Adipurush Cast remuneration: 'ಆದಿಪುರುಷ' ಚಿತ್ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದರೂ ಚಿತ್ರಕ್ಕೆ ಸಂಬಂಧಿಸಿದ ವಿವಾದಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
Adipurush : ಹನುಮ ಜಯಂತಿಯ ಹಿನ್ನೆಲೆಯಲ್ಲಿ ಆದಿಪುರುಷ್ ಇತ್ರದ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಓಂ ರಾವುತ್ ಅವರ ದೊಡ್ಡ ಬಜೆಟ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಹನುಮಂತನಾಗಿ ದೇವದತ್ತ ನಾಗೆ ನಟಿಸಿದ್ದಾರೆ. ಈ ಪೋಸ್ಟರ್ ಹನುಮ ಜಯಂತಿಯಂದು ಬಿಡುಗಡೆಯಾಗಿದ್ದು ವಿಶೇಷವೆನಿಸುತ್ತಿದೆ.
Adipurush : ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಆದಿಪುರುಷ, ಹೆಚ್ಚು ನಿರೀಕ್ಷಿತ ಪೌರಾಣಿಕ ಫ್ಯಾಂಟಸಿ ಚಲನಚಿತ್ರಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಭಾಸ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸಾನೋನ್ ಸೀತೆಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Prabhas Anushka shetty marriage : ಪ್ರಭಾಸ್ ಮತ್ತು ಅನುಷ್ಕಾ ಒಟ್ಟಿಗೆ ಸಿನಿಮಾ ಮಾಡಲು ಆರಂಭಿಸಿದಾಗಿನಿಂದಲೂ ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಮತ್ತೊಂದು ಕುತೂಹಲಕಾರಿ ವಿಚಾರ ಮುನ್ನೆಲೆಗೆ ಬಂದಿದೆ. ದುಬೈ ಫಿಲ್ಮ್ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು, ಅನುಷ್ಕಾ ಭವಿಷ್ಯದಲ್ಲಿ ಪ್ರಭಾಸ್ ಜೊತೆ ಯಾವುದೇ ಸಿನಿಮಾ ಮಾಡದಿರಲು ನಿರ್ಧರಿಸಿರುವುದಾಗಿ ಆರೋಪಿಸಿದ್ದಾರೆ..
ಭಾರತೀಯ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿದ ಪ್ರಖ್ಯಾತ ನಿರ್ದೇಶಕರಲ್ಲಿ ಎಸ್ಎಸ್ ರಾಜಮೌಳಿ ಕೂಡ ಒಬ್ಬರು. ಇದೀಗ ಆರ್ಆರ್ಆರ್ ಸಿನಿಮಾ ಮೂಲಕ ಭಾರತೀಯ ಸಿನಿರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸದ್ಯ ಆರ್ಆರ್ಆರ್ ಚಿತ್ರ ಆಸ್ಕರ್ ಅಂಗಳದಲ್ಲಿದ್ದು, ಈ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಲಭಿಸುವ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ರಾಜಮೌಳಿ ನಿರ್ದೇಶನ ಈ 12 ಸಿನಿಮಾಗಳನ್ನು ಒಂದು ಸರಿ ನೋಡಿಕೊಂಡು ಬನ್ನಿ.
ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʼಪ್ರಾಜೆಕ್ಟ್ ಕೆʼ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಚಿತ್ರವು ಜನವರಿ 12, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾದಲ್ಲಿ ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆ ಡಾರ್ಲಿಂಗ್ಗೆ ಜೊತೆಯಾಗಿ ನಟಿಸಿದ್ದಾರೆ. ʼಪ್ರಾಜೆಕ್ಟ್ ಕೆʼ ಅನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಪ್ರಾಜೆಕ್ಟ್ ಕೆ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.
ಟಾಲಿವುಡ್ ಹಿರಿಯ ನಟ, ರೆಬಲ್ ಸ್ಟಾರ್ ಕ್ರಿಷ್ಣಂ ರಾಜು ಅವರ ನಿಧನದ ನಂತರ ನಟ ಪ್ರಭಾಸ್ ಕುಗ್ಗಿದ್ದರು. ಅಲ್ಲದೆ, ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದರು. ಇನ್ನು ಡಾರ್ಲಿಂಗ್ ಲಿಸ್ಟ್ನಲ್ಲಿ ಇನ್ನೂ ಮೂರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಿವೆ. ಆದ್ರೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದ್ದು, ವರದಿಗಳ ಪ್ರಕಾರ ಪ್ರಭಾಸ್ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗುವವರೆಗೂ ತಮ್ಮ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ 'ಡಾರ್ಲಿಂಗ್' ಪ್ರಭಾಸ್ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡುತ್ತಿದೆ. ಪ್ರಭಾಸ್ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ರೆಬಲ್ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆಲವು ವರ್ಷಗಳಿಂದ ಪ್ರಭಾಸ್ ಅನುಷ್ಕಾ ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿದ್ದು, ಇದೀಗ, ಪ್ರಭಾಸ್ ಬಿಟೌನ್ ಬೆಡರಿ ಕೃತಿ ಸನನ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಅಂತ ಹೇಳಲಾಗುತ್ತಿದೆ.
ಇತ್ತೀಚೆಗೆ, ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಎಸ್ಎಸ್ ರಾಜಮೌಳಿ ಅವರ ಹಳೆಯ ಕ್ಲಿಪ್ ಏಕಾಏಕಿ ವೈರಲ್ ಆಗಿತ್ತು, ಇದರಲ್ಲಿ ಅವರು ಪ್ರಭಾಸ್ಗೆ ಹೋಲಿಸಿದರೆ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ 'ಏನೂ ಇಲ್ಲ' ಎಂದು ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.ಈಗ ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ರಾಜಮೌಳಿ ಇದು ಹಳೆಯ ವಿಡಿಯೋ ಎಂದು ಹೇಳಿದ್ದಾರೆ.
ಇಷ್ಟು ದಿನ ಆದಿಪುರಷ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಭಾಸ್ ಇದೀಗ ಮತ್ತೇ ಬಾಲಿವುಡ್ ಅಂಗಳದಿಂದ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ʼಪಠಾಣ್ʼ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತು ಪ್ರಭಾಸ್ ಆದಿಪುರುಷ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ, ಇದೀಗ ಮೈತ್ರಿ ಮೂವಿಸ್ ಜೊತೆ ಹೊಸ ಸಿನಿಮಾ ಮಾಡಲು ಡಾರ್ಲಿಂಗ್ ಮುಂದಾಗಿದ್ದಾರೆ.
ಅದು ಹೇಗೆ ಶುರುವಾಯಿತೋ, ಯಾಕೆ ಶುರುವಾಯಿತೋ ಗೊತ್ತಿಲ್ಲ, ಆದರೆ ಬಾಲಿವುಡ್ ಬೆಡಗಿ ಕೃತಿ ಸನನ್ ಹಾಗೂ ನಟ ಪ್ರಭಾಸ್ ಇವರಿಬ್ಬರು ಪ್ರೀತಿಸಿ ಮದುವೆಯಾಗಲಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು. ಇದೀಗ ಕೃತಿ ಸನನ್ ಜೊತೆಗಿನ ಡೇಟಿಂಗ್ ವಿಚಾರಗಳ ಕುರಿತು ಡಾರ್ಲಿಂಗ್, ಪ್ರಭಾಸ್ ಮೌನ ಮುರಿದಿದ್ದಾರೆ. ಬಾಹುಬಲಿ ಮಾತು ಕೇಳಿದ ಫ್ಯಾನ್ಸ್ಗೆ ಶಾಕ್ ಆಗಿದೆ.
ಬಾಹುಬಲಿ ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಲೆವೆಲ್ನಲ್ಲಿ ಖ್ಯಾತಿ ಪಡೆದಿರುವ ಡಾರ್ಲಿಂಗ್ ಪ್ರಭಾಸ್ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಸಿನಿಮಾಗೆ ಕೋಟ್ಯಾಂತರ ರೂ. ಸಂಭಾವನೆ ಪಡೆಯುವ ನಟ ಕೇವಲ 21 ಕೋಟಿ ರೂ. ಸಾಲ ಮಾಡಲು ಆಸ್ತಿ ಒತ್ತೆಯಿಟ್ಟಿರುವುದಾಗಿ ಸುದ್ದಿಯಾಗುತ್ತಿದೆ. ಈ ವಿಚಾರ ಭಾರತೀಯ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.
Prabhas wedding : ಪ್ರಭಾಸ್ ಮುಂಬರುವ ಪ್ರಸಿದ್ಧ ತೆಲುಗು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋನ ಹೊಸ ಪ್ರೋಮೋ ವಿಡಿಯೋದಲ್ಲಿ ಪ್ರಭಾಸ್ ಅವರ ಪ್ರೇಮ ಜೀವನದ ಬಗ್ಗೆ ಪ್ರಶ್ನಿಸಲಾಗಿದೆ.
Kriti Sanon Upset With Dating Rumours: ಬಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಭಾಸ್ ಮತ್ತು ಕೃತಿ ಸನೊನ್ ಸಂಬಂಧದ ಸುದ್ದಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದೆ. ಆದರೆ, ಅವರಿಬ್ಬರೂ ಇಂತಹ ಸುದ್ದಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇವರಿಬ್ಬರ ನಡುವೆ ಹೆಚ್ಚುತ್ತಿರುವ ಸಾಮೀಪ್ಯವು ನಿರಂತರವಾಗಿ ಪ್ರಚಾರದಲ್ಲಿದೆ.
Prabhas - Kriti Sanon : ತೆಲುಗು ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೊನ್ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ವರುಣ್ ಧವನ್ ಇವರ ನಡುವಿನ ಸಂಬಂಧದ ಬಗ್ಗೆ ಭಾರಿ ಸುಳಿವನ್ನು ನೀಡಿದ್ದಾರೆ.
ಪ್ರಭಾಸ್ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳಾಗಿವೆ. ಟಾಲಿವುಡ್ ಹಿಟ್ ಸಿನಿಮಾ ʼಈಶ್ವರ್ʼ ಮೂಲಕ ಪ್ರಭಾಸ್ ಅಭಿಮಾನಿಗಳ ನೆಚ್ಚಿನ ನಟನಾಗಿ ಹೊರಹೊಮ್ಮಿದರು. ನಂತರ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾ ಸ್ಟಾರ್ಡಮ್ ತಂದುಕೊಟ್ಟಿತು. ಅಲ್ಲದೆ, ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ʼವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪಾಟಿʼ ಮಿಂಚಲು ಕಾರಣವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.