ಚೈತ್ರ ನವರಾತ್ರಿ 2023: ನವರಾತ್ರಿಯ ಮೊದಲ ದಿನದಂದು ದೇವಿಯ ಶೈಲಪುತ್ರಿ ರೂಪವನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತಾಯಿ ಪಾರ್ವತಿ ಪರ್ವತರಾಜ ಹಿಮಾಲಯದ ಮನೆಯಲ್ಲಿ ಶೈಲಪುತ್ರಿ ರೂಪದಲ್ಲಿ ಜನಿಸಿದರು. ಶೈಲ ಎಂದರೆ ಪರ್ವತ ಎಂದರ್ಥ, ಆದ್ದರಿಂದ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಯಿತು.
ಕೇರಳದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದೊಳಗೆ ತಮಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ. ದೇವರ ನಾಡಿನ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವಿಯ ದರ್ಶನಕ್ಕೆ ನಟಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ದೇವಾಲಯದ ಅಧಿಕಾರಿಗಳು, ಹಿಂದೂಗಳಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವಿರುವುದರಿಂದ ತಾವು ಪ್ರೋಟೋಕಾಲ್ ಅನುಸರಿಸಿರುವುದಾಗಿ ತಿಳಿಸಿದ್ದಾರೆ.
ಪಿಟಿಐ ವರದಿ ಪ್ರಕಾರ, ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಅವರನ್ನು ಹಿಂತಿರುಗಿ ಕರೆತರಲು ಹೋದ ಪೊಲೀಸ್ ತಂಡಕ್ಕೂ ನಿರಾಸೆಯಾಗಿದೆ. ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ. ಇದೀಗ ಆಕೆಯನ್ನು ಕರೆತರಲೆಂದು ಪೊಲೀಸರು ದೊಡ್ಡ ತಂಡವನ್ನೇ ಕಳುಹಿಸಿದ್ದಾರೆ ಎನ್ನಲಾಗಿದೆ.
Maha Shivratri Vastu Tips - ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಪಾರ್ವತಿ ದೇವಿಯನ್ನು ಶಿವನೊಂದಿಗೆ ಪೂಜಿಸಲಾಗುತ್ತದೆ. ಈ ದಿನದಂದು ಶಿವನನ್ನು ಪೂಜಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
ದೇವಾದಿದೇವ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ ಎಂದರೆ ಅದು ಶ್ರಾವಣ ಮಾಸ (Shravan Mas 2021), ಈ ವರ್ಷ ಶ್ರಾವಣ ಮಾಸ ಆಗಸ್ಟ್ 9 ಅಂದರೆ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಬಾರಿಯ ಶ್ರಾವಣ ಮಾಸದ ಮತ್ತೊಂದು ವಿಶೇಷತೆ ಎಂದರೆ, ಈ ಬಾರಿ ಮೊದಲ ದಿನವೇ ಸೋಮವಾರ (Shravan Somavar) ಬಂದಿದೆ. ಶ್ರಾವಣ ಮಾಸದಲ್ಲಿ ಶಿವನಿಗೆ ಪೂಜೆ (Shravana Puja) ಸಲ್ಲಿಸುವುದು ತುಂಬಾ ಲಾಭಕಾರಿ ಎಂದು ಹೇಳಲಾಗುತ್ತದೆ. ಈ ತಿಂಗಳಿನಲ್ಲಿ ಸಂಪೂರ್ಣ ಭಕ್ತಿ ಭಾವದಿಂದ ಶಿವ-ಪಾರ್ವತಿಯರಿಗೆ (Goddess Parvati) ಪೂಜೆ ಸಲ್ಲಿಸಿದರೆ, ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ.
Sudh Mahadev Temple - ಜಮ್ಮುವಿನಲ್ಲಿ ದೇವಾಧಿದೇವ ಮಹಾದೇವನ ಒಂದು ವಿಶಿಷ್ಟ ಮಂದಿರವಿದೆ . ಇದರ ಹೆಸರು ಓರ್ವ ರಾಕ್ಷೆಸನ ಹೆಸರನ್ನು ಆಧರಿಸಿದೆ. ಅಷ್ಟೇ ಅಲ್ಲ ಈ ದೇವಸ್ಥಾನದಲ್ಲಿ ಶಿವನ ತುಂಡಾದ ತ್ರಿಶೂಲದ (Broken Trishul) ಪೂಜೆ ನೆರವೇರಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಇತರೆ ನಿಗೂಢ ರಹಸ್ಯಗಳನ್ನು ತಿಳಿದುಕೊಳ್ಳಲು ಈ ಲೇಖನ ತಪ್ಪದೆ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.