ನಿವೃತ್ತಿಯ ಜೀವನ ಸುಗಮವಾಗಿ ಸಾಗಬೇಕಾದರೆ ಸುರಕ್ಷಿತ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡಬೇಕು. ಹಾಗಿದ್ದರೆ ಭಾರತೀಯ ಜೀವ ವಿಮಾ ನಿಗಮದ ಸರಳ ಪಿಂಚಣಿ ಯೋಜನೆ ಇದಕ್ಕೆ ಉತ್ತಮ ಆಯ್ಕೆಯಾಗಿರುತ್ತದೆ.
ಬೀದಿ ವ್ಯಾಪಾರಿಗಳು, ರಿಕ್ಷಾ ಡ್ರೈವರ್ ಗಳು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಇತರ ಅನೇಕ ಕೆಲಸಗಳಲ್ಲಿ ತೊಡಗಿರುವ ಜನರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಾಯಕ್ಕೆ ಈ ಯೋಜನೆ ತುಂಬಾ ಸಹಾಯಕವಾಗಲಿದೆ.
National Pension System: ದುಡಿಯಲು ಪ್ರಾರಂಭಿಸಿದೊಡನೆ ನಿವೃತ್ತಿಯ ಯೋಜನೆಯನ್ನು ಪ್ರಾರಂಭಿಸಬೇಕು. ಏಕೆಂದರೆ ಇದರೊಂದಿಗೆ ನೀವು ನಿವೃತ್ತಿಯವರೆಗೂ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು.
7th Pay Commission: ಕೇಂದ್ರ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ಈಗ ನೌಕರರು ತಮ್ಮ ಸ್ವಂತ ವಿವೇಚನೆಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಹಳೆಯ ಪಿಂಚಣಿ ಯೋಜನೆ ನಡುವೆ ಆಯ್ಕೆ ಮಾಡಬಹುದು.
PM-SYM: ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (ಪಿಎಂ-ಎಸ್ವೈಎಂ) ಅನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ, ನೀವು ಪ್ರತಿ ತಿಂಗಳು 55 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 36 ಸಾವಿರ ರೂಪಾಯಿಗಳ ಪಿಂಚಣಿಗೆ ಅರ್ಹರಾಗಬಹುದು.
ನೀವು ಕೂಡಾ ಪ್ರತಿ ತಿಂಗಳಿಗೆ 5000 ರೂ.ಗಳ ಪಿಂಚಣಿ ಪಡೆಯಲು ಬಯಸುವುದಾದರೆ ಈ ಸ್ಕೀಮ್ ಅನ್ನು ಪಡೆದುಕೊಳ್ಳಬಹುದು. 18 ರಿಂದ 40 ವರ್ಷದವರೆಗಿನವರು ಈ ಯೋಜನೆಯಲ್ಲಿ ಹಣ ಹೂಡಬಹುದು. ಈ ಯೋಜನೆಯಡಿ, ಕನಿಷ್ಠ 20 ವರ್ಷಗಳವರೆಗೆ ಹೂಡಿಕೆಯನ್ನು ಮುಂದುವರಿಸಬೇಕಾಗುತ್ತದೆ.
ಹಳೆಯ ಪಿಂಚಣಿ ಯೋಜನೆ ಲಾಭ ಪಡೆಯಲು ಬಯಸುವ ನೌಕರರು ಮೇ 5 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಲೇ ಇರುತ್ತಾರೆ.
ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ತನ್ನ ಲಕ್ಷಾಂತರ ಖಾತೆದಾರರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತದೆ. ಈ ಕಾರಣದಿಂದಾಗಿ, ಖಾತೆದಾರರುನೌಕರಿಯ ವೇಳೆ ಹಾಗೂ ನೌಕರಿ ಇಲ್ಲದ ವೇಳೆಯೂ ಕೂಡ ಆರ್ಥಿಕ ಸಹಾಯ ಪಡೆಯಬಹುದಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಹೊರಬಂದಿದೆ. ಹೌದು, ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆಯನ್ನು ನೀಡಿರುವ ಕೇಂದ್ರದ ಮೋದಿ ನೇತೃತ್ವದ ಸರ್ಕಾರ, ಜನವರಿ 1, 2004 ಅಥವಾ ಅದಕ್ಕಿಂತಲೂ ಮೊದಲು ಸೇವೆಗೆ ಸೇರಿದ ನೌಕರರಿಗೆ ಇದರ ಲಾಭ ಸಿಗಲಿದೆ ಎಂದು ಹೇಳಿದೆ.
ಗುರುವಾರ ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರದಾದ್ಯಂತದ ರೈತರ ಅನುಕೂಲಕ್ಕಾಗಿ 'ಪ್ರಧಾನ್ ಮಂತ್ರಿ ಕಿಸಾನ್ ಮಂದನ್ ಯೋಜನೆ'ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.