ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ
ಮಲೆನಾಡು ಭಾಗದ 6 ತಾಲೂಕಿನಲ್ಲಿ ರಜೆ ಘೋಷಣೆ
ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರೆಜೆ
ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ,
ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ರಜೆ ಘೋಷಣೆ
Rain Effect: ಕಾಫಿನಾಡಾದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯಿತಿದ್ದು, ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಆಗುತ್ತಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರಿನಲ್ಲಿ ಭಾರೀ ಮಳೆ ಆಗಿ, ಒಂದೆಡೆ ಕಾಫಿ ಬೆಳೆ ಕೊಚ್ಚಿ ಹೋಗ್ತಿದೆ. ಮತ್ತೊಂದೆಡೆ ಭಾರೀ ಮಳೆ-ಗಾಳಿಗೆ ಕಾಫಿ ಬೆಳೆ ನೆಲಕ್ಕೆ ಬೀಳಲು ಪ್ರಾರಂಭವಾಗಿದೆ.
Kerebete Motion Poster Release: ನಿರ್ದೇಶಕ ರಾಜ್ಗುರು ಅವರಿಗೆ ಇದು ಚೊಚ್ಚಲ ಸಿನಿಮಾ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಹಾಗೂ ಇನ್ನು ಅನೇಕ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದ್ದು ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ ರಾಜ್ಗುರು.
ಕೆರೆಬೇಟೆ ಗೌರಿ ಶಂಕರ್ ಎಸ್ಆರ್ಜಿ ನಾಯಕನಾಗಿ ನಟಿಸಿರುವ ಸಿನಿಮಾ. ಈ ಚಿತ್ರಕ್ಕೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಟ ಗೌರಿ ಶಂಕರ್ ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದರು. ರಾಜಹಂಸ ಸಿನಿಮಾ ರಿಲೀಸ್ ಆಗಿ 5 ವರ್ಷಗಳ ಮೇಲಾಗಿದೆ. ಇದೀಗ ಗೌರಿ ಶಂಕರ್ ಕೆರೆಬೇಟೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಆಗಸ್ಟ್ 9, 2019. ಮಲೆನಾಡಿಗರ ಪಾಲಿನ ಬ್ಲಾಕ್ ಡೇ
ಮಲೆನಾಡಿನಲ್ಲಿ ಒಂದೇ ರಾತ್ರಿ ಸುರಿದ 22 ಇಂಚು ಮಳೆ
ಗ್ರಾಮವೇ ಕೊಚ್ಚಿ ಹೋಗಿ, ಗುಡ್ಡಗಳು ಕಳಚಿದ್ದವು
ಉಟ್ಟ ಬಟ್ಟೆಯಲ್ಲಿ ಓಡಿ ಜೀವ ಉಳಿಸಿಕೊಂಡಿದ್ದ ಜನ
ಮರಗಿಡಿ ಗ್ರಾಮದಲ್ಲಿ ಐದು ಬಡ ಕುಟುಂಬಗಳು ವಾಸಿಸುತ್ತಿದ್ದು, ಶಾಶ್ವತ ನೆಲೆಯಿಲ್ಲದೆ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲರೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಕೂಡ ನೀಡಿಲ್ಲ.
ಕಾಫಿನಾಡ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ರಾಜ್ಯದ ಉದ್ದಗಲಕ್ಕೂ ಹರಿಯೋ ತುಂಗಾ-ಭದ್ರಾ-ಹೇಮಾವತಿ ನದಿ ಒಡಲಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಹೆಚ್ಚುತ್ತಿದೆ. ಕಾಫಿನಾಡ ಮಳೆಯಿಂದ ಒಂದೆಡೆ ಖುಷಿ, ಮತ್ತೊಂದೆಡೆ ನೋವು...
ಸುತ್ತಮುತ್ತಲಿನ ಹಳ್ಳಿಗರು ಒಂದೇ ಸಮಯಕ್ಕೆ ಸೇರಿ ಹಿಡಿಯುವ ಸಂಪ್ರದಾಯವಿದು. ಒಂದು ಬದಿಗೆ ಬಾಯ್ತೆರೆದಿರುವ ಬೆತ್ತದ ಬುಗುರಿ ಆಕಾರದ ಕೂಣಿಯನ್ನು ಕೈಯಲ್ಲಿ ಹಿಡಿದು ಒಂದೇ ಸಮಯಕ್ಕೆ ಕೆರೆಯ ಒಂದು ಕಡೆಯಿಂದ ಕೂಣಿಯನ್ನು ನೀರಲ್ಲಿ ಒತ್ತುತ್ತಾ, ಕೇ ಕೇ ಹಾಕುತ್ತಾ, ಪೈಪೊಟಿಯಲ್ಲಿ ಸಾಗುತ್ತಾರೆ.
ಕರಾವಳಿ-ಮಲೆನಾಡು ಭಾಗದಲ್ಲಿ 3 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಬಿರುಗಾಳಿ, ಮಿಂಚು ಗುಡುಗು ಸಹಿತ ವ್ಯಾಪಕ ಮಳೆ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ನಿರಂತರ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಜಲಪ್ರಳಯವೇ ಸೃಷ್ಟಿ ಆಗಿದೆ. ಜಿಲ್ಲೆಯಲ್ಲಿನ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿನ ಮನೆಗಳು ಸಂಪೂರ್ಣ ಜಲಾವೃತವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಹವಾಮಾನ ಇಲಾಖೆ ಕೂಡ ಭಾರೀ ಮಳೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಇನ್ನೆರಡು ದಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.