Assembly Elections 2023: ಪ್ರಮುಖವಾಗಿ ಬಿಜೆಪಿಗೆ ಕೆಲ ನಾಯಕರ ವಲಸೆ, ಕಾಂಗ್ರೆಸ್ಗೆ ಅಭ್ಯರ್ಥಿ ಕೊರತೆ ಹೆಚ್ಚಾಗಿದೆ,ಅಭ್ಯರ್ಥಿ ಕೊರತೆಯ ನಡುವೆ ಗೆಲ್ಲೋದು ಹೇಗೆ ಅಂತಲೂ ಪ್ಲಾನ್ ರೂಪಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.. ಮೂರೂ ಪಕ್ಷಗಳು ಸಾಲು ಸಾಲು ಸಭೆಗಳು, ಪಾದಯಾತ್ರೆ, ರಥಯಾತ್ರೆಗಳನ್ನು ಹಮ್ಮಿಕೊಳ್ಳೋ ಮೂಲಕ ಅಧಿಕಾರದ ಗದ್ದುಗೆ ಏರಲು ತಂತ್ರ ಹೆಣೆದಿವೆ..
ಸಿಎಂ ಆಗೋ ದಾವಂತ ಇರೋದು ಸಿದ್ದು, ಡಿಕೆಶಿಗೆ. ನಮಗೆ ಯಾವುದೇ ಚುನಾವಣೆ ದಾವಂತ ಇಲ್ಲ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಬರಲ್ಲ. ನಮ್ಮ ಸರ್ಕಾರದ ಪೂರ್ಣ ಅವಧಿ ಪೂರೈಸುತ್ತವೆ ಎಂದಿದ್ದಾರೆ.
ಸಿಎಂ ಆಗಿದ್ದಾಗ ಗಾಣಿಗ ಸಮಾಜದ ಅನೇಕ ಬೇಡಿಕೆ ಈಡೇರಿಸಿದ್ದೇನೆ. ಆ ತೃಪ್ತಿ ಗಾಣಿಗ ಸಮಾಜಕ್ಕೂ ಇದೆ, ನನಗೂ ಇದೆ ಎಂದು ಮಾಜಿ ಸಿಎಂ ಬಿಎಸ್ವೈ ಹೇಳಿದ್ದಾರೆ. ಚುನಾವಣೆ ಬಂದಾಗ ಯಾರ ಬಣ್ಣ ಏನೂ ಅಂತಾ ಗೊತ್ತಾಗುತ್ತೆ ಎಂದು ಪ್ರಿಯಾಂಕ್ಗೆ ತಿರುಗೇಟು ನೀಡಿದ್ದಾರೆ..
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ ನಡೆಯಲಿದೆ. ರಾಜ್ಯದಲ್ಲಿ ಬರುವ ಮುಂದಿನ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಬಿಬಿಎಂಪಿ ಚುನಾವಣೆ ವಿಚಾರವಾಗಿಯೂ ಚರ್ಚೆ ನಡೆಯಲಿದೆ.
Karnataka Assembly Elections: 2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections) ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮದೇ ರೀತಿಯಲ್ಲಿ ಚುನಾವಣಾ ಕದನಕ್ಕೆ ತಾಲೀಮು ನಡೆಸಲು ಸಿದ್ಧತೆ ನಡೆಸಿವೆ. ಚುನಾವಣೆ ತಯಾರಿಗೆ ಡೆಲ್ಲಿ ನಾಯಕರ ರಾಜ್ಯ ಪ್ರವಾಸ ಕೂಡ ನಿಗದಿ ಆಗುತ್ತಿದ್ದು, ರಾಜ್ಯ ನಾಯಕರಿಗೆ ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧದ ಅಸ್ತ್ರಗಳನ್ನ ತಯಾರು ಮಾಡುವುದಕ್ಕೆ ಸನ್ನದ್ಧರಾಗುತ್ತಿದ್ದಾರೆ.
ಕಳೆದ ವರ್ಷದ ಅಂತ್ಯದಲ್ಲಿ ಜೆಡಿಎಸ್ ಪಕ್ಷ "ಜನತಾ ಪರ್ವ" ಎರಡನೇ ಅಧ್ಯಯವನ್ನು ಪ್ರಾರಂಭಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲುವ ಮೂಲಕ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ( HD Devegowda) ಕೂಡ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಹಲವಾರು ಭಾಷಣ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ಮುಖಂಡರನ್ನು ಗುರುವಾರ ಸಂಜೆ ರಾಷ್ಟ್ರೀಯ ರಾಜಧಾನಿಯಲ್ಲಿ ಭೇಟಿಯಾಗಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.