ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ಅರಣ್ಯಗಳಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಟಾಡೆನಾ, ಪಸಾಡೆನಾ ಮತ್ತು ಪೆಸಿಫಿಕ್ ಪಾಲಿಸೇಡ್ಸ್‌ನ ಪ್ರದೇಶಗಳಿಗೆ ಹರಡಿಕೊಂಡಿತ್ತು. ಈ ಬೆಂಕಿಯಿಂದ 4,856 ಹೆಕ್ಟೇರ್ ಪ್ರದೇಶವು ಹಾನಿಗೊಳಗಾಗಿದೆ ಮತ್ತು ಸುಮಾರು 1100 ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ.
ವರದಿಗಳ ಪ್ರಕಾರ, ಕಾಡ್ಗಿಚ್ಚಿನಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮನೆಗಳು ಬೂದಿಯಾಗಿವೆ, ಇದರಲ್ಲಿ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳ ಮನೆಗಳು ಸೇರಿವೆ. ಪ್ರಸಿದ್ಧ ಹಾಲಿವುಡ್ ನಟ ವಿಲ್ ರೋಜರ್ಸ್ ಅವರ ಐತಿಹಾಸಿಕ ತೋಟದ ಮನೆ ಮತ್ತು 1929 ರಲ್ಲಿ ವೃತ್ತಪತ್ರಿಕೆ ಪ್ರಕಾಶಕ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ನಿರ್ಮಿಸಿದ ಟೋಪಾಂಗಾ ರಾಂಚ್ ಮೋಟೆಲ್ ಸೇರಿದಂತೆ ಹಲವಾರು ಐತಿಹಾಸಿಕ ಕಟ್ಟಡಗಳು ಬೆಂಕಿಯಲ್ಲಿ ನಾಶವಾದವು.
ಪಾಲಿಸೇಡ್ಸ್ ಕಾಡ್ಗಿಚ್ಚಿನ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಲಾಸ್ ಏಂಜಲೀಸ್ ನಗರವು ಪರ್ವತಗಳ ನಡುವೆ ನೆಲೆಸಿದ್ದು, ನಗರವು ಪೈನ್ ಕಾಡುಗಳಿಂದ ಆವೃತವಾಗಿದೆ. ಮಂಗಳವಾರ ಒಣಗಿದ ಪೈನ್ ಮರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಈ ವೇಳೆ ಜಿಂಕೆ ಮರಿ ಕಾಡ್ಗಿಚ್ಚಿಗೆ ಸಿಲುಕಿರುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇತ್ತೀಚಿಗೆ ವೈರಲ್ ಆಗಿರುವ ಈ ವೀಡಿಯೋ ನೋಡಿದರೆ ಕಾಡು ಪ್ರಾಣಿಗಳು ಬೆಂಕಿಯಿಂದ ಹೇಗೆ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತವೆ ಎಂಬುದು ಅರ್ಥವಾಗುತ್ತದೆ. ಕಾಡ್ಗಿಚ್ಚುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೇಗೆ ರಕ್ಷಿಸಿಕೊಳ್ಳುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.
Heartbreaking @NBCLA footage shows a deer running through Altadena as a wildfire burns over 10,000 acres. pic.twitter.com/kBMeoa38SP
— Jacob Wheeler (@JWheelertv) January 8, 2025
ಲಾಸ್ ಏಂಜಲೀಸ್‌ನ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಹೃದಯ ವಿದ್ರಾವಕವಾಗಿದೆ. ಕಾಡ್ಗಿಚ್ಚು10,000 ಎಕರೆಗೂ ಹೆಚ್ಚು ಸುಟ್ಟು ಭಸ್ಮವಾಗುತ್ತಿದ್ದಂತೆ ಜಿಂಕೆಯೊಂದು ಅಲ್ಟಾಡೆನಾ ಮೂಲಕ ಉದ್ರಿಕ್ತವಾಗಿ ಓಡುತ್ತಿರುವುದನ್ನು ಕಾಣಬಹುದು. ಕಾಡಿನ ಬೆಂಕಿಯಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು, ಎಳೆಯ ಜಿಂಕೆಯೊಂದು ರಸ್ತೆಯ ಮಧ್ಯದಲ್ಲಿ ಓಡಿ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಸುತ್ತಲೂ ನೋಡುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಶೇರ್ ಆದ ನಂತರ ವೈರಲ್ ಆಗಿದ್ದು, 3 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದು ಅಸಹಾಯಕತೆಯ ಭಾವನೆ ಎಂದು ಬಳಕೆದಾರರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್