Actors Who Left Us in their early age: ಇತ್ತೀಚಿನ ದಿನಗಳಲ್ಲಿ, ನಾವು ಬಹಳಷ್ಟು ದುರದೃಷ್ಟಕರ ಮತ್ತು ಅಕಾಲಿಕ ಮರಣಗಳನ್ನು ನೋಡಿದ್ದೇವೆ. ಇತ್ತೀಚಿಗೆ ಹಲವಾರು ಪ್ರತಿಭಾವಂತ ಮತ್ತು ಅದ್ಭುತ ಸೆಲೆಬ್ರಿಟಿಗಳನ್ನು ನಾವು ಕಳೆದುಕೊಂಡಿದ್ದೇವೆ.
ಬಾಲಿವುಡ್ ನಟ ಇರ್ಫಾನ್ ಖಾನ್ ಏಪ್ರಿಲ್ 29 ರ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಒಂದು ದಿನ ಮೊದಲು ಕರುಳಿನ ಸೋಂಕಿನಿಂದಾಗಿ ಅವರನ್ನು ಮುಮ್ಬೈನಲ್ಲಿನ ಕೋಕಿಲಾಬೆನ್ ಆಸ್ಪತ್ರೆಗೆ ಸಾಗಿಸಲಾಯಿತು.
ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ) ದಿವಂಗತ ಹಿರಿಯ ನಟ ಇರ್ಫಾನ್ ಖಾನ್ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಹೆಜ್ಜೆ ಇಡಲು ಸಹಾಯ ಮಾಡಿತು. 1986 ರಲ್ಲಿ, ನಿರ್ದೇಶಕ ಮೀರಾ ನಾಯರ್ ಅವರು ತಮ್ಮ "ಸಲಾಮ್ ಬಾಂಬೆ" ಚಿತ್ರದಲ್ಲಿ ನಟಿಸಲು ನಟರನ್ನು ಹುಡುಕಲು ಎನ್ಎಸ್ಡಿಗೆ ಭೇಟಿ ನೀಡಿದ್ದರು. ಅವರು ಸಣ್ಣ ಪಾತ್ರಕ್ಕಾಗಿ 20 ವರ್ಷದ ಇರ್ಫಾನ್ ಅವರನ್ನು ಆಯ್ಕೆ ಮಾಡಿದರು.
ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ನಿಧನದ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಧಾನಿ, ಇರ್ಫಾನ್ ಖಾನ್ ಅವರ ಅಕಾಲಿಕ ಸಾವು ಭಾರತೀಯ ಚಿತ್ರರಂಗ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ. ವಿಭಿನ್ನ ಮಾಧ್ಯಮಗಳಲ್ಲಿ ಅವರು ನಿರ್ವಹಿಸಿರುವ ಬಹುಮುಖಿ ಪ್ರದರ್ಶನಗಳ ಮೂಲಕ ಅವರನ್ನು ಸ್ಮರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿದ್ದು, ಅವರನ್ನು ಮುಂಬೈನ ಆಸ್ಪತ್ರೆಯೊಂದರಲ್ಲಿ ಭರ್ತಿ ಮಾಡಲಾಗಿದೆ. ಇತ್ತೀಚೆಗಷ್ಟೇ ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ ನಿಧನರಾಗಿದ್ದಾರೆ.
ಹಲವು ತಿಂಗಳುಗಳ ಕಾಲ ಅನಾರೋಗ್ಯದಿಂದ ಬಳಲುತಿದ್ದ ನಟ ಇರ್ಫಾನ್ ಖಾನ್ ಈಗ ಶೂಟಿಂಗ್ ಗೆ ಹಾಜರಾಗಿದ್ದಾರೆ. ಲಂಡನ್ ನಲ್ಲಿ ಅವರು ತಮ್ಮ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.ಈಗ ಅಲ್ಲಿಂದ ವಾಪಾಸ್ ಆದ ನಂತರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.