One Nation One Election: 'ಒಂದು ದೇಶ, ಒಂದು ಚುನಾವಣೆ' ಪ್ರಸ್ತಾವನೆಗೆ ಪ್ರಧಾನಿ ಮೋದಿಯವರ ಸಚಿವ ಸಂಪುಟ ಅನುಮೋದನೆ ನೀಡಿದೆ. ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಒಂದೇ ಬಾರಿ ನಡೆಸುವ ಮಹತ್ವದ ಯೋಜನೆ ಇದಾಗಿದೆ.
One Nation One Election: ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಮಾರ್ಚ್ನಲ್ಲಿ ವರದಿ ಸಲ್ಲಿಸಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ'ಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರನ್ನು ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿಗೆ ಹೋಲಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನನಗೆ ತಿಳಿದಿರುವಂತೆ ಕ್ರಿಕೆಟ್ನಲ್ಲಿ ಈಗಲೂ ಅಭಿಮಾನಿಗಳು ಧೋನಿಯನ್ನು ಉತ್ತಮ ಫಿನಿಶರ್ ಎನ್ನುತ್ತಾರೆ. ಕ್ರಿಕೆಟ್ನಲ್ಲಿ ಧೋನಿ ಅತ್ಯುತ್ತಮ ಫಿನಿಶರ್ ಹೇಗೋ.. ಅದೇ ರೀತಿ ರಾಜಕಾರಣದಲ್ಲಿ ರಾಹುಲ್ ಗಾಂಧಿ ಕೂಡ ಓರ್ವ ಉತ್ತಮ ಫಿನಿಶರ್ ಅಂತಾ ಟೀಕಿಸಿದ್ದಾರೆ.
ಏನಿದು ಒನ್ ನೇಷನ್ ಒನ್ ಎಲೆಕ್ಷನ್?: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ʼಒನ್ ನೇಷನ್ ಒನ್ ಎಲೆಕ್ಷನ್ʼ ವಿಚಾರವಾಗಿ 62 ಪಕ್ಷಗಳನ್ನು ಸಂಪರ್ಕಿಸಿತ್ತು. ಪ್ರತಿಕ್ರಿಯಿಸಿದ 47 ರಾಜಕೀಯ ಪಕ್ಷಗಳ ಪೈಕಿ 32 ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವನ್ನು ಬೆಂಬಲಿಸಿದರೆ, 15 ಪಕ್ಷಗಳು ವಿರೋಧಿಸಿವೆ. ಒಟ್ಟು 15 ಪಕ್ಷಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಲೋಕಸಭೆ ಚುನಾವಣೆ ಜತೆಗೆ ಎಲ್ಲ ವಿಧಾನಸಭಾ ಚುನಾವಣೆಗಳನ್ನು (ಒಂದು ರಾಷ್ಟ್ರ, ಒಂದು ಚುನಾವಣೆ) ನಡೆಸುವ ಕುರಿತು ಕಾನೂನು ಆಯೋಗವು ಏಪ್ರಿಲ್ 24 ರಂದು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದೆ. ಈ ವರದಿಯ ಪ್ರಕಾರ ಚುನಾವಣಾ ಆಯೋಗ ಈ ಸಲಹೆಯನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.