ಹುಬ್ಬಳ್ಳಿ ನಗರದಲ್ಲಿ ನಡೆದ ಗಲಭೆಗೆ ಸಂಭಂದಿಸಿದಂತೆ ಖಾಕಿ ಡ್ರಿಲ್ ವೇಳೆ ಪಠಾಣ್ ಸ್ಪೋಟಕ ಸತ್ಯ ಕಕ್ಕಿದ್ದಾನೆ. ವಾಟ್ಸ್ ಆಪ್ ಗ್ರೂಫ್ ರಚಿಸಿದ್ದು ನಿಜ. ವಸೀಂ ಭೇಪಾರಿ, ತುಫೆಲ್ ಮಲ್ಲಾ ಜೊತೆ ಸೇರಿ ಮಸಲತ್ತು ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾನೆ.
ಅಬ್ಬಯ್ಯನವ್ರ ವೋಟ್ ಬ್ಯಾಂಕ್ ರಾಜಕಾರಣಕ್ಕಿಂತ ರಾಜ್ಯದ ನೆಮ್ಮದಿ ಮುಖ್ಯ. ಇದು ಕಣ್ಣು ಒರೆಸುವ ತಂತ್ರ ಅಲ್ಲ. ನಮಗೆ ದೇಶದ ನೆಮ್ಮದಿ ಮೊದಲು, ದೇಶದ ಏಕತೆ ಮೊದಲು. ಯಾವ ಸಂಘಟನೆಯನ್ನ ರದ್ದು ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ.
ಹುಬ್ಬಳ್ಳಿ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ವಾಸಿಂ ಪಠಾಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ವಾಸಿಂ ತಲೆಮರೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಈ ಬೆನ್ನಲ್ಲೇ ಪೊಲೀಸರು ವಾಸಿಂ ಪಠಾಣ್ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಆಡಳಿತ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಡಿ.ಕೆ. ಶಿವಕುಮಾರ್, ಹುಬ್ಬಳ್ಳಿ ಗಲಭೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಾಗಲಿ , ಸಚಿವ ಆರ್.ಅಶೋಕ್ ಅವರಾಗಲಿ ಪರಿಸ್ಥಿತಿ ತಿಳಿಗೊಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಬದಲಿಗೆ ಅವರು ಬೇಕು ಬೇಕೆಂದೇ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿ ಕಾರಿದರು.
ಕರ್ನಾಟಕದ ಮೀರ್ ಸಾಧಿಕ್ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಈಗ ಒಂದರ ಮೇಲೊಂದರಂತೆನಡೆಯುತ್ತಿರುವ ಕೋಮು ಪ್ರಚೋದನೆ ಚಟುವಟಿಕೆಗಳ ಹಿಂದಿರುವುದು ನಿಮ್ಮ ಕುಚೇಷ್ಟೆಯೋ ಅಥವಾ ಕೆಪಿಸಿಸಿಯ ಭ್ರಷ್ಟ ಅಧ್ಯಕ್ಷನ ಕೈವಾಡವೋ ಎಂದು ಬಿಜೆಪಿ ಪ್ರಶ್ನಿಸಿದೆ.
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ರೂ ಅವರಿಗೆ ಶಿಕ್ಷೆ ಕೊಟ್ಟೇ ಕೊಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡೋದು ಅಕ್ಷಮ್ಯ ಅಪರಾಧ ಅಂತಾ ಸಿಎಂ ಹೇಳಿದ್ದಾರೆ. ಇನ್ನು ಸಂಪುಟ ವಿಸ್ತರಣೆ ವಿಚಾರವಾಗಿ ಹೈಕಮಾಂಡ್ ಕರೆದ ಕೂಡ್ಲೇ ದೆಹಲಿಗೆ ತೆರಳೋದಾಗಿ ಸಿಎಂ ಹೇಳಿದ್ದಾರೆ.
ಹುಬ್ಬಳ್ಳಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟು ನೋಡಿ ಎಂದು ಧಾರವಾಡದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ... ಈ ಕುರಿತು ಮಾತನಾಡಿರುವ ಅವರು, ಶಾಸಕಾಂಗ ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ. ಪೊಲೀಸ ಅಧಿಕಾರಿಗಳನ್ನು ತಮಗೇ ಬೇಕಾದವರನ್ನು ಹಾಕಿಕೊಳ್ಳುತ್ತಾರೆ. ಎಂಎಲ್ಎ, ಮಿನಿಸ್ಟರ್ಗಳು ತಮಗೆ ಬೇಕಾದವರನ್ನು ಹಾಕೋತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಆದರೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ಹಾಕಿಕೊಳ್ಳುತ್ತಾರೆ. ಹಾಗೆ ಬಂದವನ ನಿಷ್ಠೆ ಯಾರಿಗೆ ಇರುತ್ತೆ?
ಹೀಗಾಗಿ ಹುಬ್ಬಳ್ಳಿ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪುಂಡರು ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇವರು ಪೊಲೀಸರನ್ನೆ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.