ನವದೆಹಲಿ: ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿಗೆ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ವರ್ಣನಿಂದನೆ ಮೂಲಕ ಅವಮಾನ ಮಾಡಿರುವ ಘಟನೆ ನಡೆದಿದೆ.ಈಗ ಈ ಘಟನೆಯ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
ಸಿಡ್ನಿ ವಿಮಾನ ನಿಲ್ದಾಣದಿಂದ ಮೆಲ್ಬೋರ್ನ್ ಗೆ ತೆರಳಬೇಕಿದ್ದ ಶಿಲ್ಪಾಶೆಟ್ಟಿ ಚೆಕಿಂಗ್ ಕೌಂಟರ್ ನಲ್ಲಿ ಸಿಬ್ಬಂದಿಯಿಂದ ವರ್ಣನಿಂದನೆ ಮೂಲಕ ಅವಮಾನ ಎದುರಿಸಿದ್ದಾರೆ. ಚೆಕಿಂಗ್ ಕೌಂಟರ್ ನಲ್ಲಿ ಅವರಿಗೆ ಕಂದುಬಣ್ಣದವರ ಜೊತೆ ಮಾತನಾಡಲು ಅಡ್ಡಿಯಿಲ್ಲ ಎಂದು ಅಲ್ಲಿನ ಸಿಬ್ಬಂದಿ ಕರೆದಿದ್ದಾರೆಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.
ಆಗ ತಕ್ಷಣ ಸಿಬ್ಬಂದಿಯ ವರ್ತನೆಯಿಂದ ಸಿಟ್ಟಿಗೆದ್ದ ಶಿಲ್ಪಾಶೆಟ್ಟಿ ತಕ್ಷಣ ಏರ್ ಲೈನ್ ಗೆ ಕರೆಮಾಡಿ ದೂರು ನೀಡಿದ್ದಾರೆ. ಅಷ್ಟಕ್ಕೂ ಶಿಲ್ಪಾಶೆಟ್ಟಿ ಈ ವರ್ಣ ನಿಂದನೆ ಎದುರಿಸುತ್ತಿರುವುದು ಇದೆ ಮೊದಲೇನಲ್ಲ ಈ ಹಿಂದೆ ಬ್ರಿಟಿಷ್ ನ ರಿಯಾಲಿಟಿ ಷೋ 'ಸೆಲೆಬ್ರಿಟಿ ಬಿಗ್ ಬ್ರದರ್' ನಲ್ಲಿ ಕೂಡ ಅವರು ಇಂತಹ ಕಹಿ ಅನುಭವವನ್ನು ಅನುಭವಿಸಿದ್ದರು.