ಕೊಹ್ಲಿ-ಜಡೇಜಾ ಮಿಂಚಿನ ಆಟಕ್ಕೆ ನಲುಗಿದ ಹರಿಣಗಳು: 243 ರನ್’ಗಳ ಅಮೋಘ ಜಯಭೇರಿ ಬಾರಿಸಿದ ಟೀಂ ಇಂಡಿಯಾ

IND vs SA Match Highlights: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಶತಕ ಬಾರಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರ ಹೊರತಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿ, ಕೇವಲ 5 ವಿಕೆಟ್ ನಷ್ಟಕ್ಕೆ 326 ರನ್’ಗಳ ಬೃಹತ್ ಗುರಿ ನೀಡಿತ್ತು.

Written by - Bhavishya Shetty | Last Updated : Nov 5, 2023, 08:34 PM IST
    • ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಹಣಾಹಣಿ
    • ಹರಿಣಗಳನ್ನು ಮಣಿಸಿ ಗೆಲುವು ಸಾಧಿಸಿದ ಟೀಂ ಇಂಡಿಯಾ
    • 49ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಕೊಹ್ಲಿ-ಜಡೇಜಾ ಮಿಂಚಿನ ಆಟಕ್ಕೆ ನಲುಗಿದ ಹರಿಣಗಳು: 243 ರನ್’ಗಳ ಅಮೋಘ ಜಯಭೇರಿ ಬಾರಿಸಿದ ಟೀಂ ಇಂಡಿಯಾ title=
IND vs SA

IND vs SA Match Highlights: ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನಲ್ಲಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದಲ್ಲಿ ಹರಿಣಗಳನ್ನು ಮಣಿಸಿ, ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈಗಾಗಲೇ ಸೆಮಿಫೈನಲ್ ಹಂತ ತಲುಪಿರುವ ಭಾರತ ಆಡಿರುವ 8 ಪಂದ್ಯಗಳ್ಲಿ ಒಂದೂ ಸೋಲು ಕಂಡಿಲ್ಲ. ಸೋಲೇ ಇಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಯಾವ್ಯಾವ ಆಟಗಾರರು ತಮ್ಮ ಹುಟ್ಟುಹಬ್ಬದಂದು ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ ಗೊತ್ತಾ?

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಶತಕ ಬಾರಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರ ಹೊರತಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿ, ಕೇವಲ 5 ವಿಕೆಟ್ ನಷ್ಟಕ್ಕೆ 326 ರನ್’ಗಳ ಬೃಹತ್ ಗುರಿ ನೀಡಿತ್ತು.

ನಾಯಕ ರೋಹಿತ್ ಶರ್ಮಾ 40 ರನ್, ಶುಭ್ಮನ್ ಗಿಲ್ 23, ವಿರಾಟ್ ಕೊಹ್ಲಿ 101 (ಅಜೇಯ), ಶ್ರೇಯಸ್ ಅಯ್ಯರ್ 77, ಕೆ ಎಲ್ ರಾಹುಲ್ 8, ಸೂರ್ಯ ಕುಮಾರ್ ಯಾದವ್ 22 ಮತ್ತು ರವೀಂದ್ರ ಜಡೇಜಾ 29 ರನ್’ಗಳ ಕೊಡುಗೆ ನೀಡಿದ್ದರು. ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ಮಾಡಿದ ಲುಂಗಿ ಎನ್ಗಿಡಿ, ಜಾನ್ಸೆನ್, ರಬಾಡ, ಕೇಶವ್ ಮಹಾರಾಜ್ ಮತ್ತು ಶಂಸಿ ತಲಾ ಒಂದು ವಿಕೆಟ್ ಪಡೆದರು.

ಇನ್ನು ಭಾರತದ ಬೌಲಿಂಗ್ ಸಖತ್ ಮೋಡಿ ಮಾಡಿದ್ದು, ಸೌತ್ ಆಫ್ರಿಕಾ ತಂಡದ ವಿಕೆಟ್’ಗಳನ್ನು ಬ್ಯಾಕ್ ಟು ಬ್ಯಾಕ್ ಕಬಳಿಸಿದ್ದಾರೆ. ಇದುವರೆಗೆ ವಿಶ್ವಕಪ್’ನಲ್ಲಿ ಮೋಡಿ ಮಾಡಿದ್ದ ಕ್ವಿಂಟನ್ ಡಿ ಕಾಕ್ ಅವರನ್ನು ಕೇವಲ 5 ರನ್’ಗೆ ಔಟ್ ಮಾಡಿ ಪೆವಿಲಿಯನ್’ಗೆ ಮರಳುವಂತೆ ಮಾಡಿದ್ದು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಹುಟ್ಟುಹಬ್ಬದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಸರಿಗಟ್ಟಿದ ‘ಕಿಂಗ್’ ವಿರಾಟ್

ಮೊಹಮ್ಮದ್ ಸಿರಾಜ್ 1 , ರವೀಂದ್ರ ಜಡೇಜಾ 5, ಕುಲ್ದೀಪ್ ಯಾದವ್ 2 ಮತ್ತು ಮೊಹಮ್ಮದ್ ಶಮಿ 2 ವಿಕೆಟ್ ಕಿತ್ತು ಕಮಾಲ್ ಮಾಡಿದ್ದಾರೆ. ಒಟ್ಟಾರೆ ಟೀಂ ಇಂಡಿಯಾ ನೀಡಿದ್ದ 326 ರನ್’ಗಳ ಗುರಿ ಬೆನ್ನತ್ತುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ತಂಡ ಕೇವಲ 83 ರನ್’ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News