ಹಲವು ಮಹಿಳಾ ಪತ್ರಕರ್ತರು ಮೀಟೂ ಚಳುವಳಿಯ ಭಾಗವಾಗಿ ಪತ್ರಕರ್ತ ಎಂ.ಜೆ.ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು.ಈ ಹಿನ್ನಲೆಯಲ್ಲಿ ಆರೋಪ ಮುಕ್ತವಾಗುವವರೆಗೆ ಅವರನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ( ಭಾರತ ಸಂಪಾದಕರ ಸಂಘ)ದ ಸದಸ್ಯತ್ವದಿಂದ ಅವರನ್ನು ಅಮಾನತುನಲ್ಲಿಡಲಾಗಿದೆ ಎಂದು ತಿಳಿಸಿದೆ.
ಇತ್ತೀಚಿಗೆ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಮೇಲೆ ಬಂದಿದ್ದ ಲೈಂಗಿಕ ಕಿರುಕುಳದ ಆರೋಪದ ವಿಚಾರವಾಗಿ ಅವರು ಕಾನೂನು ಕ್ರಮವನ್ನು ತಗೆದುಕೊಂಡಿದ್ದಾರೆ. ಪತ್ರಕರ್ತೆ ಪ್ರಿಯಾ ರಮಣಿ ವಿರುದ್ದ ಅವರು ಮಾನಹಾನಿ ಕೇಸ್ ದಾಖಲಿಸಿದ್ದಾರೆ.
ಮೀಟೂ ಚಳುವಳಿಯ ಭಾಗವಾಗಿ ಎಂ.ಜೆ. ಅಕ್ಬರ್ ವಿರುದ್ಧ ಬಂದಿರುವ ಆರೋಪಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕೆಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಶುಕ್ರವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.