ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ನಡೆಸುತ್ತಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡು ಯಾತ್ರೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೂ ಬಿಜೆಪಿ ಕೂಡ ವಿಜಯ ಸಂಕಲ್ಪ ಯಾತ್ರೆ, ಭೂತ್ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸುತ್ತಿದೆ. ಜೊತೆಗೆ ಜೆಡಿಎಸ್ ಪಂಚ ರತ್ನ ಯಾತ್ರೆ ಕೂಡ ಸಾಗುತ್ತಿದ್ದೂ ಎಲ್ಲಾರು ಚುನಾವಣೆಯ ತಯಾರಿಯಲ್ಲಿದ್ದು, ಈ ಬಾರಿಯ ಅಧಿವೇಶನಕ್ಕೆ ಮೂರು ಪಕ್ಷದ ನಾಯಕರು ಗೈರಾಗುವ ಸಾಧ್ಯತೆ ಜಾಸ್ತಿಯಿದೆ.
ಎರಡು ಸದನ ಉದ್ದೇಶಿಸಿ ರಾಜ್ಯಪಾಲರಿಂದ ಭಾಷಣ..!
ಬಿಜೆಪಿ ವಿರುದ್ಧ ಗುಡುಗಲು ಕೈ ಮತ್ತು ದಳ ಸಜ್ಜು..!
ಬಜೆಟ್ ಮೂಲಕ ಬಿಜೆಪಿ ಪ್ರಣಾಳಿಕೆ ತೋರಿಸಲು ಪ್ಲಾನ್
ಫೆ. 17ಕ್ಕೆ ಕಾಮನ್ ಮ್ಯಾನ್ನಿಂದ 2ನೇ ಬಾರಿ ಬಜೆಟ್
ಸಿಎಂ ಬಸವರಾಜ ಬೊಮ್ಮಯಿ ಸರ್ಕಾರದ ಕೊನೆಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲು ಜಂಟಿ ಅಧಿವೇಶನಕ ನಡೆಯಲಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವೋರ್ ಚಂದ್ ಗೇಹ್ಲೋಟ್ ಭಾಷಣ ಮಾಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಸರ್ಕಾರದ ಸಾಧನೆಯ ಪೂರ್ತಿ ವಿವರವನ್ನ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಬ್ರಾಹ್ಮಣ ಸಿಎಂ ಎಂಬ ವಿಚಾರಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿ, ನಮ್ಮ ಹೈಕಮಾಂಡ್ ಯಾವಾಗಲೂ ಜಾತಿ ಆಧಾರದ ಮೇಲೆ ಯಾರನ್ನು ಸಿಎಂ ಮಾಡಿಲ್ಲ. ಎಚ್ ಡಿ ಕುಮಾರಸ್ವಾಮಿ ಜಾತಿ ಆಧಾರಿತವಾದ ವಿಚಾರವನ್ನು ತೆಗೆದಿದ್ದಾರೆ. ಅವರಿಗೆ ಅವರ ಕುಟುಂಬದವರೇ ಯಾರಾದ್ರೂ ಸಿಎಂ ಆಗಬೇಕು ಅಷ್ಟೇ ಎಂದರು.
ದಾವಣಗೆರೆ ಜಿಲ್ಲೆಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥ ಯಾತ್ರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಜಾರಿ ಮಾಡ್ತೀವಿ ಎಂದು ಕೊಂಡಜ್ಜಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ರು.
ಸಂಡೂರಿಗೆ ತೆರಳೋ ಮಾರ್ಗ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಟೀ, ಮಂಡಕ್ಕಿ ಸವಿದಿದ್ದಾರೆ.. ಕುಷ್ಟಗಿಯಲ್ಲಿ ಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ವೇಳೆ ಸಣ್ಣ ಹೋಟೆಲ್ಗೆ ಭೇಟಿ ನೀಡಿದ್ದು, ಹೋಟೆಲ್ ಮಾಲೀಕ ನಾಗಪ್ಪ ಜತೆ ಚಹಾ ಸೇವಿಸುತ್ತಾ ಕೆಲವೊತ್ತು ಮಾತುಕತೆ ನಡೆಸಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಯಲಿದೆ.. ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಬೈಕ್ ರ್ಯಾಲಿ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ಮಾಡಲಾಗಿದೆ.
ಕುಮಾರಸ್ವಾಮಿ ಭಾಷಣದ ವೇಳೆ ವ್ಯಕ್ತಿಯೊಬ್ಬ ಕುಮಾರಸ್ವಾಮಿಗೆ ಪ್ರಶ್ನೆ ಕೇಳಿದ್ದಾನೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡ್ತೀರಾ ನೀವು..? ಎಂದು ಪ್ರಶ್ನಿಸಿದ್ದಾನೆ. ಆಗ ಟಿಕೆಟ್ ಕೊಡಬೇಕಾ ? ಎಂದ ಹೆಚ್.ಡಿ.ಕುಮಾರಸ್ವಾಮಿ, ಆ ಚಿಂತೆ ಇಲ್ಲಿ ಯಾಕೆ ನಿನಗೆ, ಯಾವ ಊರು ನಿನ್ನದು..? ಎಂದು ಪ್ರಶ್ನಿಸಿದ್ದಾರೆ.
ವೇಶ್ಯಾವಾಟಿಕೆ ಮತ್ತು ವರ್ಗಾವಣೆ ದಂಧೆಯ ಕಿಂಗ್ ಪಿನ್ ಎನಿಸಿಕೊಂಡಿರುವ ಸ್ಯಾಂಟ್ರೊ ರವಿ ಹೆಸರು ಈಗ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ರಾಜಕೀಯ ಕಿತ್ತಾಟ ಶುರುವಾಗಿದ್ದು ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕರು ಕೆಂಡಕಾರುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಲಿಂಕ್ ಕೇಸ್ ವಿಚಾರ..
ಯಾರು ಏನೆ ಹೇಳಿದ್ರು ತನಿಖೆಯಲ್ಲಿ ಸಂಪೂರ್ಣ ಮಾಹಿತಿ...
ಬೀದರ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ...
20 ವರ್ಷದಲ್ಲಿ ಯಾರ ಯಾರ ಜೊತೆಗೆ ರವಿಗೆ ಸಂಬಂಧವಿದೆ...
ಈ ಬಗ್ಗೆ ತನಿಖೆಯಾಗಲಿ ಅಂತ ಹೇಳಿದ್ದೆನೆ ಎಂದ ಸಿಎಂ...
ಯಾರಿದ್ದಾರೆ ಕಾದೂ ನೋಡಿ ಎಂದು ಬಾಂಬ್ ಹಾಕಿದ ಸಿಎಂ...
ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿಕೆ ಗೆ ಟಾಂಗ್ ಕೊಟ್ಟ ಸಿಎಂ
ಗುಬ್ಬಿಯಲ್ಲಿ ಸ್ಪರ್ಧಿಸುವಂತೆ ಹೆಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ಆಹ್ವಾನ ವಿಚಾರ. ಕ್ಷೇತ್ರ ಹುಡಿಕೊಂಡು ಹೋಗೋಕೆ ನಾನೇನ್ ಟೂರಿಂಗ್ ಟಾಕೀಸಾ..? ನಾನು ಎಲ್ಲಿ ನಿಲ್ಲಬೇಕು ಅಂತಾ ಅವರ ಪರ್ಮಿಷನ್ ತಗೊಂಡು ನಿಲ್ಲಬೇಕಾ? ನಾನ್ ಎಲ್ಲಿ ನಿಲ್ಬೇಕು ಅಂತ ಜನ ತೀರ್ಮಾನಿಸ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಇದು ಭಾಗ್ಯದ ಕಾರ್ಯಕ್ರಮ ಅಲ್ಲ, ಪಂಚರತ್ನ ಕಾರ್ಯಕ್ರಮ ಎಂದು ಸಿದ್ದರಾಮಯ್ಯ ಹೆಸರೇಳದೆ ಹೆಚ್.ಡಿ.ಕೆ ಟಾಂಗ್ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಎಚ್ಡಿಕೆ, ನನ್ನ ಇಡೀ ಜೀವನ ಮುಡಿಪಾಗಿಟ್ರೂ ಋಣ ತೀರಿಸಲಾಗಲ್ಲ ಎಂದು ಹೇಳಿದ್ರು..
ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್ನವರೇ ಸಾಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ನಾನು ಅವರ ಇವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಗೆಲುವು.. ಸೋಲು ಜನರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೆ ಗುರಿಯಾಗಿದ್ದ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಅವರ ಮನೆಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ದುಃಖತಪ್ತ ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.