ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಪ್ರತಿಕ್ರಿಯಿಸಿದ್ದು ಕೋವಿಡ್ -19 ಪ್ರಕರಣಗಳಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇಂದು ದೇಶಾದ್ಯಂತ ನಡೆಯುತ್ತಿರುವ 'ಕೋವಿಡ್ ಡ್ರೈ ರನ್' ವೀಕ್ಷಣೆ ಮಾಡಲು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಡ್ರೈ ರನ್ ಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತರಿಗೆ ದೇಶದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದೆ. ನಾವು ವಿಶೇಷ ತಂಡವನ್ನು ಸಹ ರಚಿಸಿದ್ದೇವೆ, ಅದು ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಈ ಡ್ರೈ ರನ್ ನಲ್ಲಿ ಲಸಿಕೆ ನೀಡಲಾಗುವುದಿಲ್ಲ, ಜನರ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದರು.
"ಮುಂದಿನ ಜನವರಿ ತಿಂಗಳ ಯಾವುದೇ ವಾರದಲ್ಲಿ ಲಸಿಕೆ ಸಿಗುವಂತಾಗಬಹುದೆಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಜನವರಿಯಲ್ಲಿ ಭಾರತದ ಜನರು ತಮ್ಮ ಮೊದಲ ಕೊರೋನಾ ಲಸಿಕೆಯನ್ನು ಪಡೆಯಬಹುದು" ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಭಾರತೀಯ ವಿಜ್ಞಾನಿಗಳು ಕಾಗದ ಆಧಾರಿತ ಟೆಸ್ಟ್ ಸ್ಟ್ರಿಪ್ ಫೆಲುಡಾವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ಕರೋನಾವನ್ನು ಪರೀಕ್ಷಿಸಲು ತೆಗೆದುಕೊಳ್ಳುವ ಸಮಯ ಮತ್ತು ಬೆಲೆ ಎರಡೂ ಕಡಿಮೆಯಾಗಲಿದೆ.
ಪ್ರಸ್ತುತ ಇರುವ ಕೋವಿಡ್ -19 ಲಸಿಕೆಗಳು 1, 2 ಮತ್ತು 3 ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಭಾನುವಾರ (ಅಕ್ಟೋಬರ್ 11, 2020) ಮಾಹಿತಿ ನೀಡಿದ್ದಾರೆ, ಇದರ ಫಲಿತಾಂಶ ನಿರೀಕ್ಷೆಯಲ್ಲಿದೆ ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮದೊಂದಿನ ಸಂವಾದದ ಸಂದರ್ಭದಲ್ಲಿ ಹೇಳಿದರು.
ಇಲಾಖಾ ಸಭೆಗಳಲ್ಲಿ ತ್ವರಿತ ಆಹಾರ, ಕುಕೀಸ್, ಬಿಸ್ಕತ್ತು ಮತ್ತು ಅನಾರೋಗ್ಯಕರ ಆಹಾರ ವಿತರಣೆಯನ್ನು ಕೂಡಲೇ ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.