Hubli : ಪೊಲೀಸರ ಮೇಲೆ ಕಲ್ಲು ತೂರಾಟ : ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿ

ಹೀಗಾಗಿ ಹುಬ್ಬಳ್ಳಿ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪುಂಡರು ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇವರು ಪೊಲೀಸರನ್ನೆ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Zee Kannada News Desk | Last Updated : Apr 17, 2022, 09:53 AM IST
  • ಮಕ್ಕಾ ಮಸೀದಿ ಚಿತ್ರದ‌ ಮೇಲೆ ಕೇಸರಿ ಧ್ವಜ ಹಾರಿಸಿದ ಪೋಟೋ ಎಡಿಟ್ ಮಾಡಿ ಶೆರ್ ಮಾಡಿದೆ ಯುವಕ
  • ಹುಬ್ಬಳ್ಳಿ ನಗರದಲ್ಲಿ ಅಲರ್ಟ್ ಘೋಷಣೆ ಮಾಡಿದ ಪೊಲೀಸರು
  • ಹುಬ್ಬಳ್ಳಿ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ
Hubli : ಪೊಲೀಸರ ಮೇಲೆ ಕಲ್ಲು ತೂರಾಟ : ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿ title=

ಹುಬ್ಬಳ್ಳಿ : ಮಕ್ಕಾ ಮಸೀದಿ ಚಿತ್ರದ‌ ಮೇಲೆ ಕೇಸರಿ ಧ್ವಜ ಹಾರಿಸಿದ ಪೋಟೋ ಎಡಿಟ್ ಮಾಡಿ ಶೆರ್ ಮಾಡಿದೆ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಪೊಲೀಸರು ಹುಬ್ಬಳ್ಳಿ ನಗರದಲ್ಲಿ ಅಲರ್ಟ್ ಘೋಷಣೆ ಮಾಡಿದ್ದಾರೆ. 

ಬಂಧಿತ ಯುವಕ ತಲೆ ಕೆಟ್ಟರೆ ಇಲ್ಲು ಧ್ವಜ ಹಾರಿಸುತ್ತೇವೆ ಎಂದು ಪೋಸ್ಟ್ ಮಾಡಿದ್ದ. ಆದ್ದರಿಂದ ಈ ಯುವಕನ್ನು ಬಂಧಿಸುವಂತೆ ಮುಸ್ಲಿಂ ಸಮುದಾಯದ ಜನ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಠಾಣೆ ಮುಂದೆ‌ ಜಮಾಯಿಸಿದರು, ನಂತರ ಉದ್ರಿಕ್ತಗೊಂಡ ಕಿಡಿಗೇಡಿಗಳು ಬಸ್ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಚ್ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿದರು. ಕಿಡಗೆಡಿಗಳು ಉಪ ನಗರ ಠಾಣೆ ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾರೆ. ಅಲ್ಲದೆ, ಹಳೆ ಹುಬ್ಬಳ್ಳಿಯ ದಿಡ್ಡಿ‌ ಓಣಿಯ ಗುರುವ ಆಸ್ಪತ್ರೆಗೆ ನುಗ್ಗಿ ದಾಂದಲೇ ನಡೆಸಿ‌ ಧ್ವಂಸ ಮಾಡಿದ್ದಾರೆ. ಘಟನೆಯಲ್ಲಿ ಪೂರ್ವ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಕಾಡದೇವರ ಮಠ ಗಾಯಗೊಂಡಿದ್ದಾರೆ.

ಇದನ್ನೂ ಓದಿ : "ಚುನಾವಣೆ ಗೆಲ್ಲಲು ಮೋದಿ ಮಂತ್ರ ಸಾಲೋದಿಲ್ಲ : ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ"

ಹೀಗಾಗಿ ಹುಬ್ಬಳ್ಳಿ ನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪುಂಡರು ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇವರು ಪೊಲೀಸರನ್ನೆ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ರಾತ್ರಿ ಕಲ್ಲು ತೂರಾಟದಿಂದ ‌ಹಳೆ ಹುಬ್ಬಳ್ಳಿ ಸರ್ಕಲ್ ನಲ್ಲಿ ರಾಶಿ ರಾಶಿ ಕಲ್ಲು- ಇಟ್ಟಿಗೆ ಬಿದ್ದಿವೆ ಇವುಗಳನ್ನು ನಗರ ಪಾಲಿಕೆ ಸಿಬ್ಬಂದಿ ಸ್ವಚ್ಚ ಮಾಡಿ, ಟ್ರಾಕ್ಟರ್ ನಲ್ಲಿ ತುಂಬಿಕೊಂಡು ಹೊಗುತ್ತಿದ್ದಾರೆ. 

ಗಲಭೆಗೆ ಸಂಭಂದಿಸಿದಂತೆ ಇದುವರೆಗೆ 20 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣ ದಾಖಲು ಮಾಡಿದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ, ಪೊಲೀಸರ‌ ಮೇಲೆ ಹಲ್ಲೆ ಗಲಭೆ ಸೃಷ್ಟಿದಕ್ಕೆ ಪ್ರತ್ಯೇಕ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. 

ಇದನ್ನೂ ಓದಿ : ಐಸಿಎಸ್ ಗೆ ಉಗ್ರರ ನೇಮಕಾತಿ ಮತ್ತು ತರಬೇತಿ ವಿಚಾರವಾಗಿ ಮೂವರ ಮೇಲೆ ಎನ್ಐಎ ಚಾರ್ಜಶೀಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News