ವರ್ಗಾವಣೆಗಾಗಿ ರಾಯಚೂರಿನಲ್ಲಿ ಶಿಕ್ಷಕಿಯರು ಕಣ್ಣೀರಿಟ್ಟಿದ್ದಾರೆ. ವರ್ಗಾವಣೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರ ಕುಟುಂಬಗಳು ಡಿವೋರ್ಸ್ ಹಂತಕ್ಕೆ ಹೋಗ್ತಿವೆ. ಹೀಗಾಗಿ ನಮಗೆ ವರ್ಗಾವಣೆ ಕೊಡಿ ಎಂದು ಶಿಕ್ಷಕಿಯರು ಕಣ್ಣೀರಿಟ್ಟಿದ್ದಾರೆ. ಶಿಕ್ಷಣ ಸಚಿವರ ಭೇಟಿಗಾಗಿ ಬಂದರೂ ಶಿಕ್ಷಣ ಸಚಿವರ ಭೇಟಿಗೆ ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದು ಕಣ್ಣೀರಿಟ್ಟಿದ್ದಾರೆ.
SSLC ಯಲ್ಲಿ ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ಆಧಾರ್ ಇಲ್ಲದೇ ಪರದಾಡುವಂತಾಗಿತ್ತು. ಜೀ ಕನ್ನಡ ನ್ಯೂಸ್ ವರದಿ ಬಳಿಕ ಅಧಿಕಾರಿಗಳು ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಸಾರ್ವಜನಿಕರು ಕುರಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಕುರಿ ಕಳ್ಳತನ ಮಾಡುತ್ತಿದ್ದರು. ನಿನ್ನೆ ರಾತ್ರಿ ಕುರಿ ಕಳ್ಳತನಕ್ಕೆ ಬಂದಿದ್ದ ನಾಲ್ವರು ಕಳ್ಳರ ಪೈಕಿ, ಓರ್ವನನ್ನು ಸಾರ್ವಜನಿಕರು ಹಿಡಿದಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Protest in Raichuru: ಕೆಪಿಎಸ್ಸಿ (KPSC)ಆಯೋಜಿಸಿದ್ದ ಲೋಕೋಪಯೋಗಿ ಇಲಾಖೆಯ ಎಇ (AE) ಪರೀಕ್ಷೆ ಬರೆಯಲು ಹೊರಟಿದ್ದ ಅಭ್ಯರ್ಥಿಗಳು ರೈಲು ತಡವಾಗಿದ್ದರಿಂದ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.