ಕೋವಿಶೀಲ್ಡ್ ಮತ್ತು ಕೋವಾಕ್ಸಿನ್, ಕೊರೊನಾ ಲಸಿಕೆಗಳ ಬೆಲೆ ಶೀಘ್ರದಲ್ಲೇ ಭಾರತದ ಔಷಧ ನಿಯಂತ್ರಕದಿಂದ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ, ಪ್ರತಿ ಡೋಸ್ಗೆ ರೂ 275 ಮತ್ತು ಹೆಚ್ಚುವರಿ ಸೇವಾ ಶುಲ್ಕ ರೂ 150 ಕ್ಕೆ ಮಿತಿಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ 2-3 ದಿನಗಳಿಂದ ಮಕ್ಕಳು ಶೀತ, ಕೆಮ್ಮು, ಜ್ವರ, ತಲೆನೋ ವು ಮುಂತಾದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಆ ಪರೀಕ್ಷೆಯ ಫಲಿತಾಂಶ ಬಂದಿದ್ದು 54 ಮಕ್ಕಳಿಗೆ ಮಹಾ ಮಾರಿ ವಕ್ಕರಿಸಿರುವುದು ದೃಢಪಟ್ಟಿದೆ.
ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ತನ್ನ ಬುಲೆಟಿನ್ನಲ್ಲಿ ಕೋವಿಡ್ -19 ರ ಓಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ, ಹೊಸ ಪ್ರಕರಣಗಳು ಘಾತೀಯವಾಗಿ ಹೆಚ್ಚುತ್ತಿರುವ ಬಹು ಮೆಟ್ರೋಗಳಲ್ಲಿ ಇದು ಪ್ರಬಲವಾಗಿದೆ ಎಂದು ಹೇಳಿದೆ.
ಕರೋನವೈರಸ್ ಹರಡುವಿಕೆಯ ಪ್ರಮಾಣವನ್ನು ಸೂಚಿಸುವ ಭಾರತದ ಆರ್-ಮೌಲ್ಯವು ಜನವರಿ 14-21 ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ ಮತ್ತು ಮುಂದಿನ ಹದಿನೈದು ದಿನಗಳಲ್ಲಿ ಸೋಂಕಿನ ಮೂರನೇ ತರಂಗದ ರಾಷ್ಟ್ರೀಯ ಉತ್ತುಂಗಕ್ಕೆ ತಲುಪುವನಿರೀಕ್ಷೆಯಿದೆ ಎಂದು ಐಐಟಿ ಮದ್ರಾಸ್ ನ ಅಧ್ಯಯನ ತಿಳಿಸಿದೆ.
ನಿಮ್ಮ ಫೋನ್ ನಲ್ಲಿ ಕರೋನವೈರಸ್ ಸೂಕ್ಷ್ಮಾಣುಗಳು ಇದೆ ಎಂಬುವುದರ ಬಗ್ಗೆ ಮಾಹಿತಿ ಇದೆಯಾ? ಹೌದು ನಿಮ್ಮ ಬಳಿ ಇರುವ ಸ್ಮಾರ್ಟ್ಫೋನ್ ನಿಂದ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಲು ನೀವು ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ...
ಆಯುರ್ವೇದದ ಪ್ರಕಾರ ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಇದು ಸೋಂಕಿಗೆ ಒಳಗಾಗಿದ್ದರೂ ಸಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Ayurveda Tips - ಆಯುರ್ವೇದದ ಪ್ರಕಾರ, ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಇದು ಸೋಂಕಿಗೆ ಒಳಗಾಗಿದ್ದರೂ ಸಹ ವೈರಸ್ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ.
Corona In Children: ಕರೋನಾ ಸೋಂಕಿನ ಬಗ್ಗೆ ಒಂದೇ ಒಂದು ನಿರ್ಲಕ್ಷ್ಯ ಕೂಡ ದೊಡ್ಡ ತೊಂದರೆಗೆ ಕಾರಣವಾಗಬಹುದು. ಈ ನಿರ್ಲಕ್ಷ್ಯವು ಮಕ್ಕಳಿಗೆ ಸಂಬಂಧಿಸಿದ್ದರೆ, ನಂತರ ವಿಷಯವು ಇನ್ನಷ್ಟು ಗಂಭೀರವಾಗುತ್ತದೆ.
ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಚಿತ್ರಮಂದಿರಗಳ ಮಾಲೀಕರು, ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದು, ಇಂದಿನಿಂದ ಮೈಸೂರಿನಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದಾರೆ.
ಕೊರೊನಾ ಉಲ್ಭಣಿಸುತ್ತಿದ್ದರೂ ರೋಗಿಗಳ ಆರೈಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ರಾಜ್ಯ ಬಿಜೆಪಿ ಸರ್ಕಾರ, ಬೆಚ್ಚಗೆ ಮಲಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತು ಸೋಂಕಿನ ತೀವೃತೆ ಕಡಿಮೆ ಇರುವುದರಿಂದ ಬಹಳಷ್ಟು ಜನ ಸೋಂಕಿತರು ಹೋಂ ಐಸೋಲೇಷನ್ ಆಗುತ್ತಿದ್ದಾರೆ.ರಾಜ್ಯಸರ್ಕಾರದ ಆದೇಶಗಳ ಪ್ರಕಾರ ಹೋಂ ಐಸೋಲೇಷನ್ ಅಡಿಯಲ್ಲಿ ರೋಗಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ತಂಡವನ್ನು ರಚಿಸಲಾಗಿದೆ.
ಕರೋನಾದ ಹೊಸ ರೂಪಾಂತರದ ಮೊದಲ ಲಕ್ಷಣಗಳು ರೋಗಿಯ ಕಣ್ಣುಗಳಿಂದ ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು ಎನ್ನುತ್ತಾರೆ ವೈದ್ಯರು. ಹೊಸ ರೂಪಾಂತರದ ಸೋಂಕಿನಲ್ಲಿ ಕೆಮ್ಮಿನಿಂದ ಅತಿಸಾರದವರೆಗಿನ ಎಲ್ಲಾ ರೋಗಲಕ್ಷಣಗಳು ಕಂಡುಬರುತ್ತವೆ.
Corona Vaccine: ಕೊರೊನಾ ವೈರಸ್ ವಿರುದ್ಧ ತಯಾರಿಸಲಾದ Covaxin ಮತ್ತು Covishield ಅನ್ನು ನಿಮ್ಮ ಸ್ಥಳೀಯ ಮೆಡಿಕಲ್ ಸ್ಟೋರ್ನಲ್ಲಿ ಶೀಘ್ರದಲ್ಲೇ ಮಾರಾಟವಾಗುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೋವಿಡ್-19 ಕುರಿತಾಗಿ ವಿವಿಧ ಮಾಧ್ಯಮಗಳ ಮೂಲಕ ಕೆಲವು ವೈಧ್ಯಕೀಯ ಪರಿಣಿತರು ಹಾಗೂ ವೈದ್ಯರು ಸಾರ್ವಜನಿಕರಿಗೆ ಅಪೂರ್ಣವಾದ, ತಪ್ಪು ಮತ್ತು ಆಧಾರರಹಿತ ಮಾಹಿತಿಗಳನ್ನು ನೀಡಿದರೆ ಪ್ರಕರಣ ದಾಖಲಾಯಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.