Reduce Rice Price: ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ.
ರಾಜ್ಯದಲ್ಲಿ ಬಾರದ ನಿರೀಕ್ಷಿತ ಮಳೆ, ಬೆಲೆ ಏರಿಕೆಯಿಂದ ಜನರ ತತ್ತರ. ಮಳೆ ಕೈ ಕೊಟ್ಟ ಕಾರಣ ಭತ್ತ, ರಾಗಿ, ಇತರೆ ಧಾನ್ಯಗಳ ಬಿತ್ತನೆ ವಿಳಂಬವಾಗಿದೆ. ಹೀಗಾಗಿ ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಶೇಕಡ 30-40 ರಷ್ಟು ಏರಿಕೆ ಆಗಲಿದೆ.
ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ರಫ್ತಿನಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯ ಮುನ್ಸೂಚನೆಯ ದೃಷ್ಟಿಯಿಂದ ಮೇಲ್ಮುಖ ಪ್ರವೃತ್ತಿಯು ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದೆ. ಈ ಮಾಹಿತಿಯನ್ನು ಆಹಾರ ಸಚಿವಾಲಯ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.