ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಕಾಂತಾರ ಅಶ್ವಮೇಧಯಾಗ....!

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ಗಡಿ ದಾಟಿದೆ. ಈಗ ಆರನೇ ವಾರ ದಾಟಿ ಏಳನೇ ವಾರದತ್ತ ಮುನ್ನುಗ್ಗುತ್ತಿರುವ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿಲ್ಲದ ಕುದುರೆಯಾಗಿದೆ. ಅಚ್ಚರಿ ಎಂದರೆ ಕನ್ನಡ ಮಾರುಕಟ್ಟೆ ನಂತರ ಹಿಂದಿ ಆವೃತ್ತಿಯಲ್ಲಿಕೂಡ ಭಾರಿ ಸದ್ದು ಮಾಡುತ್ತಿದೆ.

Written by - Zee Kannada News Desk | Last Updated : Nov 9, 2022, 09:55 PM IST
  • ಇದು ಈಗಾಗಲೇ ಸಾರ್ವಕಾಲಿಕ 2 ನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಲನಚಿತ್ರವಾಗಿದೆ
  • ಈ ವರ್ಷ 2 ನೇ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವಾಗಿದೆ.
  • ಕಾಂತಾರ ಹಿಂದಿ ಆವೃತ್ತಿಯು ಸಿನಿಪ್ರಿಯರ ಹೃದಯವನ್ನು ಗೆದ್ದಂತೆ ತೋರುತ್ತಿದೆ
   ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಕಾಂತಾರ ಅಶ್ವಮೇಧಯಾಗ....! title=
file photo

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ಗಡಿ ದಾಟಿದೆ. ಈಗ ಆರನೇ ವಾರ ದಾಟಿ ಏಳನೇ ವಾರದತ್ತ ಮುನ್ನುಗ್ಗುತ್ತಿರುವ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿಲ್ಲದ ಕುದುರೆಯಾಗಿದೆ. ಅಚ್ಚರಿ ಎಂದರೆ ಕನ್ನಡ ಮಾರುಕಟ್ಟೆ ನಂತರ ಹಿಂದಿ ಆವೃತ್ತಿಯಲ್ಲಿಕೂಡ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: "ತ್ರಿಬಲ್ ರೈಡಿಂಗ್" ನಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್" ಹಾಡಿಗೆ ಗೋಲ್ಡನ್ ಸ್ಟಾರ್ ಸಖತ್ ಸ್ಟೆಪ್ಸ್

ಸುಮಾರು 16 ಕೋಟಿ ರೂ ಬಜೆಟ್ ನದ್ದು ಎಂದು ಹೇಳಲಾದ ಈ ಚಿತ್ರವು ಈಗ ಜನರ ಬಾಯಿಯಿಂದ ಬಾಯಿಗೆ ಹರಡಿ ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಇತ್ತೀಚಿನ ವ್ಯಾಪಾರ ವರದಿಗಳ ಪ್ರಕಾರ, ಕಾಂತಾರ 40 ದಿನಗಳಲ್ಲಿ ವಿಶ್ವಾದ್ಯಂತ ₹ 350 ಕೋಟಿ ಗಳಿಸಿದೆ (6 ನೇ ಮಂಗಳವಾರ) ಹಿಂದಿಯಲ್ಲಿ ₹ 322.9 ಕೋಟಿ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ₹ 27.5 ಕೋಟಿ ಒಳಗೊಂಡಿದೆ.

ಇದನ್ನೂ ಓದಿ: Alia Bhatt Baby : ಆಲಿಯಾ ಭಟ್ - ರಣಬೀರ್ ಕಪೂರ್ ಮಗುವಿನ ಫೋಟೋ ವೈರಲ್!?

ಇದು ಈಗಾಗಲೇ ಸಾರ್ವಕಾಲಿಕ 2 ನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಲನಚಿತ್ರವಾಗಿದೆ ಮತ್ತು ಈ ವರ್ಷ 2 ನೇ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವಾಗಿದೆ. ಕಾಂತಾರ ಹಿಂದಿ ಆವೃತ್ತಿಯು ಸಿನಿಪ್ರಿಯರ ಹೃದಯವನ್ನು ಗೆದ್ದಂತೆ ತೋರುತ್ತಿದೆ, ಡಬ್ಬಿಂಗ್ ಹಿಂದಿ ಆವೃತ್ತಿಯು ಇದುವರೆಗೆ ಬಾಕ್ಸ್ ಆಫೀಸ್ ನಲ್ಲಿ 67 ಕೋಟಿ ಗಳಿಸಿದೆ.ಅಂತಿಮವಾಗಿ ಇದು 80-85 ಕೋಟಿ ರೂ ವರೆಗೂ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Rashmika Mandana : ಟ್ರೋಲ್‌ಗಳ ಬಗ್ಗೆ ರಶ್ಮಿಕಾ ಮಂದಣ್ಣ ಬೇಸರ.. ಸುದೀರ್ಘ ಟಿಪ್ಪಣಿ ಬರೆದ ಕಿರಿಕ್‌ ಬೆಡಗಿ

ಕಾಂತಾರ-ಎಲ್ಲಾ ಆವೃತ್ತಿಗಳು-ಇತ್ತೀಚೆಗೆ ಕಾಶ್ಮೀರ ಫೈಲ್ಸ್ ಜೀವಿತಾವಧಿ-ಸಾರ್ವಕಾಲಿಕ ಬ್ಲಾಕ್‌ಬಸ್ಟರ್-340 ಕೋಟಿಗಳನ್ನು ಮೀರಿಸಿದೆ ಮತ್ತು ಈಗ ಅದು ಬ್ರಹ್ಮಾಸ್ತ್ರದ ₹ 430 ಕೋಟಿ ರೂ ಮೀರಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ.ಇನ್ನೊಂದೆಡೆಗೆ ಸುಮಾರು 1 ಕೋಟಿ ಟಿಕೆಟ್ ಗಳು ಕರ್ನಾಟಕದಲ್ಲಿ ಮಾರಾಟವಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News