ರಾಜಸ್ಥಾನ #ZeeMahaExitPoll: Aaj Tak, ಆಕ್ಸಿಸ್ ಪ್ರಕಾರ ಸರ್ಕಾರ ರಚಿಸಲಿದೆ ಕಾಂಗ್ರೆಸ್

ಈ ಬಾರಿ ರಾಜಸ್ಥಾನದ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲಲಿದ್ದಾರೆಯೇ ಅಥವಾ ವಸುಂಧರಾ ಅವರ ಮೇಲೆ ಭರವಸೆಯಿಟ್ಟು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೆಂಬಲ ನೀಡಿದ್ದಾರೆಯೇ ಎಂಬುದು ಡಿಸೆಂಬರ್ 11 ರಂದು ನಡೆಯಲಿರುವ ಮತ ಎಣಿಕೆ ಬಳಿಕ ಸ್ಪಷ್ಟವಾಗಲಿದೆ. 

Last Updated : Dec 7, 2018, 07:08 PM IST
ರಾಜಸ್ಥಾನ #ZeeMahaExitPoll: Aaj Tak, ಆಕ್ಸಿಸ್ ಪ್ರಕಾರ ಸರ್ಕಾರ ರಚಿಸಲಿದೆ ಕಾಂಗ್ರೆಸ್ title=

ನವದೆಹಲಿ: ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ಇಂದು(ಡಿಸೆಂಬರ್ 7) ನಡೆದ ಚುನಾವಣೆಯಲ್ಲಿ ಸಂಜೆ 5 ಗಂಟೆವರೆಗೆ ಶೇ.72.7ರಷ್ಟು ಮತದಾನ ನಡೆದಿದೆ. 

ಕಳೆದ ಬಾರಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿತ್ತು. ಆದರೆ ಈ ಬಾರಿ ರಾಜಸ್ಥಾನದ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲಲಿದ್ದಾರೆಯೇ ಅಥವಾ ವಸುಂಧರಾ ಅವರ ಮೇಲೆ ಭರವಸೆಯಿಟ್ಟು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೆಂಬಲ ನೀಡಿದ್ದಾರೆಯೇ ಎಂಬುದು ಡಿಸೆಂಬರ್ 11 ರಂದು ನಡೆಯಲಿರುವ ಮತ ಎಣಿಕೆ ಬಳಿಕ ಸ್ಪಷ್ಟವಾಗಲಿದೆ. 

ಇಂದು ಸಂಜೆ 5 ಗಂಟೆಗೆ ಮತದಾನ ಪೂರ್ಣಗೊಂಡಿದ್ದು, ಚುನಾವಣಾ ಫಲಿತಾಂಶಕ್ಕಾಗಿ ಜನತೆ ಎದುರುನೋಡುತ್ತಿದ್ದಾರೆ. Aaj Tak ಆಕ್ಸಿಸ್ ನಡೆಸಿರುವ ಮತದಾನೋತ್ತರ ಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 141 ಸ್ಥಾನಗಳನ್ನು, ಬಿಜೆಪಿ 55-72 ಸ್ಥಾನಗಳನ್ನು ಮತ್ತು ಇತರ ಪಕ್ಷಗಳು 4-11 ಸ್ಥಾನಗಳನ್ನು ಗಳಿಸಲಿವೆ ಎನ್ನಲಾಗಿದೆ. 

ಆದರೆ, ರಿಪಬ್ಲಿಕ್ ವಾಹಿನಿಯು ಯಾವ ಪಕ್ಷವೂ ಚುನಾವಣೆಯಲ್ಲಿ ಬಹುಮತ ಸಾಧ್ಯತೆ ಕಡಿಮೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿದೆ. ಈ ವಾಹಿನಿಯ ಪ್ರಕಾರ, ಬಿಜೆಪಿಗೆ 83-103 ಸ್ಥಾನ, ಕಾಂಗ್ರೆಸ್ 81-101 ಸ್ಥಾನಗಳಿಸಲಿದೆ ಎಂದಿದೆ. ಹಾಗೆಯೇ ಇತರ ಪಕ್ಷಗಳು 15 ಸ್ಥಾನಗಳನ್ನು ಗಳಿಸಳಿವೆ ಎಂದು ರಿಪಬ್ಲಿಕ್ ವರದಿ ಮಾಡಿದೆ.

Trending News