ಆಗಸ್ಟ್ 31 ರೊಳಗೆ ಈ ಕೆಲಸವನ್ನು ಪೂರೈಸಿಕೊಳ್ಳಿ ..! ಇಲ್ಲವಾದರೆ ಜೇಬಿಗೆ ನಷ್ಟ ಗ್ಯಾರಂಟಿ

ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ಆಗಸ್ಟ್ 31 ರೊಳಗೆ ಇಕೆವೈಸಿ ಕೆಲಸವನ್ನು ಪೂರ್ಣಗೊಳಿಸಬೇಕು.

ಬೆಂಗಳೂರು : ಆಗಸ್ಟ್ ಕೊನೆಯ ವಾರ ನಡೆಯುತ್ತಿದೆ. ಎರಡು ದಿನಗಳ ನಂತರ ಸೆಪ್ಟೆಂಬರ್ ಪ್ರಾರಂಭವಾಗುತ್ತದೆ. ಆಗಸ್ಟ್ 31 ರಂದು, ಹಲವು ಮಹತ್ವದ  ಕೆಲಸಗಳ ಗಡುವು ಮುಕ್ತಾಯಗೊಳ್ಳಲಿದೆ.  ಹಾಗಾಗಿ 31 ರೊಳಗೆ ಈ ಕೆಳಗೆ ಹೇಳಿರುವ ಕೆಲಸವನ್ನುಪೂರೈಸಿಕೊಳ್ಳಬೇಕು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ಆಗಸ್ಟ್ 31 ರೊಳಗೆ ಇಕೆವೈಸಿ ಕೆಲಸವನ್ನು ಪೂರ್ಣಗೊಳಿಸಬೇಕು. eKYC ಅನ್ನು ಪೂರ್ಣಗೊಳಿಸಲು ಸರ್ಕಾರವು ಕೊನೆಯ ಅವಕಾಶವನ್ನು ನೀಡುತ್ತಿದೆ. eKYC ಮಾಡದಿದ್ದರೆ ನಿಮ್ಮ ಮುಂದಿನ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ತಡೆಹಿಡಿಯಲಾಗುತ್ತದೆ.

2 /4

ಈ ಹಿಂದೆ, ಸರ್ಕಾರದಿಂದ eKYC ಮಾಡಿಸಲು  ಕೊನೆಯ ದಿನಾಂಕ ಜುಲೈ 31 ಆಗಿತ್ತು. ನಂತರ ಇದನ್ನೂ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿತ್ತು. ಸೆಪ್ಟೆಂಬರ್ ಮೊದಲ ವಾರದಲ್ಲಿ ಪಿಎಂ ಕಿಸಾನ್ ನ 12ನೇ ಕಂತು ರೈತರ ಖಾತೆಗೆ ವರ್ಗಾವಣೆಯಾಗುವ ನಿರೀಕ್ಷೆ ಇದೆ. ಈ ಯೋಜನೆಯಡಿ ನೋಂದಾಯಿತ ರೈತರಿಗೆ ವಾರ್ಷಿಕ 6 ಸಾವಿರ ರೂ.ಯನ್ನು ವರ್ಗಾವಣೆ ಮಾಡಲಾಗುವುದು. 

3 /4

PNBಯಲ್ಲಿ ನಿಮ್ಮ ಖಾತೆ ಇದ್ದರೆ, ಆಗಸ್ಟ್ 31 ರೊಳಗೆ KYCಯನ್ನು   ಪೂರ್ಣಗೊಳಿಸಿ. ಕೆವೈಸಿಯನ್ನು ಗಡುವಿನೊಳಗೆ ಪೂರ್ಣಗೊಳಿಸದಿದ್ದರೆ, ಖಾತೆಯನ್ನು ತಡೆಹಿಡಿಯಬಹುದು ಎಂದು ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ. PNB ಟ್ವೀಟ್‌ ಮೂಲಕ ಗ್ರಾಹಕರಿಗೆ ಈ ಮಾಹಿತಿ ನೀಡಿದೆ. 

4 /4

ತೆರಿಗೆದಾರರು ಜುಲೈ 31 ರ ನಂತರ ITR ಅನ್ನು ಸಲ್ಲಿಸುತ್ತಿದ್ದರೆ, ಪರಿಶೀಲನೆಗಾಗಿ ಅವರು 30 ದಿನಗಳಅವಕಾಶ ಪಡೆಯುತ್ತಾರೆ. ಜುಲೈ 31 ರೊಳಗೆ ರಿಟರ್ನ್ಸ್ ಸಲ್ಲಿಸುವವರಿಗೆ ಪರಿಶೀಲನೆಗಾಗಿ 120 ದಿನಗಳು ಸಿಗುತ್ತವೆ. ತೆರಿಗೆದಾರರು ಆಗಸ್ಟ್ 1 ರಂದು ತಮ್ಮ ರಿಟರ್ನ್ ಅನ್ನು ಸಲ್ಲಿಸಿದ್ದರೆ, ಅವರ ಪರಿಶೀಲನೆಯ ಗಡುವು ಆಗಸ್ಟ್ 31 ರಂದು ಕೊನೆಗೊಳ್ಳುತ್ತದೆ.