡುತ್ತದೆ. ದಾಳಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ ಯಂತಹ ಪೋಷಕಾಂಶಗಳೂ ಸಮೃದ್ಧವಾಗಿವೆ. ದಾಳಿಂಬೆ ಸಿಪ್ಪೆಯನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ.

ಇದನ್ನೂ ಓದಿ- ವಿಟಮಿನ್ ಡಿ ಕೊರತೆಯನ್ನು ನೀಗಿಸುವುದು ಹೇಗೆ?

ಮೊಡವೆಗೆ ರಾಮಬಾಣ:
ಎಲ್ಲಾ ವಯಸ್ಕರಲ್ಲೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಮೊಡವೆ. ಮುಖದ ಮೇಲಿನ ಮೊಡವೆಗಳಿಗೆ ಚಿಕಿತ್ಸೆ ನೀಡಲು ದಾಳಿಂಬೆ ಸಿಪ್ಪೆಯ ಪುಡಿ ರಾಮಬಾಣವಿದ್ದಂತೆ. ದಾಳಿಂಬೆ ಸಿಪ್ಪೆಯಿಂದ ಸ್ಕ್ರಬ್ ಮಾಡಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತವೆ. ಇದಕ್ಕಾಗಿ, ದಾಳಿಂಬೆ ಸಿಪ್ಪೆಯ ಪುಡಿಯೊಂದಿಗೆ ಮೊಸರು ಮತ್ತು ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಚೆನ್ನಾಗಿ ಹಚ್ಚಿ ಮತ್ತು ಒಣಗಿದ ನಂತರ, ಈ ಪೇಸ್ಟ್ ಅನ್ನು ಕೈಗಳಿಂದ ಹಗುರವಾಗಿ ಮಸಾಜ್ ಮಾಡಿ. ಬಳಿಕ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.

ಸುಕ್ಕು ನಿವಾರಣೆ: 
ದಾಳಿಂಬೆ ಸಿಪ್ಪೆಗಳು ಸುಕ್ಕುಗಳನ್ನು ತೆಗೆದುಹಾಕಲು ಅತ್ಯುತ್ತಮ ಚಿಕಿತ್ಸೆಯಾಗಿದೆ. ಇದಕ್ಕಾಗಿ ದಾಳಿಂಬೆ ಸಿಪ್ಪೆಯ ವಿಶೇಷ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಇದಕ್ಕಾಗಿ  2 ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ದಾಳಿಂಬೆ ಸಿಪ್ಪೆಗಳ ಫೇಸ್ ಪ್ಯಾಕ್ ಒಣಗಿದಾಗ, ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ.

ಇದನ್ನೂ ಓದಿ- ಡಬಲ್ ಚಿನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಫೇಶಿಯಲ್ ಯೋಗ ಪ್ರಯತ್ನಿಸಿ

ದಾಳಿಂಬೆ ಸಿಪ್ಪೆಯಿಂದ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು. ದಾಳಿಂಬೆ ಸಿಪ್ಪೆಯ ಪುಡಿಯಲ್ಲಿ ಜೇನುತುಪ್ಪ, ಹಸಿ ಹಾಲು ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಗಳನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ತ್ವಚೆಯ ಶುಷ್ಕತೆ ದೂರವಾಗಿ ಚರ್ಮ ಮೃದುವಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News