ವಿಡಿಯೋ ಕ್ಲಿಪ್ನಲ್ಲಿ, ಆ ವ್ಯಕ್ತಿ ಪೋಲೆಂಡ್ನ ಬೀದಿಯಲ್ಲಿ ಒಬ್ಬ ಭಾರತೀಯನ ಬಳಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಬಳಿಕ ಅವನಿಗೆ ಇಂಗ್ಲಿಷ್ ತಿಳಿದಿದೆಯೇ ಎಂದು ಕೇಳುತ್ತಾನೆ. ಇಷ್ಟು ಕೇಳಿದ ಬಳಿಕ ವಾಗ್ದಾಳಿ ನಡೆಸುತ್ತಾನೆ.
ಟೆಕ್ಸಾಸ್ನ ಡಲ್ಲಾಸ್ನ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, 4 ಭಾರತೀಯ ಮೂಲದ ಮಹಿಳೆಯರು ಹೋಟೆಲ್ನಿಂದ ಭೋಜನ ಮುಗಿಸಿ ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿದ್ದರು. ಆಗ ಅಮೆರಿಕ-ಮೆಕ್ಸಿಕನ್ ಮೂಲದ ಮಹಿಳೆಯೊಬ್ಬಳು ಅಲ್ಲಿಗೆ ಬಂದು ಭಾರತೀಯ ಮಹಿಳೆಯರ ಮೇಲೆ ಅಶ್ಲೀಲ ಟೀಕೆಗಳನ್ನು ಮಾಡಿದ್ದಾಳೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬುಧವಾರ ಪುಟ್ ಬಾಲ್ ಆಟಗಾರರ ಆನ್ಲೈನ್ ಜನಾಂಗೀಯ ನಿಂದನೆಯ ವಿರುದ್ಧದ ಕ್ರಮಗಳನ್ನು ಬಲಪಡಿಸುವುದಾಗಿ ವಾಗ್ದಾನ ಮಾಡಿದ್ದಾರೆ.ಅಂತಹ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಭಿಮಾನಿಗಳನ್ನು ಆಟಗಳಿಂದ ನಿಷೇಧಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ನಿಂಧನೆ ತಗೆದು ಹಾಕದಿದ್ದಲ್ಲಿ ತಂಡವನ್ನು ವಿಧಿಸುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಜೊತೆಗಿನ ಒಪ್ಪಂದದ ವೇಳೆ "ಕಾಲು" ಎಂಬ ಪದದ ಅರ್ಥವನ್ನು ಕಂಡುಕೊಂಡ ನಂತರ ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ (Darren Sammy) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿಗೆ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ವರ್ಣನಿಂದನೆ ಮೂಲಕ ಅವಮಾನ ಮಾಡಿರುವ ಘಟನೆ ನಡೆದಿದೆ.ಈಗ ಈ ಘಟನೆಯ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.