Latest Onion Rate - ಈರುಳ್ಳಿ ಬೆಲೆ ಮತ್ತೊಮ್ಮೆ ಶ್ರೀಸಾಮಾನ್ಯರ ಕಣ್ಣಲ್ಲಿ ನೀರು ಬರಿಸಲಾರಂಭಿಸಿದೆ. ದೆಹಲಿ-ಎನ್ಸಿಆರ್ನಲ್ಲಿ ಈರುಳ್ಳಿಯ ಬೆಲೆ ಕಳೆದ ಮೂರು ವಾರಗಳಿಂದ ಸುಮಾರು 50-60 ರೂ.ಗಳಷ್ಟಿತ್ತು
ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ದೇಶದ ಎಲ್ಲಾ ರಾಜ್ಯಗಳಲ್ಲಿನ ಈರುಳ್ಳಿ ಸಗಟು ವ್ಯಾಪಾರಿಗಳು ಇನ್ನು ಮುಂದೆ 25 ಟನ್ಗಿಂತ ಹೆಚ್ಚು ಈರುಳ್ಳಿಯನ್ನು ದಾಸ್ತಾನು ಮಾಡುವಂತಿಲ್ಲ. ಇದೇ ವೇಳೆ ಚಿಲ್ಲರೆ ವ್ಯಾಪಾರಿಗಳಿಗೆ ಈರುಳ್ಳಿ ದಾಸ್ತಾನು ಮಿತಿ ಐದು ಟನ್ ಎಂದು ಹೇಳಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ. ಆದಾಗ್ಯೂ ಇದು ಆಮದುದಾರರಿಗೆ ಅನ್ವಯಿಸುವುದಿಲ್ಲ.
ದೇಶಾದ್ಯಂತ ಈರುಳ್ಳಿ ಬೆಲೆ ಆಕಾಶ ಮುಟ್ಟಿದ್ದು, ಈರುಳ್ಳಿ ಕೊಳ್ಳುವವರ ಕಣ್ಣಲ್ಲೇ ನೀರು ಬರುತ್ತಿದೆ. ಸೇಬಿನ ಬೆಲೆಯಲ್ಲಿ ಮಾರಾಟವಾಗುತ್ತಿರುವ ಈರುಳ್ಳಿಯಿಂದಾಗಿ ಅಸಮಾಧಾನಗೊಂಡಿರುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಅಗ್ಗದ ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 22 ರೂ.ಗೆ ಮಾರಾಟ ಮಾಡುತ್ತಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 50 ರಿಂದ 55 ರೂ. ದೇಶದಲ್ಲಿ ಈರುಳ್ಳಿ ದಾಸ್ತಾನು ತುಂಬಾ ಕಡಿಮೆಯಾಗಿದೆ, ಆದ್ದರಿಂದ ಈರುಳ್ಳಿ ಆಗಮನ ದುರ್ಬಲವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.