MM Keeravani Songs in Kannada : ಆಸ್ಕರ್ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಮೇಲೆ ಎಲ್ಲರ ಭರವಸೆಯೂ ಇತ್ತು. ಈ ಹಾಡು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಈ ವರ್ಷದ ಅತ್ಯುತ್ತಮ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ಆರ್‌ಆರ್‌ಆರ್‌ನ 'ನಾಟು ನಾಟು' ಹಾಡು ಇತ್ತೀಚಿನ ದಿನಗಳಲ್ಲಿ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದಿದೆ. ಈ ಎಲ್ಲಾ ಪ್ರಶಸ್ತಿಗಳ ಜೊತೆಗೆ, ಈ ಹಾಡು ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್ ಗೆಲ್ಲಬೇಕೆಂದು ಎಲ್ಲರೂ ಬಯಸಿದ್ದರು. 'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪಡೆದಿದ್ದು, ಎಲ್ಲರ ಬಯಕೆ ಈಡೇರಿದೆ.
ಇದೀಗ ಎಲ್ಲೆಲ್ಲೂ ಈ ಹಾಡಿನದ್ದೇ ಸುದ್ದಿ. ನಾಟು ನಾಟು ಹಾಡಿನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಖ್ಯಾತಿ ವಿಶ್ವದೆಲ್ಲೆಡೆ ಹಬ್ಬಿದೆ. ಕೀರವಾಣಿ ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಸ್ಯಾಂಡಲ್ವುಡ್ ಸಿನಿಮಾಗಳಿಗೆ ಸಹ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ : Oscars 2023 Winner: ʻನಾಟು ನಾಟುʼ ಹಾಡಿಗೆ ಆಸ್ಕರ್ ಪ್ರಶಸ್ತಿ, ಇತಿಹಾಸ ಸೃಷ್ಟಿಸಿದ RRR
1990ರಿಂದಲೂ ಸಿನಿರಂಗದಲ್ಲಿ ಕೀರವಾಣಿ ಸಕ್ರೀಯರಾಗಿದ್ದಾರೆ. ಕನ್ನಡದಲ್ಲಿ ಎಂ ಎಂ ಕೀರವಾಣಿ ಮೊದಲು ಸಂಗೀತ ನೀಡಿದ್ದು ‘ಅಳಿಮಯ್ಯ’ ಸಿನಿಮಾದ ಹಾಡಿಗೆ. ಆ ಸಿನಿಮಾದಲ್ಲಿ ಅರ್ಜುನ್ ಸರ್ಜಾ, ಶ್ರುತಿ, ಲೋಕೇಶ್ ಸೇರಿದಮತೆ ಮುಂತಾದವರು ನಟಿಸಿದ್ದರು. ಅಪ್ಪಾಜಿ, ಭೈರವ, ಸ್ವಾತಿ, ಕರ್ನಾಟಕ ಸುಪುತ್ರ, ದೀಪಾವಳಿ, ಜಮೀನ್ದಾರ್ರು ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ತೆಲುಗಿನಿಂದ ಕನ್ನಡಕ್ಕೆ ರಿಮೇಕ್ ಆದ ಮರ್ಯಾದೆ ರಾಮಣ್ಣ, ವೀರ ಮದಕರಿ ಹಾಡುಗಳಿಗೆ ಸಹ ಕೀರವಾಣಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.
2001ರಲ್ಲಿ ರಾಜಮೌಳಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ಸ್ಟೂಡೆಂಟ್ ನಂ.1 ಸಿನಿಮಾದಿಂದ ಹಿಡಿದು 2022ರಲ್ಲಿ ತೆರೆಕಂಡ ಆರ್‌ಆರ್‌ಆರ್ ವರೆಗೂ ಅವರ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಸಂಗೀತ ನಿರ್ದೇಶಿಸಿದ್ದಾರೆ. ಆಸ್ಕರ್ ಪ್ರಶಸ್ತಿ ಗೆದ್ದ ಎಂಎಂ ಕೀರವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ : Oscars 2023 : ಆಸ್ಕರ್ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ.. ಕಾರಣ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.