ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಗುಂಡಿನ ದಾಳಿಗಳು ಆಗಾಗ್ಗೆ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿ ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಪಡೆಗಳು ಹೇಳಿವೆ.
ವರದಿಗಳ ಪ್ರಕಾರ ಬಿಎಸ್ಎಫ್ ಸಿಬ್ಬಂದಿ ಶುಕ್ರವಾರ (ಜುಲೈ 31) ರಾತ್ರಿ 10: 30 ರ ಸುಮಾರಿಗೆ ಗಡಿ ಪೋಸ್ಟ್ ಬಳಿ ಡ್ರೋನ್ ಅನ್ನು ಗಮನಿಸಿದರು, ನಂತರ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
19 ಬೆಟಾಲಿಯನ್ನ ಬಿಎಸ್ಎಫ್ನ ಪೆಟ್ರೋಲಿಂಗ್ ತಂಡವು ಹಿರಾನಗರ ಸೆಕ್ಟರ್ನ ಕತುವಾ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಕಂಡು ಅದರ ಮೇಲೆ ಎಂಟರಿಂದ ಒಂಬತ್ತು ಸುತ್ತು ಗುಂಡು ಹಾರಿಸಿತು.
ಗುಪ್ತಚರ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಪಾಕಿಸ್ತಾನ ಭಾರತದ ವಿರುದ್ಧ ಮತ್ತೊಂದು ದೊಡ್ಡ ಪಿತೂರಿಯಲ್ಲಿ ತೊಡಗಿದೆ. ಗಡಿಯುದ್ದಕ್ಕೂ 20 ಕ್ಕೂ ಹೆಚ್ಚು ಭಯೋತ್ಪಾದಕ ಶಿಬಿರಗಳು ಮತ್ತು ಎರಡು ಡಜನ್ಗಿಂತಲೂ ಹೆಚ್ಚು ಭಯೋತ್ಪಾದಕರ ಉಡಾವಣಾ ಪ್ಯಾಡ್ಗಳನ್ನು ಸಕ್ರಿಯಗೊಳಿಸಲಾಗಿದೆ.
ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ಆಗಸ್ಟ್ 2019 ರಿಂದ ಇದುವರೆಗೆ 84 ಬಾರಿ ಪಾಕ್ ಮೂಲಕದ ಭಯೋತ್ಪಾದಕರು ಅಕ್ರಮವಾಗಿ ಭಾರತದ ಗಡಿ ನುಸುಳಲು ಯತ್ನಿಸಿದ್ದು, ಒಟ್ಟು 59 ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿದ್ದಾರೆ .
ಜಮ್ಮು ಮತ್ತು ಕಾಶ್ಮೀರದ LoC ನಲ್ಲಿ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ ಪಾಕಿಸ್ತಾನಕ್ಕೆ ಭಾರತ ಕೂಡ ತಕ್ಕ ಪ್ರತಿಕ್ರಿಯೆ ನೀಡಿತ್ತು .ಇದಾದ ಬೆನ್ನಲ್ಲೇ ಈಗ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಯೋತ್ಪಾಧನೆ ಬಗ್ಗೆ ಪ್ರಸ್ತಾವಿಸದೆ ಮಾತುಕತೆಗೆ ಕರೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.