ಕರ್ನಾಟಕ ಚುನಾವಣೆಗೆ 1.5 ಲಕ್ಷ ಭದ್ರತಾ ಪಡೆಯಿಂದ ಕಣ್ಗಾವಲು-ಗೃಹ ಸಚಿವಾಲಯ

    

Last Updated : May 9, 2018, 11:35 PM IST
ಕರ್ನಾಟಕ ಚುನಾವಣೆಗೆ 1.5 ಲಕ್ಷ ಭದ್ರತಾ ಪಡೆಯಿಂದ ಕಣ್ಗಾವಲು-ಗೃಹ ಸಚಿವಾಲಯ  title=

ನವದೆಹಲಿ: ಮೇ 12 ರಂದು ನಡೆಯಲಿರುವ  ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 1.5 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.ಅದರಲ್ಲಿ  50,000 ಕ್ಕಿಂತ ಕೇಂದ್ರ ಪ್ಯಾರಾ ಮಿಲಿಟರಿ ಪಡೆ ಸೈನಿಕರು ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಚುನಾವಣೆ ಶಾಂತರೀತಿಯಲ್ಲಿ  ನಡೆಯಲು ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಐಟಿಬಿಪಿ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ. ಏಕ ಹಂತದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ  ಮತದಾನದ ಸಂದರ್ಭದಲ್ಲಿ ರಾಜ್ಯದ ಪ್ರತಿ ಮೂಲೆ ಈ ಪಡೆಗಳನ್ನು  ನಿಯೋಜಿಸಲಾಗುವುದು ಎಂದು,ಗೃಹ ಸಚಿವಾಲಯ ಪಿಟಿಐ ತಿಳಿಸಿದೆ.ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಚುನಾವಣಾ ಆಯೋಗ ಇತ್ತೀಚೆಗೆ ಕೇಂದ್ರ ಪಡೆಗಳ ಸಿಬ್ಬಂದಿಗಳನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಕರ್ನಾಟಕ ಚುನಾವಣೆಯಲ್ಲಿ 5.6 ಕೋಟಿ ಮತದಾರರು ತಮ್ಮ ಮತದಾನದ  ಹಕ್ಕನ್ನು ಚಲಾವಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ 2013 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 4.18 ಕೋಟಿ ಮತದಾರರು ಸಂಖ್ಯೆ ಇತ್ತು ಈಗ ಅದರಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಮತದಾನಕ್ಕಾಗಿ  ಒಟ್ಟು 58,000 ಬೂತ್ಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ 600 ಬೂತಗಳಲ್ಲಿ ಸಂಪೂರ್ಣವಾಗಿ ಮಹಿಳೆಯರೆ ನಿರ್ವಹಿಸುತ್ತಿದ್ದಾರೆ  ಇವುಗಳನ್ನು 'ಪಿಂಕ್ ಬೂತ್ಗಳು' ಎಂದು ಕರೆಯಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಎಸ್. ಕುಮಾರ್ ತಿಳಿಸಿದರು.  ಅಲ್ಲದೆ ಈ ಬಾರಿ ಮತದಾನಕ್ಕಾಗಿ  80,000 ವಿವಿಪ್ಯಾಟ್ ಮತ್ತು  80,000 ಎಲೆಕ್ಟ್ರಾನಿಕ್ ಇವಿಎಂ ಮತಯಂತ್ರಗಳನ್ನು  ಬಳಸಲಾಗುವುದು ಎಂದು ಎಎನ್ಐ ಗೆ ತಿಳಿಸಿದರು.

Trending News