Shraddha Murder Case: ಎರಡು ವರ್ಷ ಹಿಂದೆಯೇ ಕೊಲೆ ಬೆದರಿಕೆ ದೂರು ನೀಡಿದ್ದ ಶ್ರದ್ಧಾ! ಆದರೆ ಆ ಬಳಿಕ ನಡೆದಿದ್ದೇ ಘೋರ

Shraddha Walker Aftab Amin Poonawala Case: ಈ ಬೆಳವಣಿಗೆ ಬೆನ್ನಲ್ಲೇ ಸಂಚಲನ ಮೂಡಿಸುವ ವಿಚಾರವೊಂದು ಬೆಳಕಿಗೆ ಬಂದಿದ್ದು, 2020 ರಲ್ಲಿ, ಶ್ರದ್ಧಾ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಅಫ್ತಾಬ್ ವಿರುದ್ಧ ದೂರು ದಾಖಲಿಸಿದ್ದಳು. ಅಫ್ತಾಬ್ ಫೋನ್ ನಂಬರ್ ನ್ನು ಪೊಲೀಸರಿಗೆ ನೀಡಿ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು

Written by - Bhavishya Shetty | Last Updated : Nov 23, 2022, 01:39 PM IST
    • ಅಫ್ತಾಬ್ ಅಮೀನ್ ಪೂನಾವಾಲಾ ದೆಹಲಿ ನ್ಯಾಯಾಲಯಕ್ಕೆ ಹಾಜರು
    • 2020ರಲ್ಲಿ ಅಫ್ತಾಬ್ ವಿರುದ್ಧ ದೂರು ದಾಖಲಿಸಿದ್ದ ಶ್ರದ್ಧಾ
    • ಅಫ್ತಾಬ್‌ನ ಪೊಲೀಸ್ ಕಸ್ಟಡಿ ಅವಧಿ 4 ದಿನಗಳವರೆಗೆ ವಿಸ್ತರಣೆ
Shraddha Murder Case: ಎರಡು ವರ್ಷ ಹಿಂದೆಯೇ ಕೊಲೆ ಬೆದರಿಕೆ ದೂರು ನೀಡಿದ್ದ ಶ್ರದ್ಧಾ! ಆದರೆ ಆ ಬಳಿಕ ನಡೆದಿದ್ದೇ ಘೋರ title=
Shraddha murder case

Shraddha Walker Aftab Amin Poonawala Case: ಶ್ರದ್ಧಾ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಈ ಪ್ರಕರಣದಲ್ಲಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಶ್ರದ್ಧಾಳನ್ನು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯವು ಅಫ್ತಾಬ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ 4 ದಿನಗಳವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: Traffic Constable Saves Life: ವಿದ್ಯುತ್ ಸ್ಪರ್ಶಗೊಂಡು ಒದ್ದಾಡುತ್ತಿದ್ದಾತನ ಪ್ರಾಣ ಕಾಪಾಡಿದ ಟ್ರಾಫಿಕ್ ಪೊಲೀಸ್

ಈ ಬೆಳವಣಿಗೆ ಬೆನ್ನಲ್ಲೇ ಸಂಚಲನ ಮೂಡಿಸುವ ವಿಚಾರವೊಂದು ಬೆಳಕಿಗೆ ಬಂದಿದ್ದು, 2020 ರಲ್ಲಿ, ಶ್ರದ್ಧಾ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಅಫ್ತಾಬ್ ವಿರುದ್ಧ ದೂರು ದಾಖಲಿಸಿದ್ದಳು. ಅಫ್ತಾಬ್ ಫೋನ್ ನಂಬರ್ ನ್ನು ಪೊಲೀಸರಿಗೆ ನೀಡಿ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು. ಆ ಸಂದರ್ಭದಲ್ಲಿ ತಾನು ಬಿ-302, ರೀಗಲ್ ಅಪಾರ್ಟ್‌ಮೆಂಟ್, ವಿಜಯ್ ನಿಹಾರ್ ಕಾಂಪ್ಲೆಕ್ಸ್‌ನಲ್ಲಿ ವಾಸವಾಗಿರುವುದಾಗಿ ಶ್ರದ್ಧಾ ತಿಳಿಸಿದ್ದು, ಅಫ್ತಾಬ್ ತನ್ನನ್ನು ಪ್ರತೀ ದಿನ ಥಳಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು.

ಅಷ್ಟೇ ಅಲ್ಲದೆಮ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದು, ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ತುಂಡು ತುಂಡಾಗಿ ಕತ್ತರಿಸಿ ಎಸೆಯುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ ಶ್ರದ್ಧಾ. ನಾವಿಬ್ಬರು ಒಟ್ಟಾಗಿ ವಾಸ ಮಾಡುವುದು ಅಫ್ತಾಬ್ ಮನೆಯವರಿಗೆ ತಿಳಿದಿದೆ. ಅವರು ವೀಕೆಂಡ್ ನಲ್ಲಿ ಬಂದು ಹೋಗುತ್ತಿದ್ದರು. ಆದರೆ ನಾನು ಅವನು ನೀಡುವ ದೈಹಿಕ ಹಿಂಸೆಯನ್ನು ಸಹಿಸಲಾರೆ. ಆತನ ಜೊತೆ ಬಾಳುವುದಿಲ್ಲ” ಎಂದು ಹೇಳಿದ್ದಾಳೆ. ಈ ಪ್ರಕರಣದಲ್ಲಿ ಅಫ್ತಾಬ್‌ಗೆ ಪೊಲೀಸರು ಸಮನ್ಸ್ ನೀಡಿದ್ದರು.

ಇದನ್ನು ತಿಳಿದ ಅಫ್ತಾಬ್ ಪೋಷಕರು ಪ್ರಕರಣವನ್ನು ಹಿಂಪಡೆಯುವಂತೆ ಶ್ರದ್ಧಾಗೆ ಮನವಿ ಮಾಡಿದ್ದರು. ಅವರ ಮಾತು ಕೇಳಿ ಶ್ರದ್ಧಾ ದೂರನ್ನು ಹಿಂಪಡೆದಿದ್ದಳು. ಇದಾದ ನಂತರ ಅಫ್ತಾಬ್‌ನನ್ನು ಪೊಲೀಸರು ವಿಚಾರಣೆ ನಡೆಸದೆ ಕಳುಹಿಸಿದ್ದರು. ಕೇಸ್ ಹಿಂಪಡೆಯುವ ಮೂಲಕ ಶ್ರದ್ಧಾ ತಪ್ಪು ಮಾಡಿದಂತಿದೆ.

ಇದನ್ನೂ ಓದಿ: Peacock Viral Video: ಹಚ್ಚ ಹಸಿರಿನ ಮಧ್ಯೆ ಗರಿಬಿಚ್ಚಿ ಕುಣಿದಾಡಿದ ನವಿಲು: ಎಷ್ಟೊಂದು ಸುಂದರ ಈ ದೃಶ್ಯ

ಇದೀಗ ಅಫ್ತಾಬ್ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೃತ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದಿದ್ದಾನೆ. ಬಂಧಿತ ಆರೋಪಿಯಿಂದ ಪೊಲೀಸರು ಮಹತ್ವದ ಮಾಹಿತಿ ಪಡೆಯುತ್ತಿದ್ದು, ಇಂದು ಆತನಿಗೆ ನಾರ್ಕೋ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News