ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಕಳೆದ ಹಲವು ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದ ಹಲವು ಪ್ರಕರಣಗಳು ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಸಂಧಾನದ ಮೂಲಕ ಬಗೆಹರಿದವು.
ರಾಷ್ಟ್ರೀಯ ಲೋಕ್ ಅದಾಲತ್ ನ್ನು ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು. ಲೋಕ್ ಅದಾಲತ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಕೆ. ಜಿ. ಶಾಂತಿ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ-13 ಪೀಠಗಳನ್ನು, ಹುಬ್ಬಳ್ಳಿಯಲ್ಲಿ-18 ಪೀಠಗಳನ್ನು, ಕುಂದಗೋಳ-02 ನವಲಗುಂದ-02 ಮತ್ತು ಕಲಘಟಗಿಯಲ್ಲಿ-02, ಒಟ್ಟು 37 ಪೀಠಗಳನ್ನು ಸ್ಥಾಪಿಸಲಾಗಿತ್ತು.
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಮಾರ್ಚ್ 16 ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ಒಟ್ಟು 583 ಪ್ರಕರಣಗಳ ಪೈಕಿ 200 ಪ್ರಕರಣಗಳನ್ನು ರೂ.4,16,68,242/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಕಲಬುರಗಿ- ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಾಹನ ವಿಮೆ, ಸಿವಿಲ್ ಪ್ರಕರಣಗಳನ್ನು ಸಂಧಾನದ ಮೂಲಕ 227 ಪ್ರಕರಣ ವಿಲೇವಾರಿಗೊಳಿಸಿ ಕಕ್ಷಿದಾರರಿಗೆ ಒಟ್ಟು 7,10,69,520 ರೂ. ಪರಿಹಾರ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.
ಇದನ್ನೂ ಓದಿ: ಆನ್ ಲೈನ್ ಗೇಮಿಂಗ್ ಕಡಿವಾಣಕ್ಕೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಳೆದ ಆರು ವರ್ಷಗಳಿಂದ ವೈವಾಹಿಕ ಜೀವನದಿಂದ ಬೇರ್ಪಟ್ಟ ಜೋಡಿ ಪ್ರಕರಣ ಸಂಬಂಧಿಸಿದಂತೆ ಈಗ ಉಭಯದಂಪತಿಗಳಿಬ್ಬರು ಆರು ವರ್ಷದ ಹೆಣ್ಣು ಮಗುವಿಗಾಗಿ ಒಂದಾಗಿರುವ ಘಟನೆ ನಡೆದಿದೆ.
ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಲೋಕ ಅದಾಲತ್ ಮೂಲಕ ಅಂತಹ ಸುಖಾಂತ್ಯಗೊಳಿಸಲು ಮುಂದಾಗಿದೆ. ನ್ಯಾಯಾಧೀಶರಾದ ಕೆ.ಶಾಂತಿ ಹಾಗೂ ನಾಗಶ್ರೀ ನೇತೃತ್ವದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 37 ಪ್ರಕರಣಗಳ ಪೈಕಿ 17 ಪ್ರಕರಣಗಳನ್ನ ಬಗೆಹರಿಸಿ ಬೇರ್ಪಟ್ಟಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ.
ಇಲ್ಲಿನ ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 221 ಪ್ರಕರಣಗಳಲ್ಲಿ ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಪರಿಹಾರಕ್ಕೆ ಇತ್ಯರ್ಥಪಡಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.