Good News: ಗಗನಕ್ಕೇರಿದ್ದ ಅಕ್ಕಿ ದರದಲ್ಲಿ ಭಾರೀ ಇಳಿಕೆ!

Reduce Rice Price: ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

Written by - Puttaraj K Alur | Last Updated : Apr 2, 2024, 11:38 AM IST
  • ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ
  • ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗುತ್ತಿದೆ
  • ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆ
Good News: ಗಗನಕ್ಕೇರಿದ್ದ ಅಕ್ಕಿ ದರದಲ್ಲಿ ಭಾರೀ ಇಳಿಕೆ!   title=
ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆ

ಬೆಂಗಳೂರು: ಭಾರೀ ಏರಿಕೆ ಕಂಡಿದ್ದ  ಅಕ್ಕಿದರ ಕೊಂಚ ಇಳಿಕೆ ಕಂಡಿದೆ. ಸ್ಟೀಮ್ ರೈಸ್ ಅಕ್ಕಿದರ ಕಡಿಮೆಯಾಗಿದ್ದು, ಕಚ್ಚಾ ಅಕ್ಕಿ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ.

ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸ್ಟೀಮ್ ರೈಸ್ ದರ ತಗ್ಗಿದರೂ ಅದನ್ನು ಎಲ್ಲರೂ ಬಳಸುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹೋಟೆಲ್‌ನವರು ಸ್ಟೀಮ್ ರೈಸ್ ಬಳಸುತ್ತಾರೆ. ಇದರ ಬೆಲೆ ಇಳಿಕೆ ತಾತ್ಕಾಲಿಕವೆಂದು ಹೇಳಲಾಗಿದೆ.

ಇದನ್ನೂ ಓದಿ: Daily GK Quiz: ಸೌರವ್ಯೂಹದ ಯಾವ ಗ್ರಹವನ್ನು ʼಪ್ಲ್ಯಾನೆಟ್ ಆಫ್ ಲವ್ʼ ಎಂದು ಕರೆಯಲಾಗುತ್ತದೆ?

ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಅಲ್ಲದೆ ಅಕ್ಕಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ಇವೆಲ್ಲ ಕಾರಣಗಳಿಂದ ಅಕ್ಕಿ ದರ ಕೊಂಚ ಕಡಿಮೆಯಾಗಿದೆ.

ಸ್ಟೀಮ್ ರೈಸ್ ದರ ಕೆಜಿಗೆ 8 ರೂ.ವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ RNR ಸ್ಟೀಮ್‌ರೈಸ್ ದರ ಕೆಜಿಗೆ 57-58 ರೂ. ಇತ್ತು. ಈಗ 48-49 ರೂ. ಇದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56 ರೂ.ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55-57 ರೂ. ಇದೆ.

ಇದನ್ನೂ ಓದಿ: ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಕೊಯಂಬತ್ತೂರಿನಲ್ಲಿ ಸದ್ಗುರುಗಳಿಗೆ ಅದ್ಧೂರಿ ಸ್ವಾಗತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News