Dr Raj Birthday : ಡಾ. ರಾಜ್ಕುಮಾರ್, ಕನ್ನಡಿಗರ ಹೃದಯ ಸಾಮ್ರಾಜ್ಯದ ಅಧಿಪತಿ. ಅಣ್ಣಾವ್ರು ದೈಹಿಕವಾಗಿ ಇಂದು ನಮ್ಮೊಂದಿಲ್ಲ ಅಷ್ಟೆ, ಅದ್ರೆ ಇಂದಿಗೂ ಅವರು ಕನ್ನಡ ಭಾಷೆಯ ಉಸಿರಾಗಿ ಕನ್ನಡಿಗರ ಮಧ್ಯ ನೆಲೆಸಿದ್ದಾರೆ.
ವರನಟ ಡಾ ರಾಜ್ಕುಮಾರ್ ಅವರು ಇಂದು ಬದುಕಿದ್ದರೆ ಅವರಿಗೆ 93 ವರ್ಷ ತುಂಬಿರುತ್ತಿತ್ತು,1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಆಗಿ ಜನಿಸಿದ ಅವರು ನಾಡಿನಾದ್ಯಂತೆ ರಾಜಕುಮಾರ್ ಎಂದೇ ಮನೆಮಾತಾಗಿದ್ದರು.
ಪ್ರತಿವರ್ಷ ಎಪ್ರಿಲ್ ತಿಂಗಳು ಬಂದರೆ ಸಾಕು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಕನ್ನಡ ಉತ್ಸವ ಎನ್ನುವಂತೆ ಆಚರಿಸುತ್ತಾರೆ.ಡಾ.ರಾಜಕುಮಾರ್ ಅವರು ಸುಮಾರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಸುಮಾರು ಶೇ 100 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದಾರೆ.ಈ ಸಂದರ್ಭದಲ್ಲಿ ಅವರ ಕುರಿತಾದ ಹಲವು ಅಪರೂಪದ ಸಂಗತಿಗಳನ್ನು ತಿಳಿಯುವ ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡೋಣ.
ಡಾ.ರಾಜ್ಕುಮಾರ್ ಅವರ ಮೊಮ್ಮಗ ಯುವ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನ್ನು ಅವರ ಅಜ್ಜ, ಡಾ.ರಾಜ್ಕುಮಾರ್ ಜನ್ಮದಿನದಂದು ಅನಾವರಣ ಮಾಡಿ' ನಿಮ್ಮ ಮುಂದೆ ಫಸ್ಟ್ ಲುಕ್ ಪೋಸ್ಟರ್ .. ಪ್ರೀತಿಸಿ , ಆಶೀರ್ವದಿಸಿ' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.