ಬೆಂಗಳೂರಿನಲ್ಲಿ ಇಂದು ಕೂಡ ಮೋದಿ ಮೇನಿಯಾ ಕಂಟಿನ್ಯೂ. 6 ಕ್ಷೇತ್ರಗಳ ಟಾರ್ಗೆಟ್.. 8 ಕಿಲೋ ಮೀಟರ್ ರೋಡ್ ಶೋ. 8 ಕಿಲೋ ಮೀಟರ್ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ. ಸುಮಾರು ಮೂರು ಗಂಟೆಗಳ ಕಾಲ ಪ್ರಧಾನಿ ಮೋದಿ ಮತಯಾತ್ರೆ. 6 ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿ ಪ್ರಧಾನಿ ಮೋದಿ ಮತಬೇಟೆ.
ಬೆಂಗಳೂರು ಬಳಿಕ ಮೈಸೂರಿನಲ್ಲಿ ಪ್ರಧಾನಿ ಮೋದಿ ಸವಾರಿ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಮೋದಿ ವಿಶೇಷ ಪೂಜೆ. ಎಲಚಿಗೆರೆ ಬೋರೆ ಗ್ರಾಮದಲ್ಲಿ ಪ್ರಧಾನಿ ಸಾರ್ವಜನಿಕ ಸಭೆ. ನಂಜನಗೂಡು ತಾಲೂಕಿನ ಎಲಚಿಗೆರೆ ಬೋರೆ ಗ್ರಾಮದಲ್ಲಿ ಸಭೆ. ಸಭೆ ನಂತರ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಸಭೆ.
ಪ್ರಧಾನಿ ನಮೋ ಸುನಾಮಿಗೆ ಪೊಲೀಸರ ಸರ್ಪಗಾವಲು. ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್. 2 ಸಾವಿರ ಪೊಲೀಸರ ನಿಯೋಜನೆ ಮಾಡಿ ಬಿಗಿ ಭದ್ರತೆ. ಮೋದಿ ಸಂಚರಿಸುವ ಮಾರ್ಗದಲ್ಲಿ ಖಾಕಿ ಕಟ್ಟೆಚ್ಚರ. ಐತಿಹಾಸಿಕ ಕ್ಷಣಕ್ಕೆ ಸಾಕಿಯಾಗಲಿರುವ ಸಿಲಿಕಾನ್ ಸಿಟಿ. ಹೆಜ್ಜೆ ಹೆಜ್ಜೆಗೂ ಖಾಕಿ ಕೋಟೆ.. ಬಿಗಿ ಪೊಲೀಸ್ ಭದ್ರತೆ.
ದಾಸರಹಳ್ಳಿಯಲ್ಲಿ H.D.ಕುಮಾರಸ್ವಾಮಿ ರೋಡ್ ಶೋ. JDS ಅಭ್ಯರ್ಥಿ ಆರ್.ಮಂಜುನಾಥ್ ಪರ ಮತಯಾಚನೆ. ದಾಸರಹಳ್ಳಿ ಕ್ಷೇತ್ರದ ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಪ್ರಚಾರ. ರೋಡ್ ಶೋದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿ. ಪಂಚರತ್ನ ಯೋಜನೆಗಳಿಗಾಗಿ ಜೆಡಿಎಸ್ಗೆ ಮತನೀಡಿ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲಾಗುವುದು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.