ಈ ಬಾರಿ ರಾಜಸ್ಥಾನದ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲಲಿದ್ದಾರೆಯೇ ಅಥವಾ ವಸುಂಧರಾ ಅವರ ಮೇಲೆ ಭರವಸೆಯಿಟ್ಟು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೆಂಬಲ ನೀಡಿದ್ದಾರೆಯೇ ಎಂಬುದು ಡಿಸೆಂಬರ್ 11 ರಂದು ನಡೆಯಲಿರುವ ಮತ ಎಣಿಕೆ ಬಳಿಕ ಸ್ಪಷ್ಟವಾಗಲಿದೆ.
ರಾಜಸ್ಥಾನದಲ್ಲಿ ಒಟ್ಟು 199 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಅದೇ ಸಮಯದಲ್ಲಿ, ತೆಲಂಗಾಣದಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳಿದ್ದು ಹೊಸ ರಾಜ್ಯವಾಗಿ ರಚನೆಯಾದ ಬಳಿಕ ತೆಲಂಗಾಣದಲ್ಲಿ ಮೊದಲ ಬಾರಿಗೆ ಮತದಾನ ನಡೆಯಲಿದೆ.
ಚಿತ್ತೊರ್ಘಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಷಾ, ರಾಜಸ್ಥಾನದಲ್ಲಿ ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದರು.
ಸಿಂಘಾದ ಹರಿದಾಸ್ ಮಾರುಕಟ್ಟೆಯಲ್ಲಿನ ಮೆಹ್ರಾನ ಗ್ರಾಮದ ನಿವಾಸಿ ನಂದ್ ಲಾಲ್ ಚೌಧರಿ ವಿಚಿತ್ರ ಬೇಡಿಕೆಯೊಂದನ್ನು ನಾಯಕರ ಮುಂದೆ ಇರಿಸಿದ್ದಾರೆ. ಆದರೆ ನಾಯಕರು ಅವರ ಬೇಡಿಕೆಯನ್ನು ಪೂರೈಸುವ ಭರವಸೆಯನ್ನೂ ನೀಡಿಲ್ಲ.
ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ 49 ಸ್ಥಾನಗಳಲ್ಲಿ ಅಂದರೆ 24 ಪ್ರತಿಶತ ಮಹಿಳೆಯರಿಗೆ ಟಿಕೆಟ್ ನೀಡಿದೆ. ಮಧ್ಯಪ್ರದೇಶದಲ್ಲಿ 53 ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.