ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಫ್ಲೂ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಅನೇಕ ರೋಗಿಗಳಲ್ಲಿ ಕಾಣಬರುವ ವಿವಿಧ ರೋಗಲಕ್ಷಣಗಳು ಜನರ ನಿದ್ದೆಗೆಡಿಸಿದೆ. ಶೀತ, ನೆಗಡಿ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಜನರನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಅದರಲ್ಲೂ ಕಿವಿ ನೋವಿಗೆ ಸಂಬಧಿಸಿದಂತಹ ಪ್ರಕರಣಗಳು ನಗರದಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಅದಲ್ಲದೆ ಈ ಸಮಸ್ಯೆಗಳಿಗೆ ಬಹುತೇಕ ಮಂದಿ ಮನೆಮದ್ದುಗಳ ಮೊರೆ ಹೋಗುತ್ತಾರೆ. ಅದರ ಪರಿಣಾಮವಾಗಿ ಸೋಂಕು ಉಲ್ಬಣಗೊಳ್ಳುವುದು, ಗಂಟಲಿಗೆ ಸಂಬಂಧಿತ ಸಮಸ್ಯೆಗಳು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿವೆ.
Ear Pain In Winter: ಚಳಿಗಾಲದಲ್ಲಿ ಅನೇಕ ಜನರು ಕಿವಿ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅನೇಕ ಜನರು ಈ ನೋವನ್ನು ನಿರ್ಲಕ್ಷಿಸುತ್ತಾರೆ. ಆದರೆ ಚಳಿಗಾಲದಲ್ಲಿ ನಿಮಗೆ ಆಗಾಗ್ಗೆ ಕಿವಿ ನೋವು ಇದ್ದರೆ, ಅದನ್ನು ನಿರ್ಲಕ್ಷಿಸಬಾರದು. ಕಿವಿಯಲ್ಲಿನ ಈ ನೋವು ದೊಡ್ಡ ಸಮಸ್ಯೆಯನ್ನು ಸೂಚಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.