ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ಭಾರತೀಯ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿರ್ದೇಶನದ ಜೊತೆ ನಟಿಸಿ ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಕುರಿತು ಮಾತನಾಡಿ, ಸಿನಿಮಾಗಳು ಭಾಷೆಯ ಗಡಿ ದಾಟುತ್ತಿವೆ. ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾದ್ರೆ ಸಾಕು ತಾನಾಗಿಯೇ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪುತ್ತದೆ ಎಂದು ಹೇಳಿದ್ದಾರೆ.
ಕಾಪಿರೈಟ್ ಕೇಸ್ ಎದುರಿಸುತ್ತಿದ್ದ ಕಾಂತಾರ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ವರಾಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ನೀಡಿದ್ದ ಅದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಇದರಿಂದ ಹೊಂಬಾಳೆ ಫಿಲಂಸ್ಗೆ ಗೆಲುವು ಲಭಿಸಿದಂತಾಗಿದೆ.
Rishab Shetty on Rashmika Mandanna : ಕನ್ನಡದ ನಟ ರಿಷಬ್ ಶೆಟ್ಟಿ ಈಗ ಕಾಂತಾರ ಸಿನಿಮಾ ಮೂಲಕ ಮನೆಮಾತಾಗಿದ್ದಾರೆ. ಈ ಸಿನಿಮಾ ಭಾರತೀಯರ ಹೃದಯವನ್ನು ಗೆದ್ದಿದೆ. ಇದೀಗ ರಿಷಬ್ ಶೆಟ್ಟಿಯ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಅವರು Gulte.com ನೊಂದಿಗೆ ಮಾತನಾಡುವಾಗ, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಮತ್ತು ಸಮಂತಾ ರುತ್ ಪ್ರಭು ಈ ಪೈಕಿ ನಿಮ್ಮ ನೆಚ್ಚಿನ ನಟಿ ಯಾರೆಂದು ಕೇಳಿದಾಗ ಅವರು ಕೊಟ್ಟ ಉತ್ತರ ಎಲ್ಲಡೆ ವೈರಲ್ ಆಗುತ್ತಿದೆ.
ಹೊಂಬಾಳೆ ಫಿಲಂಸ್ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ ʼಧೂಮಂʼ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಶೂಟಿಂಗ್ ಸ್ಪಾಟ್ಗೆ ರಿಷಭ್ ಶೆಟ್ಟಿ, ಸಪ್ತಮಿ ಗೌಡ ಭೇಟಿ ನೀಡಿ ಚಿತ್ರತಂಡದ ಜೊತೆ ಕೆಲ ಕಾಲ ಕಳೆದರು.
ದೇಶಾದ್ಯಂತ ಅಬ್ಬರಿಸಿದ ಕನ್ನಡಿಗನ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇದೀಗ ಓಟಿಟಿಯಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಲು ಸಿದ್ದವಾಗಿದೆ. ನಾಳೆ ಅಂದ್ರೆ ನ.24 ರಂದು ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದ್ದು, ಈ ಕುರಿತು ಸ್ವತಃ ಓಟಿಟಿ ಅಮೆಜಾನ್ ಪ್ರೈಮ್ ಇಂಡಿಯಾ ಅಧಿಕೃತವಾಗಿ ಮಾಹಿತಿ ನೀಡಿದೆ.
Kamal Hasan Watched Kantara : ರಿಷಬ್ ಶೆಟ್ಟಿ ಕರಿಯರ್ನಲ್ಲಿ ಸೂಪರ್ ಹಿಟ್ ಕೊಟ್ಟ ಸಿನಿಮಾ ಕಾಂತಾರ. ಇದನ್ನು ನೋಡಿದ ಯಾರೂ ಹೊಗಳದೆ ಬಿಟ್ಟಿಲ್ಲ. ಎಲ್ಲರ ಬಾಯಲ್ಲೂ ಮೆಚ್ಚುಗೆಯ ಮಾತುಗಳನ್ನೇ ಪಡೆದಿರುವ ಕಾಂತಾರ ಅನೇಕರ ಗಮನಸೆಳೆದಿದೆ. ಕಡಿಮೆ ಬಜೆಟ್ನಲ್ಲಿ ರೆಡಿಯಾಗಿದ್ದರೂ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ.
Kantara Records : ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಕಾಂತಾರ ಸಿನಿಮಾವನ್ನು ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಕಾಂತಾರ ಚಿತ್ರ ಹಲವು ದಾಖಲೆಗಳನ್ನು ಮುರಿದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಆ ಚಿತ್ರ ತೆಲುಗಿನಲ್ಲಿ ಅಪರೂಪದ ದಾಖಲೆ ಬರೆದಿದೆ.
ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ. ರೈತರು ಮತ್ತು ಬುಡಕಟ್ಟು ಜನರ ಭೂಮಿ ಸಮಸ್ಯೆಯನ್ನು ಸಾಂಸ್ಕೃತಿಕ ಅಂಶಗಳೊಂದಿಗೆ ತೋರಿಸುವ ಚಿತ್ರವಾಗಿ ಕಾಂತಾರ ಮೋಡಿ ಮಾಡಿದೆ. ಕಿಶೋರ್, ಸಪ್ತಮಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯದಲ್ಲಿ ಚಿತ್ರಕ್ಕೆ ಸಿಕ್ಕ ಭಾರೀ ರೆಸ್ಪಾನ್ಸ್ ನಂತರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಸಿನಿಮಾವನ್ನು ಅನುವಾದ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಭಾರತದ ದರ್ಶನ ಮಾಡಿರುವ ಕಾಂತಾರದ ಶಿವ, ಲೀಲಾ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಕಾಂತಾರ ಸಿನಿಮಾಗೆ ಪ್ರೇಕ್ಷಕ, ವಿಮರ್ಶಕರು ಸೇರಿದಂತೆ ನಟ, ನಟಿಯರು, ರಾಜಕೀಯ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿಯವರನ್ನು ಮನೆಗೆ ಕರೆಯಿಸಿ ಅಭಿನಂದನೆಗಳನ್ನು ತಿಳಿಸಿ ಗೋಲ್ಡನ್ ಚೈನ್ ಒಂದನ್ನು ಉಡುಗೂರೆಯಾಗಿ ನೀಡಿದ್ದರು.
ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರ ಇಂದಿಗೂ ಯಶಸ್ವಿಯಾಗಿ ಓಡುತ್ತಿದೆ. ಉತ್ತರ, ದಕ್ಷಿಣ ಎಂಬ ಭೇದವಿಲ್ಲದೆ ಎಲ್ಲ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಹದಿನೈದು ಕೋಟಿಯಲ್ಲಿ ತಯಾರಾದ ಈ ಚಿತ್ರ ಈಗ ನಾನೂರು ಕೋಟಿ ಕ್ಲಬ್ ಸೇರಿದೆ. ಕಾಂತಾರ ಈ ಸಿನಿಮಾಗೆ ರೇಂಜ್ಗೆ ಯಶಸ್ವಿಯಾಗಲು ಕಾರಣ ರಿಷಬ್ ಶೆಟ್ಟಿ ಹಾಗೂ ಅವರ ನಟನೆ ಮತ್ತು ನಿರ್ದೇಶನ.
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 350 ಕೋಟಿ ಗಡಿ ದಾಟಿದೆ. ಈಗ ಆರನೇ ವಾರ ದಾಟಿ ಏಳನೇ ವಾರದತ್ತ ಮುನ್ನುಗ್ಗುತ್ತಿರುವ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿಲ್ಲದ ಕುದುರೆಯಾಗಿದೆ. ಅಚ್ಚರಿ ಎಂದರೆ ಕನ್ನಡ ಮಾರುಕಟ್ಟೆ ನಂತರ ಹಿಂದಿ ಆವೃತ್ತಿಯಲ್ಲಿಕೂಡ ಭಾರಿ ಸದ್ದು ಮಾಡುತ್ತಿದೆ.
Rishab Shetty : ಇತ್ತೀಚಿನ ಕನ್ನಡ ಚಲನಚಿತ್ರೋದ್ಯಮದ ಸೂಪರ್ ಹಿಟ್ ಸಿನಿಮಾ ಕಾಂತಾರ, ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತನ್ನನ್ನು "ಹೆಮ್ಮೆಯ ಕನ್ನಡಿಗ" ಎಂದು ಕರೆದುಕೊಂಡ ರಿಷಬ್ ಶೆಟ್ಟಿ, ತಾವು ಕನ್ನಡ ಚಲನಚಿತ್ರಗಳನ್ನು ಮಾತ್ರ ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.