ಬಂಧಿತ ಪೈಲಟ್ ಸೋಹೈಲ್ ಗಫಾರ್ ಈ ಹಿಂದೆ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ. ಅಮೆರಿಕದಲ್ಲಿ ತರಬೇತಿ ಪಡೆದಿರುವ ಸೊಹೈಲ್ ವೈದ್ಯಕೀಯ ಕಾರಣ ಉಲ್ಲೇಖಿಸಿ ಕೆಲವು ವರ್ಷಗಳ ಹಿಂದೆ ತನ್ನ ಕೆಲಸ ತೊರೆದಿದ್ದ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮುಂಬೈನ ಮಾಜಿ ವಲಯ ನಿರ್ದೇಶಕ ಮತ್ತು ಪ್ರಸ್ತುತ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ನಲ್ಲಿರುವ ಸಮೀರ್ ವಾಂಖೆಡೆ ಅವರನ್ನು ಡಿಜಿ ತೆರಿಗೆದಾರರ ಸೇವಾ ನಿರ್ದೇಶನಾಲಯದಲ್ಲಿ ಚೆನ್ನೈಗೆ ವರ್ಗಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಸೋಮವಾರ ತಿಳಿಸಿದೆ.
ಜಿಂಬಾಬ್ವೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆ ತನ್ನ ಸೂಟ್ಕೇಸ್ನ ತಳಭಾಗದಲ್ಲಿ ಹೆರಾಯಿನ್ ಸಾಗಾಟ ಮಾಡುತ್ತಿದ್ದಳು. ತಪಾಸಣೆ ವೇಳೆ ಹೆರಾಯಿನ್ ಪತ್ತೆಯಾಗಿದ್ದು, ತಕ್ಷಣವೇ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಮತ್ತಿಬ್ಬರು ಪೆಡ್ಲರ್ಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ ಈ ಹಿನ್ನೆಲೆಯಲ್ಲಿ ಮತ್ತಿಬ್ಬರು ಪೆಡ್ಲರ್ಗಳ ಬಂಧಿಸಲಾಗಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆರು ಜನರನ್ನು ಬಂಧಿಸುವುದರೊಂದಿಗೆ ಪ್ರತ್ಯೇಕ ಘಟನೆಗಳಲ್ಲಿ ಎರಡು ಪ್ರಮುಖ ಡ್ರಗ್ ಸಿಂಡಿಕೇಟ್ಗಳನ್ನು ಭೇದಿಸಿತು ಮತ್ತು 3 ಕೆಜಿ ಉತ್ತಮ ಗುಣಮಟ್ಟದ ಸಿಂಥೆಟಿಕ್ ಡ್ರಗ್ಸ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ತಂಡದ ಮೇಲೆ ಸುಮಾರು 60 ಜನರ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ. ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ತಂಡ ಡ್ರಗ್ ಪ್ಯಾಡ್ಲರ್ನನ್ನು ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಅವರು ಪ್ರಸ್ತುತ ಯಾರಿಗೂ ಸಿಗುತ್ತಿಲ್ಲ ಅವರ ಮುಂಬೈ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಕಚೇರಿಗೆ ತಲುಪಿರುವ ದೀಪಿಕಾ ಪಡುಕೋಣೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಕರಿಷ್ಮಾ ಮತ್ತು ದೀಪಿಕಾ ಈಗಾಗಲೇ ಕಾರ್ಯತಂತ್ರ ರೂಪಿಸುವ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ ಬಂದಿದ್ದಾರೆ ಎಂದು ಎನ್ಸಿಬಿ ಮೂಲಗಳು ತಿಳಿಸಿವೆ. ವಿಚಾರಣೆಯ ವೇಳೆ ದೀಪಿಕಾ ಮೊದಲು ಡ್ರಗ್ಸ್ ತೆಗೆದುಕೊಂಡಿರುವುದನ್ನು ನಿರಾಕರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.