ಫ್ಯಾನ್‌ ಇಂಡಿಯಾ ʼಧೂಮಂʼ ಸೆಟ್​ನಲ್ಲಿ ರಿಷಭ್​ ಶೆಟ್ಟಿ : ಏನಿದರ ಹಿನ್ನೆಲೆ..!

ಹೊಂಬಾಳೆ ಫಿಲಂಸ್​ನಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ ʼಧೂಮಂʼ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಶೂಟಿಂಗ್‌ ಸ್ಪಾಟ್‌ಗೆ ರಿಷಭ್​ ಶೆಟ್ಟಿ, ಸಪ್ತಮಿ ಗೌಡ ಭೇಟಿ ನೀಡಿ ಚಿತ್ರತಂಡದ ಜೊತೆ ಕೆಲ ಕಾಲ ಕಳೆದರು.

Written by - Krishna N K | Last Updated : Nov 24, 2022, 04:26 PM IST
  • ʼಧೂಮಂʼ ಚಿತ್ರದ ಸೇಟ್‌ನಲ್ಲಿ ರಿಷಬ್‌ ಶೆಟ್ಟಿ ಪ್ರತ್ಯಕ್ಷ
  • ಫ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸ್ತಾರಾ ರಿಷಬ್‌
  • ಫಹಾದ್​ ಫಾಸಿಲ್, ಅಪರ್ಣಾ ನಟನೆಯ ಧೂಮಂ
ಫ್ಯಾನ್‌ ಇಂಡಿಯಾ ʼಧೂಮಂʼ ಸೆಟ್​ನಲ್ಲಿ ರಿಷಭ್​ ಶೆಟ್ಟಿ : ಏನಿದರ ಹಿನ್ನೆಲೆ..! title=

ಬೆಂಗಳೂರು : ಹೊಂಬಾಳೆ ಫಿಲಂಸ್​ನಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ ʼಧೂಮಂʼ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಶೂಟಿಂಗ್‌ ಸ್ಪಾಟ್‌ಗೆ ರಿಷಭ್​ ಶೆಟ್ಟಿ, ಸಪ್ತಮಿ ಗೌಡ ಭೇಟಿ ನೀಡಿ ಚಿತ್ರತಂಡದ ಜೊತೆ ಕೆಲ ಕಾಲ ಕಳೆದರು.

ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ಜೊತೆ ಧೂಮಂ ಸೆಟ್‌ಗೆ ಭೇಟಿ ನೀಡಿದ ರಿಷಬ್‌ ಶೆಟ್ಟಿ, ಸಪ್ತಮಿಗೌಡ ಭೇಟಿನೀಡಿದರು. ಮಾಲಿವುಡ್‌ ಖ್ಯಾತ ನಟ ಫಹಾದ್​ ಫಾಸಿಲ್​, ಅಪರ್ಣಾ ಬಾಲಮುರಳಿ ಜೊತೆ ಸಂತಸದ ಕ್ಷಣಗಳನ್ನು ಕಳೆದರು. ಇನ್ನು 'ಧೂಮಂ' ಚಿತ್ರವನ್ನು 'ಲೂಸಿಯಾ' ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದೆ.

ಇದನ್ನೂ ಓದಿ: ಬಿಡುಗಡೆಯಾಯಿತು "ನಾಟ್ ಔಟ್" ಇದು ಹುಲಿ - ಕುರಿ ಆಟ ಚಿತ್ರದ ಮೋಷನ್ ಪೋಸ್ಟರ್

ಸಿನಿಮಾದಲ್ಲಿ ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿದ್ದಾರೆ. ಧೂಮಂಗೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ. 'ಧೂಮಂ', ಥ್ರಿಲ್ಲರ್, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ 4 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

ಇನ್ನು ಭಾರತ ಸಿನಿ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ. ಗೆದ್ದು, ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿ ಭಾರತೀಯರ ಪ್ರೀತಿಗಳಿಸಿರುವ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಇಂದು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರದಲ್ಲಿ ಸಪ್ತಮಿಗೌಡ, ಕಿಶೋರ್‌, ಅಚ್ಯುತ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾಬಳಗ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News