Kantara : ಕಾಂತಾರಾ ಸಿನಿಮಾ ಬಗ್ಗೆ ನಟ ಪ್ರಭಾಸ್‌ ಹೇಳಿದ್ದೇನು ನೋಡಿ.!

Kantara : ಕಾಂತಾರಾ ಸಿನಿಮಾ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ. ಸಿನಿ ಪ್ರಿಯರಂತೂ ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. 

Written by - Chetana Devarmani | Last Updated : Oct 1, 2022, 03:30 PM IST
  • ಕಾಂತಾರಾ ಸಿನಿಮಾ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ
  • ಸಿನಿ ಪ್ರಿಯರಂತೂ ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ
  • ಕಾಂತಾರಾ ಸಿನಿಮಾ ಬಗ್ಗೆ ನಟ ಪ್ರಭಾಸ್‌ ಹೇಳಿದ್ದೇನು ನೋಡಿ
Kantara : ಕಾಂತಾರಾ ಸಿನಿಮಾ ಬಗ್ಗೆ ನಟ ಪ್ರಭಾಸ್‌ ಹೇಳಿದ್ದೇನು ನೋಡಿ.!  title=
ಕಾಂತಾರಾ ಸಿನಿಮಾ

Kantara : ಕಾಂತಾರಾ ಸಿನಿಮಾ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ. ಸಿನಿ ಪ್ರಿಯರಂತೂ ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ನಟ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಸೆ.30 ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಯಿತು. ಇದೀಗ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಸ್ಟಾರ್ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಸಹ ಪ್ರಶಂಸಿಸಿದ್ದಾರೆ. 

ಇದನ್ನೂ ಓದಿ : ʼಒರಿಜಿನಲ್ ನಾನು.. ಇರೋದೆ ಹೀಗೆʼ : ಫೇಕ್‌ ವ್ಯಕ್ತಿ ಎಂದವರ ಮೇಲೆ ರೂಪೇಶ್‌ ಗರಂ..!

ನಟ ರಿಶಭ್ ಶೆಟ್ಟಿ ಅವರ ಸಿನಿಮಾವನ್ನು ನೋಡಿ ಪ್ರಭಾಸ್‌ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ಕಾಂತಾರ ಸಿನಿಮಾ ಎಂಜಾಯ್ ಮಾಡಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್ ತುಂಬಾ ರಂಜಿಸಿದೆ. ಸಂಪೂರ್ಣ ಚಿತ್ರತಂಡಕ್ಕೆ ಶುಭಾಶಯಗಳು, ಸಿನಿಮಾ ಇನ್ನಷ್ಟು ಸಕ್ಸಸ್ ಆಗಲಿ" ಎಂದು ಪ್ರಭಾಸ್‌ ಬರೆದುಕೊಂಡಿದ್ದಾರೆ. ರಿಶಭ್ ಶೆಟ್ಟಿ, ವಿಜಯ್ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್ ಹಾಗೂ ಸಪ್ತಮಿ ಗೌಡ ಅವರನ್ನು ಈ ಪೋಸ್ಟ್‌ಗೆ ಟ್ಯಾಗ್‌ ಮಾಡಿದ್ದಾರೆ.

Kantara

ಸಿನಿಮಾವನ್ನು ಕಾಂತಾರ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್‌ ಅಡಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ನಟ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾವನ್ನು ಸಹ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿದ್ದು, ಮುಂದಿನ ವರ್ಷ ರಿಲೀಸ್‌ ಆಗಲಿದೆ. 

ಇದನ್ನೂ ಓದಿ : ಶಿವಣ್ಣ ಫ್ಯಾನ್ಸ್‌ಗೆ ಸಿಹಿ ಸುದ್ದಿ : ವರ್ಷದ ಕೊನೆ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿದೆ ʼವೇದʼ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News