ದಿಗ್ಗಜ ಬಾಲಿವುಡ್ ನಟ Irrfan Khan ನಿಧನ, NSD ಯಿಂದ Bollywood ವರೆಗೆ ಇರ್ಫಾನ್ ಪಯಣ ಇಲ್ಲಿದೆ

ಸರ್ಕಾರ್ ಇರ್ಫಾನ್ ಅವರ ನಿಧನದ ಸುದ್ದಿಯನು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.

Last Updated : Apr 29, 2020, 01:44 PM IST
ದಿಗ್ಗಜ ಬಾಲಿವುಡ್ ನಟ Irrfan Khan ನಿಧನ, NSD ಯಿಂದ Bollywood ವರೆಗೆ ಇರ್ಫಾನ್ ಪಯಣ ಇಲ್ಲಿದೆ title=

ನವದೆಹಲಿ: ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ(NSD)ಯಿಂದ ತಮ್ಮ ಪ್ರಯಾಣವನ್ನು ಆರಂಭಿಸಿದ್ದ ಇರ್ಫಾನ್ ಬಳಿಕ ಬಾಲಿವುಡ್ ಸೇರಿದಂತೆ ಹಾಲಿವುಡ್ ಚಿತ್ರಗಳಲ್ಲಿಯೂ ಕೂಡ ತಮ್ಮ ಅದ್ಭುತ ಅಭಿನಯದ ಛಾಪು ಮೂಡಿಸಿದ್ದರು. ಸಣ್ಣ ಸಣ್ಣ ಪಾತ್ರಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದ ಇರ್ಫಾನ್ ಬಳಿಕ ಥಿಯೇಟರ್ ನಿಂದ ಟಿವಿ, ಟಿವಿಯಿಂದ ಬೆಳ್ಳಿ ಪರದೆಯವರೆಗೆ ದೀರ್ಘ ಪ್ರಯಾಣವನ್ನೇ ಮಾಡಿದ್ದಾರೆ. ಹಾಗಾದರೆ ಬನ್ನಿ ಭಾರತೀಯ ಚಿತ್ರರಂಗ ಕಂಡ ಈ ಅತ್ಯದ್ಭುತ ನಟನ ಕೆಲ ವಿಶೇಷ ಸಂಗತಿಗಳನ್ನು ಅರಿಯೋಣ

  1. ಜನವರಿ 7, 1967ರಲ್ಲಿ ರಾಜಸ್ಥಾನದ ಜೈಪುರ್ ನಲ್ಲಿ ಸಾಹಬ್ಜಾದೆ ಇರ್ಫಾನ್ ಖಾನ್ ಅವರ ಜನನ. ಅವರ ತಂದೆ ವೃತ್ತಿಯಲ್ಲಿ ಓರ್ವ ಟೈರ್ ವ್ಯಾಪಾರಿಯಾಗಿದ್ದರು.
  2. MA ವ್ಯಾಸಂಗ ಮಾಡುತ್ತಿರುವಾಗಲೇ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ವತಿಯಿಂದ ವಿದ್ಯಾಭಾಸಕ್ಕೆ ಸ್ಕಾಲರ್ ಶಿಪ್ ದೊರೆಯಿತು. ಹೀಗಾಗಿ 1984ರಲ್ಲಿ ಇರ್ಫಾನ್ NSD ಮೂಲಕ ಅಭಿನಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಅಂದರೆ, ಅಭಿನಯದಲ್ಲಿ ಡಿಗ್ರೀ ಪಡೆಯಲು ಅವರು NSDಗೆ ಪ್ರವೇಶ ಪಡೆದರು.
  3. NSDಮೂಲಕ ಪದವಿ ಪಡೆದ ಇರ್ಫಾನ್ ಖಾನ್ ದೆಹಲಿಯಲ್ಲಿಯೇ ರಂಗಭೂಮಿಯಲ್ಲಿ ಕೆಲಸ ಮಾಡಲು ಆರಂಭಿಸಿ ಅಪಾರ ಖ್ಯಾತಿ ಪಡೆದರು.
  4. ಬಳಿಕ ಇರ್ಫಾನ್ ಖಾನ್ ದೆಹಲಿಯಿಂದ ಮುಂಬೈಗೆ ಪ್ರಯಾಣ ಬೆಳೆಸಿದರು. ಮುಂಬೈ ತಲುಪಿದ ಅವರು 'ಚಾಣಕ್ಯ', 'ಭಾರತ ಏಕ್ ಖೋಜ್', 'ಸಾರಾ ಜಹಾನ್ ಹಮಾರಾ', 'ಬನೆಗಿ ಅಪನೀ ಬಾತ್', 'ಚಂದ್ರಕಾಂತಾ'  ಹಾಗೂ 'ಶ್ರೀಕಾಂತ್' ಗಳಂತಹ ಟಿವಿ ಧಾರಾವಾಹಿಗಳಲ್ಲಿ ಕಾರ್ಯನಿರ್ವಹಿಸಿದರು.
  5. ಜೊತೆಗೆ ಮುಂಬೈನ ರಂಗಭೂಮಿ ಹಾಗೂ ಟಿವಿ ಸಿರಿಯಲ್ ಗಳಲ್ಲಿ ಕೆಲಸ ಮಾಡಿ ಇರ್ಫಾನ್ ಅಪಾರ ಖ್ಯಾತಿಯನ್ನು ಗಳಿಸಿದರು. ಈ ವೇಳೆ ಚಿತ್ರ ನಿರ್ಮಾಪಕಿ ಮೀರಾ ನಾಯರ್ ತಮ್ಮ ಚಿತ್ರ 'ಸಲಾಂ ಬಾಂಬೆ' ಚಿತ್ರದಲ್ಲಿ ಅವರಿಗೆ ಕ್ಯಾಮಿಯೋ ರೋಲ್ ಆಫರ್ ನೀಡುತ್ತಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದಲ್ಲಿ ಇರ್ಫಾನ್ ನಿರ್ವಹಿಸಿದ ಪಾತ್ರಕ್ಕೆ ಕತ್ತರಿ ಹಾಕಲಾಗುತ್ತದೆ.
  6. ಇದಾದ ಬಳಿಕ ಇರ್ಫಾನ್ 1990 ರಲ್ಲಿ ಬಿಡುಗಡೆಯಾದ 'ಏಕ್ ಡಾಕ್ಟರ್ ಕಿ ಮೌತ್' ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸುತ್ತಾರೆ. ಚಿತ್ರದಲ್ಲಿ ಅವರು ನಿರ್ವಹಿಸಿದ ಪಾತ್ರಕ್ಕೆ ಸಮೀಕ್ಷಕರ ಭಾರಿ ಮನ್ನಣೆ ದೊರೆಯುತ್ತದೆ. ನಂತರ ಅವರು ಇತರ ಬಾಲಿವುಡ್ ಚಿತ್ರಗಳಾದ 'ದಿ ವಾರಿಯರ್' ಹಾಗೂ 'ಮಕಬೂಲ್' ಗಳಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
  7. 2005 ರಲ್ಲಿ ಬಿಡುಗಡೆಯಾದ 'ರೋಗ್' ಚಿತ್ರದಲ್ಲಿ ಇರ್ಫಾನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಬಳಿಕ ಬಂದ 'ಹಾಸಿಲ್' ಚಿತ್ರಕ್ಕಾಗಿ ಇರ್ಫಾನ್ ಆ ವರ್ಷದ 'ಬೆಸ್ಟ್ ವಿಲೆನ್' ಫಿಲ್ಮ್ಫೇರ್ ಪ್ರಶಸ್ತಿಗೆ ಭಾಜನರಾಗುತ್ತಾರೆ.
  8. 'ಸ್ಲಂ ಡಾಗ್ ಮಿಲೆನಿಯರ್' ಚಿತ್ರದಲ್ಲಿಯೂ ಕೂಡ ಇರ್ಫಾನ್ ಪೋಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
  9. 'ಪಾನ್ ಸಿಂಗ್ ತೋಮರ್' ಚಿತ್ರದಲ್ಲಿನ ನಟನೆಗಾಗಿ ಇರ್ಫಾನ್ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು, ನಂತರ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಕೂಡ ಗೌರವಿಸಿದೆ.
  10. 23 ಫೆಬ್ರುವರಿ 1995ರಲ್ಲಿ NSD ಮೂಲಕ ಪದವಿ ಪಡೆದ ಸುತಪಾ ಸಿಕಂದರ್ ಅವರ ಜೊತೆಗೆ ಇರ್ಫಾನ್ ವಿವಾಹವಾಗಿದ್ದಾರೆ. ಅವರಿಗೆ ಬಾಬಿಲ್ ಹಾಗೂ ಅಯಾನ್ ಹೆಸರಿನ ಇಬ್ಬರು ಪುತ್ರರಿದ್ದಾರೆ.
     

Trending News