ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಹಾಗೂ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುತ್ತಿದ್ದ ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆಯನ್ನು ಅಭಿಮನ್ಯು ಅಂಡ್ ಟೀಂ ಸೆರೆ ಹಿಡಿದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
ಮೈಸೂರಿಗೆ ಆಗಮಿಸಿರುವ ಆನೆಗಳಿಗೆ ಈಗ ರಾಜಾತಿಥ್ಯ. ಪ್ರತಿದಿನ ಪುಷ್ಕಳ ಆಹಾರ ನೀಡಿ ಆರೈಕೆ. ನಾಡಿನ ಜೊತೆ ಹೊಂದಾಣಿಕೆ ಮಾಡಿಸುವ ಕೆಲಸ ಶುರು. ಆನೆಗಳಿಗೆ ಹೊಂದಾಣಿಕೆ ಜೊತೆಗೆ ವಿಶೇಷ ಆಹಾರ. ದಸರಾ ಜಂಬೂ ಸವಾರಿ ಮುಗಿಯುವರೆಗೂ ನಡೆಯಲಿದೆ ಸತ್ಕಾರ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ಆನೆಗಳ ಮೊದಲ ತಂಡ ಈಗಾಗಲೇ ಅರಮನೆಗೆ ಬಂದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಗಜಪಡೆಗೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಈ ಬಾರಿಯೂ ಮಾಜಿ ಕ್ಯಾಪ್ಟನ್ ಅರ್ಜನನೇ ಬಲಶಾಲಿಯಾಗಿದ್ದಾನೆ. ಅರ್ಜುನ-5660 ಕೆಜಿ, ಕಾವೇರಿ-3100 ಕೆಜಿ, ಕ್ಯಾಪ್ಟನ್ ಅಭಿಮನ್ಯು-4770 ಕೆಜಿ, ಮಹೇಂದ್ರ-4250, ಲಕ್ಷ್ಮೀ 2920, ಚೈತ್ರ 3050, ಭೀಮ 3920, ಧನಂಜಯ 4810, ಗೋಪಾಲಸ್ವಾಮಿ 5140 ಕೆಜಿ ತೂಕ ಹೊಂದಿವೆ
ಸಚಿವ ಉಮೇಶ್ ಕತ್ತಿ ಸೇರಿ ಹಲವು ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಿ, ಗಜಪಡೆಯ ಮೊದಲ ತಂಡಕ್ಕೆ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿಕ್ಕಮಗಳೂರು ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡುತ್ತಿದ್ದು, ಆತಂಕ ಮನೆ ಮಾಡಿದೆ. ಸದ್ಯ ಒಂಟಿ ಸಲಗದ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಮೈಸೂರು ದಸರಾದಲ್ಲಿ ಭಾಗಿಯಾಗುವ ಅರ್ಜುನ, ಭೀಮಾನನ್ನು ಕರೆತರಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.