ಟೈಂ ಪಾಸ್ಗಾಗಿ ಬರೆದ ಪುಸ್ತಕಗಳು ಇಂದು ಗ್ರಂಥಗಳಾಗಿವೆ. ಅವೇ ಗ್ರಂಥಗಳು ಇಂದು ನಮ್ಮನ್ನು ಆಳುವಂತಾಗಿದೆ. ಕೈ, ಕಾಲಿಗೆ ಬೇಡಿ ಹಾಕಿಲ್ಲ, ಮೆದುಳಿಗೆ ಬೇಡಿ ಹಾಕಿದ್ದಾರೆ ಎಂದು ಪರೋಕ್ಷವಾಗಿ ಆರ್ಎಸ್ಎಸ್ ಮೇಲೆ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ರಮೇಶ್ ಜಾರಕಿಹೊಳಿಗೆ ಸರ್ಕಾರ ಉರಳಿಸುವ ಶಕ್ತಿ ಇದೆ,ಅವರು ಇನ್ನೊಮ್ಮೆ ಸರ್ಕಾರ ಉರಳಿಸುವ ಪ್ರಯತ್ನ ಮಾಡಲಿ ಎಂದು ನಾವೆಲ್ಲ ಪ್ರಾರ್ಥಿಸೋಣ ಎಂದು ಸಹೋದರ ರಮೇಶ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಲೆಳೆದಿದ್ದಾರೆ.
ಸಿದ್ದರಾಮೋತ್ಸವ ಅಭಿಮಾನಿಗಳ ಬ್ಯಾನರ್ನಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮೋತ್ಸ ಮೊದಲು ಪಕ್ಷದ ಬದಲಾಗಿ ಅಭಿಮಾನಿ ಸಂಘದಿಂದ ಮಾಡುವ ನಿರ್ಧಾರ ಆಗಿತ್ತು. ಈಗ ಅಧ್ಯಕ್ಷರು ನಾವು ಕೂಡಾ ಪಕ್ಷದಿಂದ ಬೆಂಬಲಿಸುತ್ತೇವೆ ಅಂತಾ ಹೇಳಿದ್ದಾರೆ ಎಂದರು.. ಇದೇ 13 ರಂದು ಬೆಂಗಳೂರಲ್ಲಿ ನಡೆಯೋ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯಲಿದೆ ಅಂತಾ ಹೇಳಿದ್ರು.
ಸಿದ್ದರಾಮಯ್ಯ ಹಾಗೂ ನನ್ನ ಮಧ್ಯೆ ಮನಸ್ತಾಪವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ನಾವು ಪಕ್ಷದಲ್ಲಿಯೇ ಇದ್ದೇವೆ. ಅವರು ನಮ್ಮ ಜೊತೆಗೇ ಇದ್ದಾರೆ ಎಂದಿದ್ದಾರೆ. ಅವರೊಂದಿಗೆ ಹಿಂದೆಯೂ ಇದ್ವಿ, ಈಗಲೂ ಇದ್ವಿ, ಮುಂದೆಯೂ ಇರ್ತೇವೆ ಎಂದಿದ್ದಾರೆ. ಕಡೆಗಣನೆ ವಿಚಾರದ ಬಗ್ಗೆಯೂ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಜನವರಿಯಿಂದ ಪಕ್ಷಾಂತರ ಪರ್ವ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಆರಂಭವಾಗಲಿದೆ. ಒಮ್ಮೊಮ್ಮೆ ಬುಕ್ಕಿಂಗ್ ಮಾಡ್ತಾರೆ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡ್ತಾರೆ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ದೇಶದೆಲ್ಲೆಡೆ ಈಗ ಕಾಶ್ಮೀರ ಫೈಲ್ಸ್ (The Kashmir Files) ಚಿತ್ರದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಕಾಶ್ಮೀರ ಫೈಲ್ಸ್ ಕುರಿತು ನಡೆಯುತ್ತಿರುವ ಚರ್ಚೆಯಂತೆ ಈಗ ದಲಿತ ಫೈಲ್, ಬಸವಣ್ಣ ಫೈಲ್ , ಜೈನ್ ಫೈಲ್ ಗಳ ಕುರಿತಾಗಿ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.
130 ಸೀಟು ಗೆಲ್ತೀವಿ ಎಂಬ ಬಿಜೆಪಿ (BJP) ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ನಾವು ಗಟ್ಟಿಯಾಗಿದ್ದೇವೆ. ಬೇರೆ ರಾಜ್ಯಕ್ಕೆ ಕರ್ನಾಟಕಕ್ಕೆ ಹೋಲಿಕೆ ಮಾಡಬಾರದು. ಇವತ್ತಿಗೆ ಅವರು 70-80 ಸೀಟಿನಲ್ಲಿದ್ದಾರೆ. ಮುಂದೆ ನೋಡೊಣಾ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.