ಅಕ್ಟೋಬರ್ 17 ರಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಪುಸಾದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗೆ 12ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.
ಪಿಎಂ ಕಿಸಾನ್ 12 ನೇ ಕಂತು ಸೆಪ್ಟೆಂಬರ್ನಲ್ಲಿ ಬರಲಿದೆ ಎಂದು ಹೇಳಲಾಗುತ್ತಿ ತ್ತು. ಆದರೆ ಇದೀಗ ಪಿಎಂ ಕಿಸಾನ್ ಯೋಜನೆಯ 12ನೇ ಕಂತು ಅಕ್ಟೋಬರ್ನಲ್ಲಿ ರೈತರ ಖಾತೆ ಸೇರಲಿದೆ ಎಂದು ಹೇಳಲಾಗುತ್ತಿದೆ.
ಅನೇಕ ಫಲಾನುಭವಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಸರ್ಕಾರ ಫಲಾನುಭವಿಗಳಿಗೆ ಇ-ಕೆವೈಸಿ ಮಾಡುವಂತೆ ಕೇಳಿದೆ.
PM Kisan Samman Nidhi Update: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಶೀಘ್ರದಲ್ಲಿಯೇ ರೈತರ ಖಾತೆಗೆ 12 ನೇ ಕಂತಿನ ಹಣ ಬರಲಿದೆ. ಏತನ್ಮಧ್ಯೆ ಈ ಯೋಜನೆಯ ಅಡಿ ಇದೀಗ ಪತಿ-ಪತ್ನಿ ಇಬ್ಬರ ಖಾತೆಗೂ ಕೂಡ ಯೋಜನೆಯ ಹಣ ಬರಲಿದೆಯೇ ಎಂಬ ಪ್ರಶ್ನೆಗಳು ಕೂಡ ಪದೇ ಪದೇ ಕೇಳಿಬರುತ್ತಿವೆ.
ಕೇಂದ್ರ ಸರ್ಕಾರದ ಈ ಯೋಜನೆಯಡಿ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂ. ಜಮಾ ಮಾಡಲಾಗುತ್ತಿದೆ. ಹಾಗೆ, ರೈತರಿಗೆ ಇಡೀ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು 6000 ರೂ. ಸಿಗಲಿದೆ.
ಏಪ್ರಿಲ್ ಮೊದಲ ವಾರದಲ್ಲಿ ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ 2 ಸಾವಿರ ರೂಪಾಯಿ ವರ್ಗಾಯಿಸಬಹುದು. ಆದರೆ, ಇದಕ್ಕಾಗಿ ರೈತರು ಮಾರ್ಚ್ 31 ರ ಮೊದಲು ಇ-ಕೆವೈಸಿ ಅನ್ನು ನವೀಕರಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.