ಭಾರತವು ಚೀನಾ ನಿರ್ಮಿತ ರಾಖಿಗಳಿಗೆ ಭಾರಿ ಹೊಡೆತ ನೀಡಿದ್ದು, ಸುಮಾರು 4,000 ಕೋಟಿ ರೂ.ಚೀನಾಗೆ ನಷ್ಟವಾಗಿದೆ ಎನ್ನಲಾಗಿದೆ.ಜೂನ್ 10 ರಂದು, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಈ ವರ್ಷ ರಾಖಿಯನ್ನು "ಹಿಂದೂಸ್ತಾನಿ ರಾಖಿ" ಎಂದು ಆಚರಿಸಲು ಕರೆ ನೀಡಿತ್ತು, ಅದು ಯಶಸ್ವಿಯಾಯಿತು.
ರಕ್ಷಾ ಬಂಧನ ಸಹೋದರ-ಸಹೋದರಿಯರ ಬಿಡಿಸಲಾಗದ ಬಂಧವಾಗಿದೆ. ಈ ಬಾರಿಯ ರಕ್ಷಾ ಬಂಧನದ ಮುಹೂರ್ತ ವಿಶೇಷವಾಗಿದೆ ಎನ್ನಲಾಗುತ್ತಿದೆ. ಜೋತಿಷ್ಯಾಚಾರ್ಯರ ಅನುಸಾರ ರಕ್ಷಾಬಂಧನ ಹಬ್ಬದ ದಿನ ಬರುತ್ತಿರುವ ಶುಭ ಸಂಯೋಗ 29 ವರ್ಷಗಳ ಬಳಿಕ ಬರುತ್ತಿದೆ.
ಈ ವರ್ಷದ ರಕ್ಷಾ ಬಂಧನ್ ಹಬ್ಬದ ಮುನ್ನ, ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಜನರು ಚೀನಾ ನಿರ್ಮಿತ ರಾಖಿಗಳನ್ನು ಖರೀದಿಸಲು ನಿರಾಕರಿಸುತ್ತಿರುವುದರಿಂದ ಚೀನಾದ ರಾಖಿಗಳ ಬದಲಾಗಿ ಸ್ಥಳೀಯವಾಗಿ ತಯಾರಿಸಿದ ರಾಖಿಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.