ಹೈದರಾಬಾದ್ ಮರ್ಡರ್ ಕೇಸ್: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಂತೆಯೇ ಹೈದರಾಬಾದ್ನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಸಂಗಾತಿಯನ್ನು ಕೊಂದು ದೇಹವನ್ನು ಹಲವು ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ.
ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ದೆಹಲಿ ಪೊಲೀಸರು ಶ್ರದ್ಧಾ ಅವರ ಫೋನ್ನ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ವರದಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಶ್ರದ್ಧಾ ಫೋನ್ನ ಕೊನೆಯ ಲೊಕೇಶನ್ ಮೇ 18 ಮತ್ತು 19 ರಂದು ಮೆಹ್ರೌಲಿಯ ಛತ್ತರ್ಪುರ ಎಂಬ ವಿಚಾರ ವರದಿಯಿಂದ ಬಹಿರಂಗವಾಗಿದೆ.
Shraddha Walker Aftab Amin Poonawala Case: ಈ ಬೆಳವಣಿಗೆ ಬೆನ್ನಲ್ಲೇ ಸಂಚಲನ ಮೂಡಿಸುವ ವಿಚಾರವೊಂದು ಬೆಳಕಿಗೆ ಬಂದಿದ್ದು, 2020 ರಲ್ಲಿ, ಶ್ರದ್ಧಾ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಅಫ್ತಾಬ್ ವಿರುದ್ಧ ದೂರು ದಾಖಲಿಸಿದ್ದಳು. ಅಫ್ತಾಬ್ ಫೋನ್ ನಂಬರ್ ನ್ನು ಪೊಲೀಸರಿಗೆ ನೀಡಿ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು
Shraddha Murder Case: ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ದವಡೆಯ ಭಾಗ ಸೇರಿದಂತೆ 18 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಳೆಗಳನ್ನು ದೆಹಲಿಯ ಮೆಹ್ರೌಲಿ, ಛತ್ತರ್ಪುರ, ಮೈದಂಗರಿ ಮತ್ತು ಗುರುಗ್ರಾಮ್ನಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಮೂಳೆಗಳು ಮನುಷ್ಯರದ್ದೋ ಅಲ್ಲವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Shraddha Murder Case: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇದು ಒಂದು ರೀತಿಯ ಪ್ರಚಾರದ ಹಿತಾಸಕ್ತಿ ಮೊಕದ್ದಮೆಯಾಗಿದೆ ಏಕೆಂದರೆ ಮೃತ ಪೋಷಕರಿಗೆ ದೆಹಲಿ ಪೊಲೀಸ್ ತನಿಖೆಯ ವಿರುದ್ಧ ಯಾವುದೇ ಕುಂದುಕೊರತೆ ಇಲ್ಲ ಆದರೆ ನೀವು ಹೊಂದಿದ್ದೀರಿ. ನಾವು ತನಿಖಾ ಮೇಲ್ವಿಚಾರಣಾ ಸಂಸ್ಥೆ ಅಲ್ಲ" ಎಂದು ನ್ಯಾಯಾಲಯ ಹೇಳಿದೆ.
Shraddha Murder Case: ಮೂಲಗಳ ಪ್ರಕಾರ, ದೆಹಲಿ ಪೊಲೀಸರು ನಾರ್ಕೋ ಪರೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಸುಮಾರು 50 ಪ್ರಶ್ನೆಗಳನ್ನು ಸೇರಿಸಲಾಗಿದೆ. ಅಫ್ತಾಬ್ ನನ್ನು ಕೇಳಬಹುದಾದ ಪ್ರಶ್ನೆಗಳು ಇಲ್ಲಿವೆ:
Shraddha Murder Case: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಬೆಳಗ್ಗೆ ಮನೆಯ ಹೊರಗೆ ಬ್ಯಾಗ್ ಸಮೇತ ತಿರುಗಾಡುತ್ತಿದ್ದ ದೃಶ್ಯಗಳು ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಯಿಂದ ಇದು ಬಹಿರಂಗವಾಗಿದೆ. ಈತ ಶ್ರದ್ಧಾ ವಾಕರ್ ಅವರ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.
Shraddha Murder Case : ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಏತನ್ಮಧ್ಯೆ, ಬಾಲಿವುಡ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರವನ್ನು ಮಾಡುವುದಾಗಿ ಘೋಷಿಸಿದೆ. ಇಂಡಿಯಾ ಹೆರಾಲ್ಡ್ ವರದಿಯ ಪ್ರಕಾರ, ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಕುರಿತು ಚಲನಚಿತ್ರ ನಿರ್ಮಾಣವಾಗಲಿದೆ.
ಅಫ್ತಾಬ್ ಪೂನಾವಾಲಾ ಮೇ 18ರಂದು ಶ್ರದ್ಧಾ(27)ಳನ್ನು ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ. ಸದ್ಯ ಅಫ್ತಾಬ್ ದೆಹಲಿ ಪೊಲೀಸರ ವಶದಲ್ಲಿದ್ದಾನೆ.
Shraddha Murder Case: ಹೃದಯ ವಿದ್ರಾವಕ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದಿನೆ ದಿನೇ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅಫ್ತಾಬ್ನ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆತನ ನಾರ್ಕೋ ಟೆಸ್ಟ್ ಮಾಡಲಾಗುವುದು, ನಂತರ ಕೊಲೆಯ ಬಗ್ಗೆ ಹಲವು ಬಹಿರಂಗವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.