Rashmika Mandanna : ಪ್ಯಾನ್ ಇಂಡಿಯಾ ನಾಯಕಿ ರಶ್ಮಿಕಾ ಮಂದಣ್ಣ ವ್ಹೀಲ್ ಚೇರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬುಧವಾರ (ಜನವರಿ 22) ಶಂಶಾಬಾದ್ ವಿಮಾನ ನಿಲ್ದಾಣವನ್ನು ತಲುಪಿದಾಗ ಈ ವಿಚಾರ ಬಯಲಿಗೆ ಬಂದಿದೆ. ಕಾರಿನಿಂದ ಇಳಿಯುವಾಗಲೂ ಕಷ್ಟಪಟ್ಟು ಒಂದೇ ಕಾಲಿನಲ್ಲಿ ನಡೆಯುತ್ತಿದ್ದರು. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲು ಉಳುಕಿತ್ತು.
ಗಾಯ ಚಿಕ್ಕದಾಗಿದೆ ಎಂದು ಭಾವಿಸಲಾಗಿತ್ತು, ಆದರೆ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಅವರ ಸ್ಥಿತಿ ನೋಡಿದರೆ ಗಾಯ ದೊಡ್ಡದಾಗಿದೆ ಮತ್ತು ಗಂಭೀರವಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಅವರ ಇತ್ತೀಚಿನ ದೃಶ್ಯಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಈಕೆಯನ್ನ ಅಪ್ಪಿಕೊಳ್ಳಲು 1 ಗಂಟೆಗೆ 3100, 2 ಗಂಟೆಗೆ 6100..! ಹಗ್ ಮಾಡೊಕೆ ಇಷ್ಟು ದುಡ್ಡಾ..?
ರಶ್ಮಿಕಾ ಮಂದಣ್ಣ ಕಳೆದ ವರ್ಷ ಪುಷ್ಪ 2 ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ಪಡೆದರು. ಅಲ್ಲು ಅರ್ಜುನ್ ಅಭಿನಯದ ಈ ಚಿತ್ರವು ರೂ.1850 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಹುಬಲಿ 2 ದಾಖಲೆಗಳನ್ನು ಮುರಿದಿದೆ. ಈ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರನ್ನೂ ಆಕರ್ಷಿಸಿತ್ತು.
Rashu was spotted in a wheelchair at the airport due to a leg injury 🥺🫂
We cannot see you in these conditions @iamRashmika 😩
Wishing her a speedy recovery 🙏🏻❤️#RashmikaMandanna pic.twitter.com/NgGiZHBwSw— Rashmika Lover's❤️🩹 (@Rashuu_lovers) January 22, 2025
ಸದ್ಯ ಬಾಲಿವುಡ್ ಸ್ಟಾರ್ ಹೀರೋ ವಿಕ್ಕಿ ಕೌಶಲ್ ಅಭಿನಯದ ಚಾವಾ ಐತಿಹಾಸಿಕ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ರಶ್ಮಿಕಾ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.