Rohit Sharma -Ravindra Jadeja Video, Cricket News in Kannada: ಟೂರ್ನಿಯ 37ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್’ಗೆ 326 ರನ್’ಗಳ ಬೃಹತ್ ಮೊತ್ತ ಕಲೆಹಾಕಿತು. ವಿರಾಟ್ ಕೊಹ್ಲಿ 121 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರು.
Ravindra Jadeja Statement about Team India Captaincy: ಅಂದಹಾಗೆ ಕಳೆದ ಪಂದ್ಯದಲ್ಲಿ ಪ್ರತಿಯೊಬ್ಬ ಭಾರತೀಯ ಆಟಗಾರನೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಒಂದು ಹೆಜ್ಜೆ ಮುಂದೆಯೇ ಇಟ್ಟು ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ.
Sunil Narine Retirement: ನವೆಂಬರ್ 5, ಭಾನುವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್’ನಲ್ಲಿ ಭಾರತ ತಂಡ ವಿಶ್ವಕಪ್ ಪಂದ್ಯವನ್ನು ಆಡುತ್ತಿದ್ದಾಗ, ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ವೆಸ್ಟ್ ಇಂಡೀಸ್ ದಂತಕಥೆ ನಿವೃತ್ತಿ ಘೋಷಿಸಿದ್ದರು. ಅವರು ಬೇರಾರು ಅಲ್ಲ, ಸುನಿಲ್ ನರೈನ್.
Keshav Maharaj-Lerisha Munsamy: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಉಪನಾಯಕ ಕೇಶವ್ ಮಹಾರಾಜ್ ಅವರ ಮೂಲ ಭಾರತ. ಇವರನ್ನು ಅತ್ಯುತ್ತಮ ಎಡಗೈ ಸ್ಪಿನ್ ಬೌಲರ್’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇನ್ನು ಇವರ ಪತ್ನಿ ಕೂಡ ಭಾರತ ಮೂಲದವರೇ ಆಗಿದ್ದು, ಖ್ಯಾತ ಕಥಕ್ ನೃತ್ಯಗಾರ್ತಿ.
Shoaib Akhtar Statement About Team India: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿಶ್ವಕಪ್ 2023ರ ಬಗ್ಗೆ ಬಹಳಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಭಾರತದ ಗೆಲುವಿನ ಬಗ್ಗೆಯೂ ಮಾತನಾಡಿದ ಅವರು, “ದಕ್ಷಿಣ ಆಫ್ರಿಕಾ ಪ್ರಯತ್ನಿಸಿದೆ. ಆದರೆ ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ.
KL Rahul Vice Captain, Cricket News in Kannada: ಏಕದಿನ ವಿಶ್ವಕಪ್’ನ ಉಳಿದ ಪಂದ್ಯಗಳಿಂದ ಪಾಂಡ್ಯ ಹೊರಗುಳಿದಿದ್ದಾರೆ ಎಂಬುದನ್ನು ಶನಿವಾರದಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಖಚಿತಪಡಿಸಿದೆ.
Rohit Sharma Statement, Cricket News in Kannada: ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್’ಗಳು ಆಫ್ರಿಕನ್ ಬೌಲರ್’ಗಳನ್ನು ನಿದ್ದೆಗೆಡಿಸಿದ್ದರು. ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್’ಗೆ ಅರ್ಧಶತಕದ ಜೊತೆಯಾಟ ನಡೆಸಿ 62 ರನ್ ಸೇರಿಸುವ ಮೂಲಕ ತಂಡಕ್ಕೆ ಭದ್ರವಾದ ಆರಂಭ ನೀಡಿದರು.
IND vs SA Match Highlights: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಶತಕ ಬಾರಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರ ಹೊರತಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿ, ಕೇವಲ 5 ವಿಕೆಟ್ ನಷ್ಟಕ್ಕೆ 326 ರನ್’ಗಳ ಬೃಹತ್ ಗುರಿ ನೀಡಿತ್ತು.
List of batsmen who have scored a century on their birthday: ಇಂದು ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ. ಇದೇ ದಿನದಂದು ವಿರಾಟ್ ಸೆಂಚುರಿ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ. 35ನೇ ವರ್ಷಕ್ಕೆ ಕಾಲಿಟ್ಟ ವಿರಾಟ್ ಶತಕ ಬಾರಿಸುವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿಹಂಚಿದ್ದಾರೆ.
Virat Kohli 49th ODI Century: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ಶತಕ ಸಿಡಿಸಿದ್ದಾರೆ. ಅದಲ್ಲದೆ, ಇಂದು ಕೊಹ್ಲಿ ಅವರ 35ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಾಧನೆಯ ಮೈಲಿಗಲ್ಲನ್ನು ತಲುಪಿ ಇತಿಹಾಸ ಬರೆದಿದ್ದಾರೆ.
rachin ravindra grandfather support: ಈ ಬಾರಿಯ ವಿಶ್ವಕಪ್’ನಲ್ಲಿ ಭಾರತ ಸಂಜಾತ ರಚಿನ್ ರವೀಂದ್ರ ಧೂಳೆಬ್ಬಿಸುತ್ತಿದ್ದಾರೆ. ಟೀಂ ಇಂಡಿಯಾದ ದಿಗ್ಗಜರಾದ ಸಚಿನ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನೊಂದಿಗೆ ಸಂಬಂಧ ಹೊಂದಿರುವ ರಚಿನ್, ಸಖತ್ ಆಗಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ಇವರು ಆಡುತ್ತಿರೋದು ನ್ಯೂಜಿಲೆಂಡ್ ತಂಡದ ಪರ.
World Cup 2023: ಇಂದು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್’ನಲ್ಲಿ ವಿರಾಟ್ ಕೊಹ್ಲಿ ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಕೊಹ್ಲಿ ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದರು. ಆದರೆ ಇದಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅವಕಾಶ ನೀಡಿಲ್ಲ.
Yuvraj Singh and MS Dhoni Friendship, cricket news in kannada: ಯುವರಾಜ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಧೋನಿ ಅವರೊಂದಿಗೆ ಕಳೆದ ಸುದೀರ್ಘ ಸಮಯದ ಬಗ್ಗೆಯೂ ವಿವರವಾಗಿ ಮಾತನಾಡಿದ್ದಾರೆ.
Virat Kohli Unbreakable Records in Kannada: ಭಾರತ ತಂಡದ ಏಸ್ ಬ್ಯಾಟ್ಸ್ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವರ್ಷಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ, ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ 49ನೇ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
Rachin Ravindra Girlfriend Premila Morar: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಪರ ಬ್ಯಾಟ್ ಬೀಸುತ್ತಿರುವ ಭಾರತೀಯ ಸಂಜಾತ ರಚಿನ್ ರವೀಂದ್ರ ಎಲ್ಲರಿಗೂ ಗೊತ್ತೇ ಇದೆ. ಅಷ್ಟೇ ಅಲ್ಲ, ಅವರ ಹೆಸರಿಗೆ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂಟಿದೆ ಎಂಬುದು ಸಖತ್ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ನಾವಿಂದು ರಚಿನ್ ಅವರ ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಲಿದ್ದೇವೆ.
World Cup 2023, Team India: ಸುಮಾರು 12 ವರ್ಷಗಳ ನಂತರ ಭಾರತ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲಲು ಸರ್ವಪ್ರಯತ್ನಗಳನ್ನು ಮಾಡುತ್ತಿದೆ. ಅಷ್ಟೇ ಅಲ್ಲದೆ, ಅದಕ್ಕೆ ತಕ್ಕಂತೆ ಉತ್ತಮ ಫಾರ್ಮ್ ಕಾಯ್ದುಕೊಂಡಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ.
Hardik Pandya out of World Cup: 2023ರ ವಿಶ್ವಕಪ್’ನಲ್ಲಿ ಸೆಮಿಫೈನಲ್ ತಲುಪಿದ ಭಾರತ ತಂಡಕ್ಕೆ ಭಾರೀ ಆಘಾತ. ಹಾರ್ದಿಕ್ ಪಾಂಡ್ಯ ಅವರ ಸ್ಥಾನಕ್ಕೆ ಪ್ರಸಿದ್ಧ್ ಕೃಷ್ಣ ಅವರನ್ನು ಬದಲಿಯಾಗಿ ಸೇರ್ಪಡೆಗೊಳಿಸಲಾಗಿದೆ. ಇವರು ಕರ್ನಾಟಕ ಮೂಲದವರಾಗಿದ್ದು, ಟೀಂ ಇಂಡಿಯಾ ಬಲ ತುಂಬಲಿದ್ದಾರೆ.
Sachin Tendulkar Income and Net worth: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿ 10 ವರ್ಷಗಳೇ ಕಳೆದಿದೆ. ಆದರೆ ಅವರ ಬ್ರಾಂಡ್ ಮೌಲ್ಯಕ್ಕೆ ಮಾತ್ರ ಕಿಂಚಿತ್ತೂ ಕುತ್ತು ಬಂದಿಲ್ಲ.
World Cup 2023, Pakistan vs New Zealand: ಅಕ್ಯುವೆದರ್ ಪ್ರಕಾರ, ನವೆಂಬರ್ 4 ರಂದು ಬೆಂಗಳೂರಿನ ಹವಾಮಾನವು ತುಂಬಾ ಸ್ಪಷ್ಟವಾಗಿದೆ. ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ 21 ಆಗಿರುತ್ತದೆ. ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆ. ಅಂದರೆ ಮಳೆಯ ಸಂಭವನೀಯತೆ ಕೇವಲ 3 ಪ್ರತಿಶತ ಇದೆ. ಆದರೆ, ಮಧ್ಯಾಹ್ನ 2ರ ನಂತರ ಮಳೆಯಾಗುವ ಸಾಧ್ಯತೆ ಶೇ.50ಕ್ಕಿಂತ ಹೆಚ್ಚಿದೆ.
Mohammad Amir statement on Team India: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅಷ್ಟೇ ಅಲ್ಲದೆ, ಇಂದು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಕಣಕ್ಕಿಳಿಯಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.