Maha Shivratri Remedies: ಮಹಾ ಶಿವರಾತ್ರಿಯ ದಿನ ಈ ಸಣ್ಣ ಉಪಾಯ ಅನುಸರಿಸಿ ಮನೆಯ ವಾಸ್ತುದೋಷಕ್ಕೆ ಅಂತ್ಯ ಹಾಡಿ

Maha Shivratri Vastu Tips - ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಪಾರ್ವತಿ ದೇವಿಯನ್ನು ಶಿವನೊಂದಿಗೆ ಪೂಜಿಸಲಾಗುತ್ತದೆ. ಈ ದಿನದಂದು ಶಿವನನ್ನು ಪೂಜಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.  

Written by - Nitin Tabib | Last Updated : Feb 18, 2022, 07:14 PM IST
  • ಮನೆಯ ಹಲವಾರು ತೊಂದೆಗಳಿಗೆ ಮುಕ್ತಿ.
  • ಮನೆಯಲ್ಲಿ ಶಾಂತಿ ಸ್ಥಾಪನೆ.
  • ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.
Maha Shivratri Remedies: ಮಹಾ ಶಿವರಾತ್ರಿಯ ದಿನ ಈ ಸಣ್ಣ ಉಪಾಯ ಅನುಸರಿಸಿ ಮನೆಯ ವಾಸ್ತುದೋಷಕ್ಕೆ ಅಂತ್ಯ ಹಾಡಿ  title=
Maha Shivratri Remedies (File Photo)

Maha Shivratri Rededies 2022: ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಪಾರ್ವತಿ ದೇವಿಯನ್ನು (Goddess Parvati) ಶಿವನೊಂದಿಗೆ (Lord Shiva) ಪೂಜಿಸಲಾಗುತ್ತದೆ. ಈ ದಿನದಂದು ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಮಹಾಶಿವರಾತ್ರಿಯ ದಿನದಂದು, ಶಿವನನ್ನು ಮೆಚ್ಚಿಸಲು ಶಿವಲಿಂಗದ ಮೇಲೆ ಹಾಲು, ಶ್ರೀಗಂಧ, ಭಸ್ಮ, ಭಾಂಗ್, ಧತ್ತೂರಿ ಮುಂತಾದ ಅನೇಕ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಈ ವರ್ಷ ಮಹಾ ಶಿವರಾತ್ರಿ 2022 ಮಾರ್ಚ್ 1 ರಂದು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ದಿನ ಪೂಜೆ ಮಾಡುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಹೀಗಿರುವಾಗ, ಮಹಾಶಿವರಾತ್ರಿಯ ದಿನದಂದು, ವಾಸ್ತು ದೋಷಗಳನ್ನು (Vastu Tips) ನಿವಾರಿಸಲು ಯಾವ ಉಪಾಯಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಹಾ ಶಿವರಾತ್ರಿಯ ಉಪಾಯಗಳು 
ಮಹಾಶಿವರಾತ್ರಿಯ ದಿನ ಶಿವನಿಗೆ ಅಭಿಷೇಕ ಮಾಡಿ ಜಲಧಾರಿಯ ನೀರನ್ನು ಮನೆಗೆ ತನ್ನಿ. ಇದಾದ ನಂತರ 'ಓಂ ನಮಃ ಶಾಂಭಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ'. ಈ ಮಂತ್ರವನ್ನು ಪಠಿಸುತ್ತ ಆ ಪವಿತ್ರ ನೀರನ್ನು ಮನೆಯಾದ್ಯಂತ ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿ ನಾಶವಾಗಿ ಮನೆಯಲ್ಲಿ ಸುಖ-ಸಂತೋಷಗಳು ನೆಲೆಸುತ್ತವೆ.

>>  ಒಂದೇ ಮನೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ, ರೋಗ ಅಥವಾ ಇತರೆ ಸಮಸ್ಯೆಗಳಿದ್ದರೆ ಅದನ್ನು ನಿವಾರಿಸಲು ಮನೆಯ ಈಶಾನ್ಯ ದಿಕ್ಕಿನಲ್ಲಿ ರುದ್ರಾಭಿಷೇಕ ಮಾಡುವುದು ಶುಭ.

ಇದನ್ನೂ ಓದಿ-ಈ 7 ರಾಶಿಗಳ ಜನರ ಜೀವನದಲ್ಲಿ ಕೇತು ಸಂಕಷ್ಟ ಎದುರಾಗಲಿದೆ, ನಿಮ್ಮ ರಾಶಿ ಇದೆಯಾ ಪರೀಕ್ಷಿಸಿ

>> ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದರ ಪರಿಹಾರಕ್ಕಾಗಿ ಮನೆಯ ಪೂರ್ವ ಅಥವಾ ವಾಯುವ್ಯ ದಿಕ್ಕಿನಲ್ಲಿ ಬೆಲಪತ್ರಿ ಮರವನ್ನು ನೆಟ್ಟು ನೀರುಣಿಸಿ. ಹಾಗೆಯೇ ಮಹಾಶಿವರಾತ್ರಿಯ ದಿನ ಸಂಜೆ ಅದರ ಕೆಳಗೆ ತುಪ್ಪದ ದೀಪವನ್ನು ಬೆಳಗಿ. ಹೀಗೆ ಮಾಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ-Guru Ast: ಈ ರಾಶಿಯಲ್ಲಿ ದೇವಗುರು ಬೃಹಸ್ಪತಿ ಅಸ್ತ, ಫೆ.19ರಿಂದ ಈ ನಾಲ್ಕು ರಾಶಿಗಳ ಜನರ ಸಂಕಷ್ಟ ಹೆಚ್ಚಾಗಲಿದೆ

>> ಮನೆಯ ಕ್ಲೇಶವನ್ನು ಹೋಗಲಾಡಿಸಲು ಮಹಾಶಿವರಾತ್ರಿಯ ದಿನದಂದು ಮನೆಯ ಈಶಾನ್ಯ ದಿಕ್ಕಿನಲ್ಲಿ ಶಿವನ ಕುಟುಂಬದ ಚಿತ್ರವನ್ನು ಇರಿಸಿ. ಶಿವ, ತಾಯಿ ಪಾರ್ವತಿ, ಕಾರ್ತಿಕೇಯ (Kartikeya) ಮತ್ತು ಗಣೇಶನ (Ganesh) ಚಿತ್ರಗಳನ್ನು ಹಾಕುವ ಮೂಲಕ ಮನೆಯಲ್ಲಿ ಶಾಂತಿಯ ವಾತಾವರಣವನ್ನು ಕಾಪಾಡಬಹುದು. ಅಲ್ಲದೆ ಕುಟುಂಬದ ಸದಸ್ಯರ ಆಲೋಚನೆಗಳು ಕೂಡ ಇದರಿಂದ ಶುದ್ಧವಾಗಿರುತ್ತವೆ.

ಇದನ್ನೂ ಓದಿ-Rahu Gochar 2022 : ಈ 4 ರಾಶಿಯವರ ಭವಿಷ್ಯ ಬದಲಿಸುತ್ತಾನೆ ರಾಹು : ಇದರಲ್ಲಿ ನಿಮ್ಮ ರಾಶಿ ಇದೆಯಾ?

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News