ನವದೆಹಲಿ: 24x7 Covid-19 Vaccination - ಕೋವಿಡ್ -19 ಲಸಿಕೆ ಡೋಸ್ ತೆಗೆದುಕೊಳ್ಳುವ ಸಮಯದ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ (Modi Government) ತೆಗೆದುಹಾಕಿದೆ. ವ್ಯಾಕ್ಸಿನೇಷನ್ ವೇಗ ಹೆಚ್ಚಿಸಲು ಈ ಹೆಜ್ಜೆಯನ್ನು ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ (Dr. Harsh Vardhan) ಹೇಳಿದ್ದಾರೆ. ಇದೀಗ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ 24 ಗಂಟೆಗಳ ಕಾಲ (24x7 Covid-19 Vaccination) ಲಸಿಕೆ ಪಡೆಯಬಹುದು ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ನಾಗರಿಕರ ಆರೋಗ್ಯ ಮತ್ತು ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
सरकार ने #vaccination की रफ़्तार बढ़ाने के लिए समय की बाध्यता समाप्त कर दी है। देश के नागरिक अब 24x7अपनी सुविधानुसार टीका लगवा सकते हैं।
PM श्री @narendramodi जी देश के नागरिकों के स्वास्थ्य के साथ-साथ उनके समय की कीमत बखूबी समझते हैं।#VaccineAppropriateBehavior pic.twitter.com/cpKVlXurvL
— Dr Harsh Vardhan (@drharshvardhan) March 3, 2021
ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಡಾ. ಹರ್ಷವರ್ಧನ್ ದೇಶಾದ್ಯಂತ ನಡೆಯುತ್ತಿರುವ ವ್ಯಾಕ್ಸಿನ್ ಮಹಾಅಭಿಯಾನಕ್ಕೆ ವೇಗ ನೀಡಲು ಸರ್ಕಾರ ವ್ಯಾಕ್ಸಿನ್ (Covid-19)ನೀಡುವಿಕೆಯ ಸಮಯದ ಮೇಲಿದ್ದ ನಿರ್ಬಂಧವನ್ನ್ತು ತೆಗೆದು ಹಾಕಿದೆ ಎಂದು ಹೇಳಿದ್ದಾರೆ. ಹೀಗಾಗಿ ಇನ್ಮುಂದೆ ದೇಶದ ನಾಗರಿಕರು 24x7 ತನ್ನ ಅನಕೂಲಕ್ಕೆ ತಕ್ಕಂತೆ ಲಸಿಕೆಯನ್ನು ಹಾಕಿಸಿಕೊಳ್ಳಬಹುದು. ಪ್ರಧಾನಿ ಮೋದಿ ಈ ದೇಶದ ನಾಗರಿಕರ ಆರೋಗ್ಯ ಹಾಗೂ ಅವರ ಸಮಯದ ಮೌಲ್ಯವನ್ನು ಅರಿತಿದ್ದಾರೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.
ಆಸ್ಪತ್ರೆಗಳು ಈ ಕುರಿತು ನಿರ್ಣಯ ಕೈಗೊಳ್ಳಬೇಕು
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಲಾಭಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಲು ಈ ಮೊದಲು ನಿಗದಿಪಡಿಸಲಾಗಿದ್ದ ಸಮಯಾವಧಿ ಅಂದರೆ, ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ ಸಮಯದ ನಿರ್ಬಂಧನೆಯನ್ನು ತೆಗೆದುಹಾಕಲಾಗಿದೆ ಹಾಗೂ ಇದೀಗ ಸಂಜೆ ಐದು ಗಂಟೆಯ ಬಳಿಕ ಲಸಿಕೆ (Corona Vaccine) ಅಭಿಯಾನವನ್ನು ಮುಂದುವರೆಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆಸ್ಪತ್ರೆಗಳು ನಿರ್ಧರಿಸಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- Covaxin IIIrd Phase Trials - ಇನ್ಯಾಕೆ ಭಯ, 3ನೇ ಹಂತದ ಟ್ರಯಲ್ ನಲ್ಲಿ ಶೇ.81 ರಷ್ಟು ಪಾಸಾದ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್
Co-WIN 2.0 ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಮಾತ್ರ ಸೀಮಿತವಾಗಿಲ್ಲ. ಅದರ ಮೇಲಿನ ನಿರ್ಬಂಧವನ್ನು ಕೂಡ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಸಂಜೆ ಐದರ ಬಳಿಕವೂ ಕೂಡ ಲಸಿಕೆಯ ಅಭಿಯಾನ ಮುಂದುವರೆಸುವ ಕ್ಷಮತೆ ಮತ್ತು ವ್ಯವಸ್ಥೆ ಆಸ್ಪತ್ರೆಯ ಬಳಿ ಇದ್ದರೆ , ಸಂಬಂಧಿತ ರಾಜ್ಯ ಸರ್ಕಾರದೊಂದಿಗೆ ಪರಾಮರ್ಶೆ ನಡೆಸಿ ಸಂಜೆ 5 ಗಂಟೆಯ ನಂತರವೂ ಕೂಡ ಲಸಿಕೆ ಅಭಿಯಾನ ಮುಂದುವರೆಸಬಹುದು ಮತ್ತು ಈ ಕುರಿತು ಎಲ್ಲ ರಾಜ್ಯ ಸರ್ಕಾರಗಳ ಜೊತೆಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ- SII ಹಾಗೂ Bharat Biotech ಕಂಪನಿಗಳನ್ನು ಗುರಿಯಾಗಿಸಿದ China Hackers, ಕಾರಣ ಇಲ್ಲಿದೆ
ಲಸಿಕಾಕರಣದ ಎರಡನೇ ಹಂತ ಮಾ.1 ರಿಂದ ಜಾರಿಯಲ್ಲಿದೆ
ಕೊವಿಡ್-19 ಲಸಿಕೆಯ ಎರಡನೇ ಡೋಸ್ ನೀಡುವಿಕೆಯನ್ನು ಫೆ.13 ರಿಂದ ಆರಂಭಿಸಲಾಗಿದೆ. ಮೊದಲ ಡೋಸ್ ನೀಡಿದವರಿಗೆ 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತಿದೆ. ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಎರಡನೇ ಡೋಸ್ ನೀಡುವ ಕಾರ್ಯ ಮಾ.2 ರಿಂದ ಆರಂಭಗೊಂಡಿದೆ. ಇನ್ನೊಂದೆಡೆ ಕೊವಿಡ್ -19 ಲಸಿಕೆಯ ಹಂತದ ಅಭಿಯಾನ ಅಂದರೆ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಈ ಮೊದಲೇ ಯಾವುದಾದರೊಂದು ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವ ಅಭಿಯಾನ ಮಾ.1 ರಿಂದ ಆರಂಭಗೊಂಡಿದೆ.
ಇದನ್ನೂ ಓದಿ- Health Insurance Policy ನವೀಕರಿಸಿದರೆ ಶೇ.100 ರಷ್ಟು ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.