ಸುಳ್ಳು ಕೇಸ್ ಹಾಕಿಕೊಂಡು, ಜನರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದವರು ಐಜಿಪಿ ಅವರನ್ನೇ ದಫೇದಾರ ಅಂತಾ ಕರೆದಿದ್ದಾರೆ. ನಾಟಕ, ದಬ್ಬಾಳಿಕೆ ಎಷ್ಟು ದಿನ ನಡೆಯಲು ಸಾಧ್ಯ? ಜನ ಸಾಕಷ್ಟು ಸಹಿಸಿಕೊಂಡಿದ್ದಾರೆ. ಇಂತಹ ದೌರ್ಜನ್ಯ ಎಷ್ಟು ದಿನ ನಡೆಯಲು ಸಾಧ್ಯ? ಇವರ ದಬ್ಬಾಳಿಕೆ ಕೊನೆಯಾಗುವ ದಿನಗಳು ಬಂದಿದೆ, ಕೊನೆಯಾಗುತ್ತದೆ- ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ
ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್.ಡಿ. ರೇವಣ್ಣ ಅವರೇ ಕಾರಣ ಎಂದು ಭಾವಿಸಿ ಶಾಸಕರು ರಾಜೀನಾಮೆ ನೀಡಿದ್ದರೆ, ನಾವೆಲ್ಲಾ ವಾಪಸ್ ಬಂದು ಮೈತ್ರಿ ಸರ್ಕಾರಕ್ಕೆ ಬೆಂಬಲಿಸುತ್ತೇವೆ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಲಿ, ನಾನೇ ಎಚ್.ಡಿ. ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುವೆ- ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ
ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರಾದ ಕಾರ್ಲೆ ಇಂದ್ರೇಶ್, ಹೊಳೇನರಸೀಪುರದ ಹರದನಹಳ್ಳಿಯಲ್ಲಿರುವ ಪಾಪಣ್ಣಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತಿಪ್ಪೇಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ರೇವಣ್ಣರವರೇ ನೀವು ಸಾಮಾನ್ಯ ಜನರಲ್ಲ! ಈ ದೇಶದ ಮಾಜಿ ಪ್ರಧಾನಿಯ ಮಗ. ಸಂವಿಧಾನ ಭಾರತದ ಎಲ್ಲ ಪ್ರಜೆಗೂ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕು ನೀಡಿದೆ. ಹಾಗಂತ ಇನೊಬ್ಬರಿಗೆ ಮನಸಿಗೆ ಘಾಸಿ ಮಾಡಬಾರದು ಎಂದು ಜಗ್ಗೇಶ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.